Kannada NewsKarnataka NewsLatestPolitics

*ಬೆಳಗಾವಿಯ ನೊಂದ ಯುವತಿಗೆ ನೆರವಿನ ಹಸ್ತ; ಉದ್ಯೋಗದ ಭರವಸೆ ನೀಡಿದ ಸಿಎಂ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜನತಾದರ್ಶನ ಕಾರ್ಯಕ್ರಮದಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಮನವಿ ಮಾಡಿದ ಬೆಳಗಾವಿ ಮೂಲದ ಯುವತಿಗೆ ಸಿಎಂ ಸಿದ್ದರಾಮಯ್ಯ ಸ್ಥಳದಲ್ಲೇ ಸ್ಪಂದಿಸಿ, ಅಧಿಕಾರಿಗಳಿಗೆ ಕ್ರಮವಹಿಸಲು ಸೂಚನೆ ನೀಡಿದ್ದಾರೆ.

ಬೆಳಗಾವಿಯ ಉಜ್ಮಾ ಬಾನು ಎಂಬುವವರು ತಮ್ಮ ತಂದೆ KUWSSBಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕರ್ತವ್ಯದ ವೇಳೆ ಮೃತಪಟ್ಟಿದ್ದಾರೆ. ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವ ಬಗ್ಗೆ ಮೊದಲಿಗೆ ಹುದ್ದೆಗಳು ಖಾಲಿ ಇಲ್ಲ ಎಂದು ತಿಳಿಸಲಾಗಿತ್ತು. ನಂತರ ಅಪ್ರಾಪ್ತ ವಯಸ್ಕಳಾಗಿದ್ದರಿಂದ ಉದ್ಯೋಗ ನೀಡಲು ಅವಕಾಶವಿಲ್ಲ ಎಂದು ನಿರಾಕರಿಸಿದ್ದಾರೆ. ನಿಯಮಾನುಸಾರ ವಯಸ್ಕರಾದ ನಂತರ ಎರಡು ವರ್ಷಗಳೊಳಗೆ ಅರ್ಜಿಸಲ್ಲಿಸಲು ಅವಕಾಶವಿರುವುದರಿಂದ ಉದ್ಯೋಗ ದೊರಕಿಸಿಕೊಡುವಂತೆ ಜನತಾದರ್ಶನದಲ್ಲಿ ಮನವಿ ಮಾಡಿದರು.

ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ತಕ್ಷಣ ಕ್ರಮ ಕೈಗೊಲ್ಳುವಂತೆ KUWSSB ಅಧಿಕಾರಿಗಳಿಗೆ ಸೂಚಿಸಿ ನೊಂದ ಜೀವಕ್ಕೆ ನೆರವಿನ ಹಸ್ತ ಚಾಚಿದರು.

Home add -Advt

Related Articles

Back to top button