Kannada NewsKarnataka NewsLatest

*ಬಕೆಟ್‌ನಲ್ಲಿ ಬಿದ್ದು ಕಂದಮ್ಮ ಸಾವು*

ಪ್ರಗತಿವಾಹಿನಿ ಸುದ್ದಿ: ಮನೆಯಲ್ಲಿ ಬಕೆಟ್‌ನಲ್ಲಿ ಬಿದ್ದು 8 ತಿಂಗಳ ಕಂದಮ್ಮ ಸಾವನ್ನಪ್ಪಿರುವ ದುರ್ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ನಗರದ ವಲ್ಲಭಭಾಯಿ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, ಪುಷ್ಪಾಲೋಚನ ಸಾವನ್ನಪ್ಪಿದ ಪುಟ್ಟ ಮಗು. ಪುಷ್ಪಾಲೋಚನ ಗಿರೀಶ್-ಚೈತ್ರಾ ಮೂರನೇ ಪುತ್ರಿಯಾಗಿದ್ದಳು. ಗಿರೀಶ್ ಚಿನ್ನ-ಬೆಳ್ಳಿ ಕೆಲಸ ಮಾಡುತ್ತಿದ್ದು, ದಂಪತಿಗೆ ಮೂವರು ಹೆಣ್ಣುಮಕ್ಕಳು. ಈ ಪೈಕಿ ಪುಷ್ಪಾಲೋಚನ ಮೂರನೆಯವಳು. 

ಚೈತ್ರಾ ಬಕೆಟ್‌ನಲ್ಲಿ ಬಟ್ಟೆ ನೆನೆಯಲು ಹಾಕಿ ಸ್ನಾನಕ್ಕೆ ತೆರಳಿದ್ದರು. ಈ ವೇಳೆ ತೆವಳುತ್ತಾ ಬಂದ ಕಂದಮ್ಮ ಬಕೆಟ್‌ನಲ್ಲಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. 

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೆನ್‌ಷನ್ ಮೊಹಲ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button