Kannada NewsLatest

ಸುಷ್ಮಾ ಸ್ವರಾಜ್ ಮಾಡಿದ ಕೊನೆಯ ಟ್ವೀಟ್, ಏನ್ ಗೊತ್ತಾ ?

ಸುಷ್ಮಾ ಸ್ವರಾಜ್ ಮಾಡಿದ ಕೊನೆಯ ಟ್ವೀಟ್, ಏನ್ ಗೊತ್ತಾ ?

ಪ್ರಗತಿವಾಹಿನಿ ಸುದ್ದಿ – ದೆಹಲಿ : ಮಾಜಿ ಕೇಂದ್ರ ವಿದೇಶಾಂಗ ಸಚಿವೆ ಹಾಗೂ ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ರವರು ಹೃದಯಾಘಾತದಿಂದ ದಿಲ್ಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ನಿಧನ ಹೊಂದುವ ಸುಮಾರು 3 ಗಂಟೆಗಳ ಮೊದಲು ಪ್ರಧಾನಿ ಮೋದಿರವರಿಗೆ ಟ್ವೀಟ್ ಮಾಡಿರುವ ಸುಷ್ಮಾ ಸ್ವರಾಜ್ ರವರು, ನಾನು ನನ್ನ ಜೀವನದಲ್ಲಿ ಈ ದಿನಕ್ಕಾಗಿ ಕಾಯುತ್ತಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ಎಂದಿದ್ದಾರೆ. ಅವರು ಟ್ವೀಟ್ ಮಾಡಿದ ಕೆಲವೇ ತಾಸುಗಳಲ್ಲಿ ನಿಧನ ಹೊಂದಿದ್ದಾರೆ. ಅವರು ಈ ದಿನಕ್ಕಾಗಿ ಕಾಯುತ್ತಿದ್ದ ವಿಷಯ ಏನೆಂಬುದು ತಿಳಿದುಬಂದಿಲ್ಲ. ಹಾಗೂ ಪ್ರಧಾನಿಗೆ ಧನ್ಯವಾದ ತಿಳಿಸಿದ ಕಾರಣವೂ ತಿಳಿದು ಬಂದಿಲ್ಲ.

ಈ ಟ್ವೀಟ್ ನ ಹಿಂದಿನ ದಿನ ಸುಷ್ಮಾ ಸ್ವರಾಜ್ ರವರು ಅಮಿತ್ ಶಾ ರವರಿಗೆ ಶುಭ ಕೋರಿದ್ದರು, ಅವರ ಆ ಟ್ವೀಟ್ ಇಲ್ಲಿದೆ ನೋಡಿ.

1952 ರ ಫೆಬ್ರವರಿ 14 ರಂದು ಹಾರ್ದೇವ್ ಶರ್ಮಾ ಮತ್ತು ತಾಯಿ ಲಕ್ಷ್ಮಿ ದೇವಿ ಅವರ ಪುತ್ರಿಯಾಗಿ ಹರಿಯಾಣದ ಅಂಬಾಲಾದಲ್ಲಿ ಜನಿಸಿದ ಸುಷ್ಮಾ ಸ್ವರಾಜ್, ಅಂಬಾಲಾ ಕಂಟೋನ್ಮೆಂಟ್ನ ಕಾಲೇಜಿನಲ್ಲಿ ಸಂಸ್ಕೃತ ಮತ್ತು ರಾಜ್ಯಶಾಸ್ತ್ರ ವಿಷಯಗಳಲ್ಲಿ ಪದವಿ ಪಡೆದಿದ್ದರು. ಬಳಿಕ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಪಂಜಾಬ್‌ ತೆರಳಿದ ಅವರು ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಕಾನೂನು ಅಧ್ಯಯನ ಮಾಡಿದ್ದರು. ಇದರ ಫಲವಾಗಿ 1973ರಲ್ಲಿ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ್ದರು……

ಅಪಾರ ಬಂದು, ಬಳಗ ಮತ್ತು ಅಭಿಮಾನಿಗಳನ್ನ ಆಗಲಿರುವ ಸುಷ್ಮಾ ಸ್ವರಾಜ್ ಗೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮುಂದೆಂದೂ ಕಾಣದ ಪ್ರಬಲ ನಾಯಕಿ ಎಲ್ಲರನ್ನು ಅಗಲಿರುವುದು ತುಂಬಲಾರದ ನಷ್ಟವಾಗಿದೆ. ಅವರ ಅಪಾರ ಸೇವಾ ಕಾರ್ಯಗಳಿಂದ ಅವರು ಶಾಶ್ವತ ಎಲ್ಲರ ಮನದಲ್ಲೂ ಅಚ್ಚಳಿಯದೆ ಉಳಿಯಲಿದ್ದಾರೆ…. /////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button