*ಮದುವೆ ಸಮಾರಂಭಕ್ಕೆ ಬಂದವರೇ ಈತನ ಟಾರ್ಗೆಟ್; ಖತರ್ನಾಕ್ ಕಳ್ಳ ಅರೆಸ್ಟ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮದುವೆ ಸಮಾರಂಭಕ್ಕೆ ಬಂದಿದ್ದವರನ್ನೇ ಟಾರ್ಗೆಟ್ ಮಾಡಿ ಕಲ್ಯಾಣ ಮಂಟಪದಲ್ಲಿ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳನನ್ನು ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಇಮ್ತಿಯಾಜ್ ಮಹಮ್ಮದ್ ಗೌಸ್ ಹುಬ್ಳಿವಾಲೆ (63) ಬಂಧಿತ ಆರೋಪಿ. ವೀರಭದ್ರ ನಗರದ ನಿವಾಸಿಯಾಗಿರುವ ಈತ ಜನವರಿ 4 ರಂದು ಮಾಳಮಾರುತಿ ಠಾಣಾ ವ್ಯಾಪ್ತಿಯ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ್ದ ದಾವಣಗೆರೆ ಮೂಲದ ಪಂಚಾಕ್ಷರಿ ಎಂ ಕೆ ಅವರ ಪತ್ನಿಯ ಚಿನ್ನಾಭರಣ ಕಳುವು ಮಾಡಿದ್ದ.
ವೆನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 3,51,000 ಮೌಲ್ಯದ ಬಂಗಾರದ ಆಭರಣ ಹಾಗೂ 3,500/- ಹಣ ಸೇರಿದಂತೆ ಒಟ್ಟು 3,54, 500 ಗಳಷ್ಟು ವಸ್ತುಗಳನ್ನು ವೆನಿಟಿ ಬ್ಯಾಗ್ ಸಮೇತ ಕದ್ದು ಪರಾರಿಯಾಗಿದ್ದ. ಚಿನ್ನಾಭರಣ ಹಾಗೂ ಹಣ ಕಳುವಾದ ಬಗ್ಗೆ ಮಾಳಮಾರುತಿ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಆರೋಪಿಯನ್ನು ಬಂಧಿಸಿರುವ ಪೊಲೀಸರು, ಕದ್ದ ಬಂಗಾರದ ಆಭರಣ ಹಾಗೂ ಹಣವನ್ನು ಜಪ್ತಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ