ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾಗನೂರು ರುದ್ರಾಕ್ಷಿ ಮಠದ ಶ್ರೀ.ಸಿದ್ಧರಾಮೇಶ್ವರ ಪ್ರಾಥಮಿಕ ಹಾಗೂ
ಪ್ರೌಢಶಾಲೆ ಸ್ಥಾಪನೆಗೊಂಡು ೫೦ ವರ್ಷಗಳು ಸಂದಿವೆ, ಸುವರ್ಣ ಸಂಭ್ರಮದ ಈ ಸಂದರ್ಭದಲ್ಲಿ
ಶ್ರೀ.ಸಿದ್ಧರಾಮೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸುವರ್ಣ ಮಹೋತ್ಸವವನ್ನು
ಗುರುವಾರ ೭ ಡಿಸೆಂಬರ್ ೨೦೨೩ ರಂದು ಸಾ. ೬ ಗಂಟೆಗೆ ಆಚರಿಸಲಾಗುತ್ತಿದೆ ಎಂದು ಸಂಸ್ಥೆಯ
ಕಾರ್ಯದರ್ಶಿ ಶ್ರೀ.ಕೆ.ಬಿ.ಹಿರೇಮಠ ಹೇಳಿದರು.
ಪತ್ರಿಕಾ ಪರಿಷತ್ತಿನಲ್ಲಿಂದು ಮಾತನಾಡಿದ ಅವರು “ನಾಗನೂರು ಸ್ವಾಮಿಗಳು “ ಎಂದೇ
ಖ್ಯಾತರಾದ ಕಾಯಕಯೋಗಿ, ಮಹಾಪ್ರಸಾದಿ ಪೂಜ್ಯಶ್ರೀ ಡಾ. ಶಿವಬಸವ ಮಹಾಸ್ವಾಮಿಗಳು ೧೯೬೯
ರಲ್ಲಿ ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಇದಾಗಿದೆ. ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು
ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು, ಮೂರುಸಾವಿರಮಠ ಹುಬ್ಬಳ್ಳಿ ಹಾಗು
ಶ್ರೀ ಮನ್ಮಹಾರಾಜ ನಿರಂಜನ ಜಗದ್ಗುರು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಗದಗ
ಇವರುಗಳ ದಿವ್ಯಸಾನಿಧ್ಯದಲ್ಲಿ ಜರುಗುವ ಸುವರ್ಣ ಮಹೋತ್ಸವ ಸಮಾರಂಭವನ್ನು ನಿವೃತ್ತ
ಆಯ್.ಎ.ಎಸ್. ಅಧಿಕಾರಿಗಳಾದ ಡಾ. ಎಸ್. ಎಮ್. ಜಾಮದಾರ ಅವರು ಉದ್ಘಾಟಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ನಾಗನೂರು ರುದ್ರಾಕ್ಷಿಮಠದ ಪೂಜ್ಯ ಶ್ರೀ ಅಲ್ಲಮಪ್ರಭು
ಮಹಾಸ್ವಾಮಿಗಳು, ನೇತೃತ್ವವನ್ನು ಹಂದಿಗುಂದ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮಿಗಳು,
ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮಿಗಳು ಹಾಗು ಪಿ ಜ
ಹುಣಶ್ಯಾಳದ ಪೂಜ್ಯಶ್ರೀ ನಿಜಗುಣ ದೇವರು ವಹಿಸಲಿದ್ದಾರೆ ಎಂದವರು ವಿವರಿಸಿದರು.
ಶ್ರೀ ಸಿದ್ಧರಾಮೇಶ್ವರ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿ ವಿವಿಧ
ಕ್ಷೇತ್ರಗಳಲ್ಲಿ ಅಪ್ರತಿಮ ಸಾಧನೆಗೈದ ಸಾಧಕರನ್ನು ಈ ಸಮಾರಂಭದಲ್ಲಿ ಗೌರವಿಸಲಾಗುವುದು,
ಇದೇ ಸಂದರ್ಭದಲ್ಲಿ ಸ್ಮರಣ ಸಂಚಿಕೆಯೊಂದನ್ನು ಹೊರತರಲಾಗುವುದು ಎಂದವರು ಹೇಳಿದರು.
ಶ್ರೀ ರುದ್ರಾಕ್ಷಿಮಠ ನಾಗನೂರು ಬೆಳಗಾವಿ ಇವರು ೧೯೩೨ ರಲ್ಲಿ, ಬೈಲಹೊಂಗಲ ತಾಲೂಕಿನ
ನಾಗನೂರು ಶ್ರೀ ರುದ್ರಾಕ್ಷಿಮಠದಿಂದ ಬೆಳಗಾವಿಗೆ ಆಗಮಿಸಿ, ಗ್ರಾಮಾಂತರ ಪ್ರದೇಶದ ಬಡ
ಈಗ ಪ್ರತಿಭಾವಂತ ವಿದ್ಯಾರ್ಥಿಗಳು ವಿದ್ಯೆ ಕಲಿಯಲು ಬೆಳಗಾವಿಯಲ್ಲಿ ಉಚಿತ ಪ್ರಸಾದ
ನಿಲಯ ಸ್ಥಾಪಿಸಿ, ಶಿಕ್ಷಣ ಸಂಸ್ಥೆಗಳನ್ನು, ಆರಂಭಿಸಿ, ಅಕ್ಷರ ದಾಸೋಹ, ಅನ್ನದಾಸೋಹ
ಕರುಣಿಸಿದ ತ್ರಿವಿಧ ದಾಸೋಹಿಗಳು, ಶ್ರೀಗಳು, ಸ್ಥಾಪಿಸಿದ ಶ್ರೀ ಸಿದ್ಧರಾಮೇಶ್ವರ
ಎಜ್ಯುಕೇಶನÀ ಟ್ರಸ್ಟ್ನಲ್ಲಿ ೧೧ ಸಮೂಹ ಸಂಸ್ಥೆಗಳಿಗೆ, ಇದರಲ್ಲಿ ಶ್ರೀ
ಸಿದ್ಧರಾಮೇಶ್ವರ ಪ್ರೌಢ ಶಾಲೆ ಮತ್ತು ಪ್ರಾಥಮಿಕ ಶಾಲೆಗಳು ಆರಂಭಗೊಂಡ (೧೯೬೯)
ಪ್ರಸ್ತುತ ವರ್ಷಕ್ಕೆ ೫೦ ವರ್ಷಗಳು ಕಳೆದಿವೆ. ಪ್ರಸ್ತುತ ೨೦೨೩ ರ ಡಿಸೆಂಬರ್ ೦೭ ರಂದು
ಸುವರ್ಣ ಮಹೋತ್ಸವ ಆಚರಿಸುತ್ತಿರುವದು ಹೆಮ್ಮೆಯ ಸಂಗತಿ. ಇಲ್ಲಿ ವಿದ್ಯೆ
ವಿದ್ಯಾರ್ಥಿಗಳು ಮಠಾಧೀಶರು, ವೈದ್ಯರು, ಅಧಿಕಾರಿಗಳು,ಪ್ರಾಧ್ಯಾಪಕರು, ರಾಜಕಾರಣಿಗಳು,
ವಾಣಿಜ್ಯೋದ್ಯಮಿಗಳು, ಹಾಗೂ ಪ್ರಗತಿ ಪರ ರೈತರಾಗಿ ತಮ್ಮ ವಿವಿಧ ಕ್ಷೇತ್ರಗಳ ಮೂಲಕ
ನಾಡಿಗೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಕೆ.ಬಿ.ಹಿರೇಮಠ ಹೇಳಿದರು.
ಪೂಜ್ಯಶ್ರೀ ಡಾ. ಶಿವಬಸವಗಳವರ ಉತ್ತರಾಧಿಕಾರಿಗಳಾದ ಲಿಂಗಕ್ಕೆ ಪೂಜ್ಯಶ್ರೀ ಪ್ರಭು
ಮಹಾಸ್ವಾಮೀಜಿಯವರು ಶ್ರೀಗಳವರ ಇಚ್ಛಾಶಕ್ತಿಯನ್ನು ಕ್ರಿಯಾಶಕ್ತಿಯನ್ನಾಗಿಸಿ
ಬಲಪಡಿಸಿದರು. ನಂತರ ಬಂದ ಶ್ರೀ ಜಗದ್ಗುರು ಡಾ. ತೋಂಟದ ಸಿದ್ಧರಾಮ
ಮಹಾಸ್ವಾಮಿಗಳು ಮತ್ತು ಪರಮಪೂಜ್ಯ ಶ್ರೀ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳವರು ಸಂಸ್ಥೆಯ
ಅಂಗಸಂಸ್ಥೆಗಳ ಜೊತೆಗೆ ಈ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ವಿಸ್ತರಿಸಿ
ಬೆಳೆಸಿದ್ದಾರೆ. ನೂತನ ಸುಸಜ್ಜಿತ ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ನುರಿತ ಅನುಭವಿ,
ವಿಶೇಷ ಅರ್ಹತೆಯುಳ್ಳ ಶಿಕ್ಷಕ ಸಿಬ್ಬಂದಿಯನ್ನು ಹೊಂದಿರುವ ಶ್ರೀ ಸಿದ್ಧರಾಮೇಶ್ವರ
ಪ್ರಾಥಮಿಕ, ಪ್ರೌಢ ಶಾಲೆಗೆ ಹಾಗೂ ಪ್ರಾಥಮಿಕ ಶಾಲೆಗಳು ಈಗ ಅತ್ಯುತ್ತಮ ಗುಣಮಟ್ಟದ
ಶಿಕ್ಷಣವನ್ನು ನೀಡುತ್ತಿವೆ.
ಲಕ್ಷಾಂತರ ಜನರ ಬದುಕಿಗೆ ದಾರಿದೀಪವಾದ ಈ ಶಾಲೆಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಪೂಜ್ಯ ಶ್ರೀಗಳು ಪ್ರಸಾದ ನಿಲಯದ ಹಳೆಯ ವಿದ್ಯಾರ್ಥಿಗಳ
ಸಂಘ ಹಾಗೂ ವಿವಿಧ ದಾನಿಗಳು ನಗದು ರೂಪದ ಶಿಷ್ಯವೇತನ ನೀಡಿ ಮಾರ್ಗದರ್ಶನ
ಮಾಡುತ್ತಲಿದ್ದಾರೆ. ಭವಿಷ್ಯತ್ತಿನ ನೇತಾರರನ್ನು ರೂಪಿಸುವ ಈ ಶಾಲೆಯ ಸುವರ್ಣ,
ಮಹೋತ್ಸವ ಡಿಸೆಂಬರ ೦೭ ರಂದು ನಡೆಯವ ಸಮಾರಂಭಕ್ಕೆ ನಾಡಿನ ಹೆಸರಾಂತ ಮಠಾಧೀಶರು,
ಜಗದ್ಗುರುಗಳು, ಜ್ಞಾನಿಗಳು, ಶಿಕ್ಷಣ ತಜ್ಞರು, ಶ್ರೇಷ್ಠ ಸಾಹಿತಿಗಳು ಹಾಗೂ
ಆಗಮಿಸಲಿದ್ದಾರೆ ಎಂದವರು ಸಂಸ್ಥೆಯ ಕುರಿತು ವಿವರಗಳನ್ನು ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ