ವಾರಂತ್ಯದಲ್ಲಿ ಸುವರ್ಣಸೌಧವನ್ನು ಪ್ರವಾಸಿ ತಾಣವಾಗಿಸಲು ಸರ್ಕಾರದ ಚಿಂತನೆ: ಡಿಸಿಎಂ ಡಿ.ಕೆ.ಶಿವಕುಮಾರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ :
ವಾರಾಂತ್ಯದಲ್ಲಿ ಸಾರ್ವಜನಿಕರಿಗೆ ಪ್ರವೇಶ ನೀಡಿ ಸುವರ್ಣ ವಿಧಾನಸೌಧವನ್ನು ಪ್ರವಾಸಿ ತಾಣವಾಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಬೆಳಗಾವಿ ಸುವರ್ಣ ವಿಧಾನಸೌಧದ ಆವರಣದಲ್ಲಿ ಮಂಗಳವಾರ ನಡೆದ ಕರ್ನಾಟಕ ಸುವರ್ಣ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಅವರು ಹೇಳಿದ್ದಿಷ್ಟು;
ಸುವರ್ಣಸೌಧದ ಪ್ರಮುಖ ಸ್ಥಳಗಳಲ್ಲಿ ಫೋಟೋ ಶೂಟ್ ಪಾಯಿಂಟ್ಗಳನ್ನು ಮಾಡುವ ಮೂಲಕ ಪ್ರವಾಸಿಗರನ್ನು ಆಕರ್ಷಿಸಲಾಗುವುದು.
ಈಗಾಗಲೇ ಇದರ ಬಗ್ಗೆ ವಿಧಾನಸಭೆ ಮತ್ತು ಪರಿಷತ್ತಿನ ಮಾಜಿ ಸಭಾಪತಿಗಳು ಸಲಹೆಗಳನ್ನ ನೀಡಿದ್ದಾರೆ. ಇದರ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತದೆ.
ಕರ್ನಾಟಕದ ಇತಿಹಾಸವನ್ನು ಓದುತ್ತಿದ್ದೆ. ಕರ್ನಾಟಕ ಎಂದು ಮರುನಾಮಕರಣವಾದ ಸಂದರ್ಭದಲ್ಲಿ ಕೆ ಬಿ ಕೋಳಿವಾಡ ಅವರು ಸಹ ವಿಧಾನಸಭೆಯಲ್ಲಿ ಅದರ ಪರ ಮತ ಹಾಕುವ ಮೂಲಕ ಬೆಂಬಲ ಸೂಚಿಸಿದ್ದರು. ಇಂದು ಅವರನ್ನು ಕೂಡ ಈ ಸುವರ್ಣ ಸಂಭ್ರಮದಲ್ಲಿ ಸನ್ಮಾನಿಸುವ ಭಾಗ್ಯ ದೊರೆಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ