Kannada NewsLatestNational

*ವಿಮಾನ ಪತನ; ದುರಂತದಲ್ಲಿ ಇಬ್ಬರು ಪೈಲಟ್ ಗಳು ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ತರಬೇತಿ ನಿರತ ವಿಮಾನವೊಂದು ಪತನಗೊಂಡ ಪ್ರಕರಣದಲ್ಲಿ ವಿಮಾನದಲ್ಲಿದ್ದ ಇಬ್ಬರು ಪೈಲಟ್ ಗಳು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ತೆಲಂಗಾಣದ ಮೇದಕ್ ನ ತೂಪ್ರಾನ್ ಪ್ರದೇಶದಲ್ಲಿ ಇಂದು ಬೆಳಿಗ್ಗೆ ತರಬೇತಿ ನಿರತ ಲಘು ವಿಮನ ಪತನಗೊಂಡು ಹೊತ್ತಿ ಉರಿದಿತ್ತು. ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು. ಇದೀಗ ಇಬ್ಬರು ಪೈಲಟ್ ಗಳು ದುರಂತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Home add -Advt

ತರಬೇತಿ ನಿರತ ಲಘು ವಿಮಾನ ದುಂಡಿಗಲ್ ಏರ್ ಪೋರ್ಟ್ ಗೆ ಸೇರಿದ ವಿಮಾನವಾಗಿತ್ತು. ವಿಮಾನ ಪತನಕ್ಕೆ ನಿಖರ ಕರಣ ತಿಳಿದುಬಂದಿಲ್ಲ.


Related Articles

Back to top button