Film & EntertainmentKannada NewsKarnataka NewsLatest

*ರಾಕ್ ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ಕಳ್ಳತನ; ನೇಪಾಳಿ ಗ್ಯಾಂಗ್ ನ 7 ಆರೋಪಿಗಳು ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸಹೋದರ ಭ್ರಮರೇಶ್ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ.

ಕಳೆದ ತಿಂಗಳು ಭ್ರಮರೇಶ್ ಹಾಗೂ ಕುಟುಂಬದವರು ಯುರೋಪ್ ಪ್ರವಾಸಕ್ಕೆ ತೆರಳಿದ್ದಾಗ ಮನೆ ಕಳ್ಳತನವಾಗಿತ್ತು. ಈ ಪ್ರಕರಣ ಸಂಬಂಧ 7 ಆರೋಪಿಗಳನ್ನು ಬಂಧಿಸಿದ್ದು, 3 ಕೆಜಿಯಷ್ಟು ಚಿನ್ನ ವಶಕ್ಕೆ ಪಡೆದಿದ್ದಾರೆ.

Home add -Advt

ಭ್ರಮರೇಶ್ ಅವರ ಮನೆ ಕನ್ನ ಹಾಕಲು ನೇಪಾಳಿ ಗ್ಯಾಂಗ್ ಆರೊಪಿಗಳು ಮೂರು ತಿಂಗಳು ಸಂಚು ರೂಪಿಸಿದ್ದರು. ಭ್ರಮರೇಶ್ ಮಣೆಯ ಪಕ್ಕದ ನಿರ್ಮಾಣ ಹಂತದ ಕಟ್ಟಡದಲ್ಲಿ ಕುಳಿತು ಸ್ಕೆಚ್ ಹಾಕಿದ್ದರು. ಅಕ್ಟೋಬರ್ ನಲ್ಲಿ ಭ್ರಮರೇಶ್ ಕುಟುಂಬ ವಿದೇಶ ಪ್ರವಾಸ ತೆರಳಿದ್ದಾಗ ಕಳ್ಳರು 5 ಕೆಜಿಯಷ್ಟು ಚಿನ್ನಾಭರಣ ದೋಚಿ ಪರಾರಿಯಾಗಿತ್ತು. ವಿದೇಶ ಪ್ರವಾಸದಿಂದ ವಾಪಾಸ್ ಆದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ ಪೊಲೀಸರು 7 ಆರೋಪಿಗಳನ್ನು ಬಂಧಿಸಿದ್ದಾರೆ.


Related Articles

Back to top button