*ಸಂಸತ್ ಅಧಿವೇಶನದಲ್ಲಿ ಭದ್ರತಾ ಲೋಪ ಬೆನ್ನಲ್ಲೇ ಬೆಳಗಾವಿ ಸುವರ್ಣಸೌಧದಲ್ಲಿ ಹೈ ಅಲರ್ಟ್*
ಭದ್ರತೆ ಪರಿಶೀಲಿಸಿದ ಸ್ಪೀಕರ್
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಸಂಸತ್ ಅಧಿವೇಶನದ ವೇಳೆ ಭದ್ರತಾ ಲೋಪವುಂಟಾಗಿದ್ದು, ಲೋಕಸಭೆ ಕಲಾಪದ ವೇಳೆ ಗ್ಯಾಲರಿಯಿಂದ ಜಿಗಿದ ಇಬ್ಬರು ದುಷ್ಕರ್ಮಿಗಳು ಕಲರ್ ಸ್ಪ್ರೇ ಹರಡಿ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಈ ಘಟನೆ ಬೆನ್ನಲ್ಲೇ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿಯು ಹೈ ಅಲರ್ಟ್ ಕೈಗೊಳ್ಳಲಾಗಿದೆ.
ಸಂಸತ್ ನಲ್ಲಿ ಭದ್ರತಾ ಲೋಪ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ತಕ್ಷಣ ಸ್ಪೀಕರ್ ಯು.ಟಿ.ಖಾದರ್, ಬೆಳಗಾವಿ ಸುವರ್ಣಸೌಧದಲ್ಲಿ ಕೈಗೊಂಡ ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದರು.
ಅಧಿವೇಶನದಲ್ಲಿ ಯಾವುದೆ ರೀತಿ ಭದ್ರತಾ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಪೊಲೀಸರು ಹಾಗೂ ಭದ್ರತಾ ಸಿಬ್ಬಂದಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ಸುವರ್ಣಸೌಧದ ಸುತ್ತಮುತ್ತ, ಸುವರ್ಣಸೌಧದ ಒಳಗೆ, ವೀಕ್ಷಕರ ಗ್ಯಾಲರಿ, ವಿಧಾನಸಭೆ, ವಿಧಾನ ಪರಿಷತ್ ನಲ್ಲಿ ಕೈಗೊಳ್ಳಲಾಗಿರುವ ಭದ್ರತೆ ಬಗ್ಗೆ ಖುದ್ದು ಸ್ಪೀಕರ್ ಪರಿಶೀಲನೆ ನಡೆಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ