ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಫೋಟೋ ಶೂಟ್ ವಿಚಾರವಾಗಿ ಆರಂಭವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ.
ಪ್ರೊಫೆಶನಲ್ ಫೋಟೋಗ್ರಾಫರ್ ಗಳಂತೆ ಅದ್ಭುತವಾಗಿ ಕ್ಯಾಮರಾದಲ್ಲಿ ಫೋಟೋ ಸೆರೆಹಿಡಿಯುವುದನ್ನು ಹವ್ಯಾಸ ಮಾಡಿಕೊಂಡಿದ್ದ ಐಟಿಐ ವಿದ್ಯಾರ್ಥಿಯನ್ನು ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸೂರ್ಯ ಮೃತ ಯುವಕ. ದೊಡ್ಡಬಳ್ಳಾಪುರದ ನಗರ ಕಚೇರಿ ಪಾಳ್ಯ ನಿವಾಸಿ. ಬೆಂಗಳೂರಿನ ದಾಬಸ್ ಪೇಟೆ ರಸ್ತೆಯಲ್ಲಿನ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್ ಗೆ ಫೋಟೋ ಶೂಟ್ ಗಾಗಿ ಬಂದಿದ್ದ. ರೆಸ್ಟೋರೆಂಟ್ ನಲ್ಲಿ ಕಲರ್ ಫುಲ್ ಆಗಿ ಕಾಣುವ ಚಿತ್ರಗಳ ನಡುವೆ ಸ್ನೇಹಿತರ ಫೋಟೋ ತೆಗೆದಿದ್ದಾನೆ. ಈ ವೇಳೆ ಕೆಲ ಪುಂಡರು ಕ್ಯಾಮರಾದಲ್ಲಿ ತೆಗೆದ ತಮ್ಮ ಫೋಟೋಗಳನ್ನು ವಾಟ್ಸಾಪ್ ಗೆ ಹಾಕುವಂತೆ ಒತ್ತಾಯಿಸಿದ್ದಾರೆ.
ಕ್ಯಾಮರಾ ಫೋಟೋ ಮೊಬೈಲ್ ಗೆ ಕಳುಹಿಸಲು ಬರುವುದಿಲ್ಲ ಎಂದು ಸೂರ್ಯ ಹೇಳಿದ್ದಾನೆ. ಈ ವೇಳೆ ಕ್ಯಾಮರಾ ಕಿತ್ತುಕೊಂಡು ಕಿರಿಕ್ ಮಾಡಿದ್ದಾರೆ. ಸೂರ್ಯನ ಎದೆ ಭಾಗಕ್ಕೆ ಹರಿತವಾದ ಆಯುಧಗಳಿಂದ ಚುಚ್ಚಿದ್ದಾರೆ. ತೀವ್ರ ರಕ್ತ ಸ್ರಾವದಿಂದಯುವಕ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ತಕ್ಷಣ ಯುವಕನನ್ನು ದಾಬಸ್ ಪೇಟೆ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾನೆ.
ಘಟನೆ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ