*70ನೇ ವಯಸ್ಸಿನಲ್ಲಿ ನೀಟ್ ಪರೀಕ್ಷೆ ಬರೆದು ಪಾಸಾದ ವೃದ್ಧ*: *ಆಯ್ಕೆಯಾದರೂ ಸಿಗದ ಸೀಟು*: *ಹೈಕೋರ್ಟ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವೊಂದಿದ್ದರೆ ವಯಸ್ಸು ಕೂಡ ಮಂಡಿಯೂರತ್ತದ್ದೆ. ಈ ಮಾತಿಗೆ 70ನೇ ಇಳಿವಯಸ್ಸಿನ್ಮಲ್ಲಿಯೂ ನೀಟ್ ಪರೀಕ್ಷೆ ಬರೆದು ಪಾಸಾದ ವೃದ್ಧರಿಬ್ಬರ ಜೀವನೋತ್ಸಾಹವೇ ಸಾಕ್ಷಿ.
ಹೌದು. 70 ವರ್ಷದ ಅಶೋಕ್ ಬಹಾರ್ ಎಂಬುವವರು 2026 ರ ನೀಟ್ ಯುಜಿ (NEET UG) ಪರೀಕ್ಷೆಗೆ ಹಾಜರಾಗಿ ಪರೀಕ್ಷೆಯಲ್ಲಿ ತೇರ್ಗಡೆ ಕೂಡ ಆಗಿದ್ದಾರೆ. ವೈದ್ಯರಾಗಬೇಕು ಎಂಬ ಮಹದಾಸೆ ಅವರ್ದ್ದು. ಆದರೆ ಕಡಿಮೆ ರ್ಯಾಂಕ್ ಬಂದ ಕಾರಣಕ್ಕಾಗಿ ಸಾಮಾನ್ಯ ಕೋಟಾದಲ್ಲಿ ಸೀಟು ಸಿಗುವುದು ಕಷ್ಟವಾಯಿತು. ಹೀಗಾಗಿ ಅವರು ಹಿರಿಯ ನಾಗರಿಕರಿಗೆ ವಿಶೇಷ ಮೀಸಲಾತಿ ಕಲ್ಪಿಸಬೇಕೆಂದು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಅಲಹಾಬಾದ್ ಹೈಕೋರ್ಟ್ನ ಏಕಸದಸ್ಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಅರ್ಜಿ ವಜಾಗೊಂಡ ನಂತರ, ಅವರು ವಿಭಾಗೀಯ ಪೀಠದ ಮೆಟ್ಟಿಲೇರಿದ್ದರು. ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಮಂಜೀವ್ ಶುಕ್ಲಾ ಅವರಿದ್ದ ಪೀಠವು ಈ ಮೇಲ್ಮನವಿಯ ವಿಚಾರಣೆ ನಡೆಸಿ, ಏಕಸದಸ್ಯ ಪೀಠದ ತೀರ್ಪನ್ನು ಎತ್ತಿಹಿಡಿಯಿತು. “ಮೀಸಲಾತಿಯ ವಿಷಯವನ್ನು ನ್ಯಾಯಾಲಯಗಳು ನಿರ್ಧರಿಸಲು ಸಾಧ್ಯವಿಲ್ಲ. ಇದು ಶಾಸಕಾಂಗ ಹಾಗೂ ಸಂಬಂಧಪಟ್ಟ ಸರ್ಕಾರದ ಆಡಳಿತಾತ್ಮಕ ನಿರ್ಧಾರಕ್ಕೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ ಅರ್ಜಿಯನ್ನು ವಜಾಗೊಳಿಸಿದೆ.
ಇದರಿಂದಾಗಿ ಅಶೋಕ್ ಬಹಾರ್ ಅವರ ವೈದ್ಯನಾಗುವ ಕನಸು ಕನಸಾಗಿಯೇ ಉಳಿಯುವಂತಾಗಿದೆ. ನೀಟ್ ಪರೀಕ್ಷೆ ಬರೆದು ಗೆದ್ದಿದ್ದ ವರಿಗೆ ವಯಸ್ಸು ಅಡ್ಡಿಯಾಗಿಲ್ಲ. ಆದರೆ ವ್ಯವಸ್ಥೆ ಅಡ್ಡಿಯಾದಂತಾಗಿದೆ.
ಅಶೋಕ್ ಬಹಾರ್, ಉತ್ತರ ಪ್ರದೇಶದ ಅಲಂಬಾಗ್ನ ಚಂದರ್ನಗರದ ನಿವಾಸಿ. 70 ವರ್ಷದ ಅಶೋಕ್ ಬಹಾರ್ ಅವರು ಲಕ್ನೋ ವಿಶ್ವವಿದ್ಯಾಲಯದಿಂದ ಎಲ್ಎಲ್ಬಿ ಹಾಗೂ ಎಂಬಿಎ ಸ್ನಾತಕೋತ್ತರ ಪದವಿಗಳನ್ನು ಪಡೆದು, ಉನ್ನತ ಶಿಕ್ಷಣತಜ್ಞರಾಗಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಮಾರ್ಕೆಟಿಂಗ್ ಮುಖ್ಯಸ್ಥರಾಗಿ ದೀರ್ಘಕಾಲ ಸೇವೆ ಸಲ್ಲಿಸಿದ್ದ ಅವರು 2020 ರಲ್ಲಿ ಸ್ವಯಂಪ್ರೇರಿತ ನಿವೃತ್ತಿ (VRS) ಪಡೆದಿದ್ದರು.
ಇವರ ಪತ್ನಿ ಮಂಜುಲ್ ಬಹಾರ್ ಅವರೂ ಸಹ ವೈದ್ಯೆಯಾಗಿದ್ದು, ಪ್ರಸ್ತುತ ಅಮೆರಿಕದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ನಿರತರಾಗಿದ್ದಾರೆ. ನಿವೃತ್ತಿಯ ನಂತರ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಅಪಾರ ಹಂಬಲದಿಂದ 70ನೇ ವಯಸ್ಸಿನಲ್ಲಿ ಅಶೋಕ್ ಬಹಾರ್ ನೀಟ್ (NEET UG) ಪರೀಕ್ಷೆ ಬರೆದು ಅರ್ಹತೆ ಪಡೆಯುವ ಮೂಲಕ ಗಮನ ಸೆಳೆದಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




