Kannada NewsKarnataka NewsLatest

47 ವರ್ಷದ ನಂತರ ತುಂಬಿದ ಮಾರಿಹಾಳ ಕೆರೆಗೆ ಲಕ್ಷ್ಮಿ ಹೆಬ್ಬಾಳಕರ್ ಬಾಗಿನ ಅರ್ಪಣೆ

47 ವರ್ಷದ ನಂತರ ತುಂಬಿದ ಮಾರಿಹಾಳ ಕೆರೆಗೆ ಬಾಗಿನ ಅರ್ಪಣೆ

ಬೈಕ್ ನಲ್ಲೇ ತಿರುಗಾಡಿ ಸಂತ್ರಸ್ತರನ್ನು ಸಂತೈಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- 
47 ವರ್ಷದ ನಂತರ ತುಂಬಿದ ಮಾರಿಹಾಳದ ಕೆರೆಗೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇಂದು ಬಾಗಿನ ಅರ್ಪಿಸಿದರು.
ಕ್ಷೇತ್ರದ ಮಾರಿಹಾಳ ಗ್ರಾಮದ ಕಿನಾಲ್ ಕೆರೆ 47 ವರ್ಷದ ಬಳಿಕ ತುಂಬಿದ್ದು ಇವತ್ತು ಗ್ರಾಮಸ್ಥರ ಜೊತೆ ಸೇರಿ ಬಾಗಿನವನ್ನು ಅರ್ಪಿಸಿ ಪೂಜೆಯನ್ನು ಸಲ್ಲಿಸಲಾಯಿತು.
ಈಗಾಗಲೇ ಸಣ್ಣ ನೀರಾವರಿ ಇಲಾಖೆಯಿಂದ ಒಂದು ಕೋಟಿ ರೂ,ಗಳ ಕಿನಾಲ್ ಕೆರೆಯ ಅಭಿವೃದ್ಧಿಗೆ ಮಂಜೂರಾಗಿದ್ದು ಶೀಘ್ರದಲ್ಲಿಯೆ ಇದರ ಸದುಪಯೋಗವನ್ನು ರೈತರಿಗೆ ಮಾಡಿಕೊಡುತ್ತೇನೆ ಎಂದು ಅವರು ತಿಳಿಸಿದರು.
ಬಾಗಿನ ಅರ್ಪಿಸುವ ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ತಾಲೂಕ ಪಂಚಾಯತ ಅಧ್ಯಕ್ಷ ಶಂಕರಗೌಡ ಪಾಟೀಲ, ಸಹೋದರ ಚನ್ನರಾಜ ಹಟ್ಟಿಹೊಳಿ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ಬಸವರಾಜ ಮ್ಯಾಗೋಟಿ, ರಾಮನಗೌಡ ಪಾಟೀಲ, ತೌಸಿಪ್ ಫನಿಬಂದ  ಮುಂತಾದವರು ಉಪಸ್ಥಿತರಿದ್ದರು.

 

 

ಬೈಕ್ ನಲ್ಲಿ ಪ್ರಯಾಣ

ಬೈಕ್ ನಲ್ಲಿ ಇಂದು ಹಲಗಾ, ಬಸ್ತವಾಡ, ಕಮಕಾರಟ್ಟಿ, ಕೊಂಡುಸ್ಕೊಪ್ಪ, ಮಾರಿಹಾಳ ಗ್ರಾಮಗಳಿಗೆ ತೆರಳಿದ ಹೆಬ್ಬಾಳಕರ್, ಮನೆ ಕಳೆದುಕೊಂಡವರ, ಬೆಳೆ ಕಳೆದುಕೊಂಡವರ, ಬಟ್ಟೆ, ಸಾಮಗ್ರಿಗಳನ್ನು ಕಳೆದುಕೊಂಡವರನ್ನು ಭೇಟಿಯಾಗಿ ಅವರನ್ನು ಸಂತೈಸಿದರು.
ಕ್ಷೇತ್ರದ ಪ್ರತಿ ಗ್ರಾಮಕ್ಕೆ ತೆರಳುತ್ತಿರುವ ಅವರು, ಅನೇಕ ಕಡೆ ಕಾರು ಸಂಚರಿಸಲಾರದ ಸ್ಥಿತಿ ಇರುವುದರಿಂದ ಬೈಕ್ ಮೇಲೆಯೇ ಅಡ್ಡಾಡಿದರು.
ಇಡೀ ಕ್ಷೇತ್ರದಲ್ಲಿ ಮಳೆಯಿಂದಾಗಿ ಆಗಿರುವ ನಷ್ಟದ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿರುವ ಅವರು, ಕ್ಷೇತ್ರದಲ್ಲಿ ಉಂಟಾಗಿರುವ ಒಟ್ಟೂ ಹಾನಿಯ ಅಂದು ಪಟ್ಟಿ ತಯಾರಿಸುತ್ತಿದ್ದಾರೆ.
ನಷ್ಟದ ವಿವರ ಸಿದ್ಧಪಡಿಸಿ ಸರಕಾರದಿಂದ ಹೆಚ್ಚಿನ ಅನುದಾನ ತರುವ ದಿಸೆಯಲ್ಲಿ ಹೆಬ್ಬಾಳಕರ್ ಪ್ರಯತ್ನಿಸುತ್ತಿದ್ದಾರೆ. ಅನೇಕ ಗ್ರಾಮಗಳಲ್ಲಿ ಈಚೆಗೆ ಮಾಡಲಾಗಿರುವ ರಸ್ತೆಗಳು ಹಾಳಾಗಿವೆ. ಶಾಲೆಗಳು ಶಿಥಿಲಗೊಂಡಿವೆ. ಗಟಾರಗಳು ಕೊಚ್ಚಿಹೋಗಿವೆ. ಜನರ ಬದುಕೇ ಕೊಚ್ಚಿಕೊಂಡು ಹೋಗಿದೆ.
ಎಲ್ಲವನ್ನೂ ಕಣ್ಣಾರೆ ಕಂಡು, ಅಧಿಕಾರಿಗಳ ಸಹಾಯದಿಂದ ನಷ್ಟವನ್ನು ಅಂದಾಜಿಸುತ್ತಿದ್ದಾರೆ. ಇಡೀ ಕ್ಷೇತ್ರವನ್ನು ಪುನರ್ ನಿರ್ಮಿಸುವ ಸಂಕಲ್ಪದೊಂದಿಗೆ ಹೆಬ್ಬಾಳಕರ್ ಕ್ಷೇತ್ರ ಸುತ್ತಿ, ಜನರಿಗೆ ಧೈರ್ಯ ಮತ್ತು ಸಾಂತ್ವನ ಹೇಳುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button