ಚಿಕ್ಕೋಡಿಯಲ್ಲಿ ಕೊಚ್ಚಿ ಹೋದ ಯುವಕ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ –
ಕೃಷ್ಣಾ ನದಿ ನೀರಿನ ಮಟ್ಟ ಕ್ಷಣ ಕ್ಷಣಕ್ಕೂ ಏರುತ್ತಿದ್ದು, ನದಿ ತೀರದಲ್ಲಿ ಆತಂಕ ಹೆಚ್ಚುತ್ತಿದೆ.
ಮಾರುತಿ ಜಾಧವ ಎನ್ನುವ ಯುವಕ ಇಂದು ಬೆಳಗ್ಗೆ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಇದರಿಂದಾಗಿ ಕೃಷ್ಣಾ ನದಿ ಪ್ರವಾಹ ಮೊದಲ ಬಲಿ ಪಡೆದಿದೆ.
ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಶಾಲೆಗಳಿಗೆ 3 ದಿನ ರಜೆ ಘೋಷಿಸಲಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರವಾಹಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ಆರಂಭಿಸಿದ್ದಾರೆ. ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೊರಟಿರುವ ಅವರು, ಬಳ್ಳಾರಿಗೆ ಬಂದಿ ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ವೈಮಾನಿಕ ಸಮೀಕ್ಷೆ ನಡೆಸುವರು. ರಾಯಚೂರು, ಬಾಗಲಕೋಟಿ, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳ ಸಮೀಕ್ಷೆ ನಡೆಸುವ ಯಡಿಯೂರಪ್ಪ, ವಿಜಯಪುರದಲ್ಲಿ ಅಧಿಕಾರಿಗಳ ಸಭೆ ನಡೆಸುವರು.
ಅಥಣಿಗೆ ಮಧ್ಯಾಹ್ನ ಆಗಮಿಸುವ ಅವರು, ಸತ್ತಿ ಮತ್ತು ನದೇಶ್ವರಗಳಿಗೆ ಭೇಟಿ ನೀಡಿ ಪ್ರವಾಹ ಸ್ಥಿತಿ ಪರಿಶೀಲಿಸುವರು.
ಇದನ್ನೂ ಓದಿ – ಅವಶ್ಯ ಬಿದ್ದಲ್ಲಿ ಪ್ರವಾಹ ಪ್ರದೇಶಕ್ಕೆ ಸೇನಾ ನೆರವು
ಪ್ರವಾಹ ಭೀತಿ: ಜನ, ಜಾನುವಾರಗಳ ಸ್ಥಳಾಂತರಕ್ಕೆ ಸೂಚನೆ
ಪ್ರವಾಹ ಮುನ್ನೆಚ್ಚರಿಕೆ ಕ್ರಮ; ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ
ಮತ್ತೆ ಬದಲಾಯ್ತು ಟಿಪಿ; ಸಿಎಂ ಬರ್ತಾರಂತೆ ಅಥಣಿಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ