Kannada NewsKarnataka NewsLatest

*ನೈತಿಕ ಪೊಲೀಸ್ ಗಿರಿ ನಡೆಸಿದ್ದ ಪುಂಡರಿಂದ ಸಾಮೂಹಿಕ ಅತ್ಯಾಚಾರ; ಸಂತ್ರಸ್ತೆಯಿಂದ ದೂರು*

ಮಹಿಳೆಯನ್ನು ರಸ್ತೆಗೆ ಎಳೆದು ತಂದು ಮನಬಂದಂತೆ ಹಲ್ಲೆ ನಡೆಸಿದ ಯುವಕರು

ಪ್ರಗತಿವಾಹಿನಿ ಸುದ್ದಿ; ಹಾವೇರಿ: ಹಾವೇರಿ ಜಿಲ್ಲೆಯ ಹಾನಗಲ್ ಪಟ್ಟಣದಲ್ಲಿ ನಡೆದಿದ್ದ ನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ನೈತಿಕ ಪೊಲೀಸ್ ಗಿರಿ ನಡೆಸಿದ್ದ ಪುಂಡರ ವಿರುದ್ಧ ಸಾಮೂಹಿಕ ಅತ್ಯಾಚಾರ ದೂರು ದಾಖಲಾಗಿದೆ.

Home add -Advt

ಲಾಡ್ಜ್ ನಲ್ಲಿ ಹಿಂದೂ ವ್ಯಕ್ತಿ ಸೋಮಶೇಖರ್ ಎಂಬಾತನ ಜೊತೆಗೆ ಮುಸ್ಲಿಂ ಮಹಿಳೆಯೊಬ್ಬರು ಇದ್ದರು. ಈ ವೇಳೆ ಯುವಕರ ಗುಂಪೊಂದು ರೂಂ ನಲ್ಲಿ ನೀರು ಬರುತ್ತಿದೆಯಾ ಎಂಬುದನ್ನು ಚಕ್ ಮಾಡಬೇಕು ಎಂದು ಹೇಳಿ ಬಾಗಿಲು ಬಡಿದ್ದಾರೆ. ಅದಕ್ಕೆ ವ್ಯಕ್ತಿ ನೀರು ಬರ್ತಿದೆ ಎಂದು ಹೇಳಿದ್ದಾರೆ. ಆದರೂ ಸುಮ್ಮನಾಗದ ಯುವಕರ ಗುಂಪು ಚಕ್ ಮಾಡಬೇಕು ಬಾಗಿಲು ತೆಗೆಯಿರಿ ಎಂದಿದ್ದಾರೆ.

ಬಾಗಿಲು ತೆಗೆಯುತ್ತಿದ್ದಂತೆ ಒಳನುಗ್ಗಿದ ಪುಂಡರ ಗುಂಪು ವ್ಯಕ್ತಿ ಹಾಗೂ ಮಹಿಳೆ ಮೇಲೆ ಮನಬಂದಂತೆ ಥಳಿದ್ದಾರೆ. ಮಹಿಳೆಯನ್ನು ಎಳೆದೊಯ್ದು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ನೈತಿಕ ಪೊಲೀಸ್ ಗಿರಿ ನಡೆಸಿರುವ 7 ಜನ ಮುಸ್ಲಿಂ ಯುವಕರು ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಮನಬಂದಂತೆ ಥಳಿಸಿದ್ದಾರೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

ಇನ್ನು ಮಹಿಳೆಯನ್ನು ಎಳೆದು ತಂದು ರಸ್ತೆಯಲ್ಲಿ ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Related Articles

Back to top button