ಸಂಕಲನ : ಚೇತನ ರಾಜಹಂಸ
ಶ್ರೀರಾಮಜನ್ಮಭೂಮಿಯ 490 ವರ್ಷಗಳ ವನವಾಸದ ನಂತರ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಕೇವಲ ಭಾರತವಷ್ಟೇ ಅಲ್ಲದೆ, ಜಗತ್ತಿನಾದ್ಯಂತದ ಹಿಂದೂಗಳಲ್ಲಿ ಉತ್ಸಾಹದ ಸಂಚಾರವಾಗಿದೆ. ಅಮೇರಿಕಾದಲ್ಲಿ ಹಿಂದೂಗಳು ಶ್ರೀರಾಮ ಮಂದಿರಕ್ಕಾಗಿ ರ್ಯಾಲಿಗಳನ್ನು ನಡೆಸಿದರು. ಸಂಪೂರ್ಣ ಭಾರತ ರಾಮಮಯವಾಗಿದೆ.
ಜನವರಿ 22 ಹತ್ತಿರ ಬರುತ್ತಿದ್ದಂತೆ ಭಾರತೀಯರಲ್ಲಿನ ರಾಮ ಭಕ್ತಿಯ ಜ್ಯೋತಿ ಹೆಚ್ಚೆಚ್ಚು ತೇಜಸ್ವಿಯಾಗಿ ಬೆಳಗುತ್ತಿದೆ.
ಪ್ರಸಾರ ಮಾಧ್ಯಮಗಳಿಂದ ಪ್ರತಿದಿನ ಅನೇಕ ಸಮಯ ಶ್ರೀರಾಮಮಂದಿರ, ಶ್ರೀರಾಮ ಜನ್ಮಭೂಮಿ ಆಂದೋಲನ, ರಾಮಾಯಣ ಮುಂತಾದ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಶ್ರೀ ರಾಮನ ಕುರಿತು ಹೊಸ ಹೊಸ ಭಕ್ತಿ ಗೀತೆಗಳು ಪ್ರಸಾರವಾಗುತ್ತಿವೆ ಮತ್ತು ಅವುಗಳನ್ನು ಸ್ವತಹ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಪೋಸ್ಟ್ ಮಾಡಿ ಪ್ರೋತ್ಸಾಹ ನೀಡುತ್ತಿದ್ದಾರೆ. ಸಂಪೂರ್ಣ ದೇಶದಲ್ಲಿ ರಾಮನ ಅಲೆಯೇ ನಿರ್ಮಾಣವಾಗಿದೆ. ಶ್ರೀ ರಾಮನ ಮಂದಿರದಲ್ಲಿ , ಅವನ ನಾಮದಲ್ಲಿ ಎಷ್ಟು ಶಕ್ತಿ ಇದೆ, ಇದರ ಅನುಭೂತಿ ಮತ್ತೊಮ್ಮೆ ಹಿಂದೂಗಳು ಪಡೆಯುತ್ತಿದ್ದಾರೆ.
ಶ್ರೀರಾಮ ಜನ್ಮ ಭೂಮಿಯ ಮುಕ್ತಿಗಾಗಿ 5 ಶತಕಗಳಲ್ಲಿ ಲಕ್ಷಾಂತರ ರಾಮಭಕ್ತರು ಪ್ರಾಣತ್ಯಾಗ ಮಾಡಿದ್ದಾರೆ. ಕಳೆದ ಅನೇಕ ದಶಕಗಳು ನ್ಯಾಯಾಲಯದಲ್ಲಿ ಇದರ ಕುರಿತು ಮೊಕದ್ದಮೆ ನಡೆಸಲಾಯಿತು ಮತ್ತು ಕೊನೆಗೆ ಹಿಂದುಗಳು ವಿಜಯ ಪಡೆದ ನಂತರ ಈಗ ಶ್ರೀರಾಮ ಮಂದಿರ ರೂಪಗೊಂಡಿತು. ಇತಿಹಾಸದಲ್ಲಿ ಶ್ರೀರಾಮ ಜನ್ಮ ಭೂಮಿಯ ಹೋರಾಟ ಅಜರಾಮರವಾಯಿತು. ಈಗ ಹಿಂದುಗಳು ಇಷ್ಟಕ್ಕೇ ಸುಮ್ಮನಾಗದೆ ಈಗ ಮಥುರಾ ಮತ್ತು ಕಾಶಿಯ ಮಂದಿರಗಳ ಭೂಮಿಯನ್ನೂ ಮುಕ್ತಗೊಳಿಸಲು ಹೋರಾಟ ಮುಂದುವರೆಸಿ ಅಲ್ಲಿಯೂ ಭಗವಂತನ ಕೃಪೆಯಿಂದ ವಿಜಯ ಸಾಧಿಸಬೇಕು. ಕೇವಲ ಮಥುರಾ, ಕಾಶಿ ಅಷ್ಟೇ ಅಲ್ಲ, ದೇಶದಲ್ಲಿನ ಮೂರುವರೆ ಲಕ್ಷ ದೇವಸ್ಥಾನಗಳನ್ನು ಧ್ವಂಸ ಮಾಡಿ ಅಲ್ಲಿ ಮಸೀದಿಗಳನ್ನು ಕಟ್ಟಲಾಗಿದೆ. ಮಧ್ಯಪ್ರದೇಶದ ‘ಧಾರ್’ನ ಭೋಜಶಾಲೆಯಲ್ಲಿ ಸರಸ್ವತಿ ದೇವಿಯ ದೇವಾಲಯವೂ ಅತಿಕ್ರಮಗೊಂಡಿದೆ, ಅದಕ್ಕಾಗಿಯೂ ಹೋರಾಡಬೇಕು.
ಗೋವಾದಂತಹ ರಾಜ್ಯದಲ್ಲಿ ಪೋರ್ಚುಗೀಸರ ಕಾಲದಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಚರ್ಚಗಳನ್ನು ಕಟ್ಟಲಾಯಿತು. ಅವುಗಳನ್ನೂ ಮುಕ್ತಗೊಳಿಸುವ ಆವಶ್ಯಕತೆಯಿದೆ. ಈ ಎಲ್ಲಾ ಸ್ಥಳಗಳಲ್ಲಿ ದೇವತೆಗಳ ಸ್ಥಾನ ಮತ್ತೆ ಜಾಗೃತಗೊಳಿಸಬೇಕು. ಇದಕ್ಕಾಗಿ ಕಾನೂನು ಕೈಗೆತ್ತಿಕೊಳ್ಳುವ ಅವಶ್ಯಕತೆ ಇಲ್ಲ. ನ್ಯಾಯಾಲಯದಲ್ಲಿ ಹೋರಾಡಿ ಪ್ರಯತ್ನ ಮಾಡಬಹುದು. ಇದಕ್ಕಾಗಿ ಸ್ಥಳೀಯ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರವೂ ಹಿಂದುಗಳಿಗೆ ಸಹಾಯ ಮಾಡುವುದು ಅಪೇಕ್ಷಿತ ಇದೆ. ಭಾಜಪದ ಆಡಳಿತ ಇರುವ ರಾಜ್ಯಗಳಲ್ಲಿ ಒಂದೊಮ್ಮೆ ಇದು ಸಾಧ್ಯವಾಗಬಹುದು; ಆದರೆ ಇತರ ರಾಜ್ಯಗಳಲ್ಲಿ ಇದು ಈಗಿನ ಪರಿಸ್ಥಿತಿಯಲ್ಲಿ ಅಸಾಧ್ಯವಿದೆ. ಶ್ರೀರಾಮ ಮಂದಿರದಿಂದಾಗಿ ಈ ಹೋರಾಟಕ್ಕೆ ಶಕ್ತಿ ಸಿಕ್ಕಿದೆ. ನಾಳೆ ಮಥುರಾ ಮತ್ತು ಕಾಶಿಯ ಹಿಂದುಗಳಿಗೆ ಯಶಸ್ಸು ಸಿಕ್ಕಿದರೆ ಆಗ ಉಳಿದಿರುವ ದೇವಸ್ಥಾನಗಳನ್ನು ಹಿಂಪಡೆಯುವ ಪ್ರಯತ್ನಕ್ಕಾಗಿ ಹೆಚ್ಚು ವೇಗ ಬರಬಹುದು.
ದೇವಸ್ಥಾನಗಳು ಧರ್ಮಶಿಕ್ಷಣದ ಕೇಂದ್ರಗಳಾಗಬೇಕು !
ಹಿಂದೂಗಳ ದೇವಸ್ಥಾನಗಳು ಚೈತನ್ಯದ ಸ್ರೋತವಾಗಿವೆ. ಆಧ್ಯಾತ್ಮಿಕ ದೃಷ್ಟಿಯಿಂದ ಅವುಗಳಿಗಿರುವ ಮಹತ್ವವನ್ನು ಭಕ್ತರು, ಸಾಧಕರು, ಸಂತರೇ ತಿಳಿಯಲು ಸಾಧ್ಯ. ಇದರಿಂದ ಇಂತಹ ಚೈತನ್ಯದ ಸ್ರೋತಗಳನ್ನು ವಿರೋಧಿಸುವ ಅಸುರೀ ಜನರು, ದೇವಸ್ಥಾನಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಾರೆ. ಹಿಂದುಗಳ ದೇವಸ್ಥಾನದ ಮಾಧ್ಯಮದಿಂದ ಸಮಾಜದಲ್ಲಿ ಭಾವ-ಭಕ್ತಿ, ಧರ್ಮಾಚರಣೆ, ಸಾಧನೆ, ತ್ಯಾಗ, ಮನಃಶಾಂತಿ ಮುಂತಾದವುಗಳನ್ನು ಸಾಧಿಸಬಹುದು. ದೇವಸ್ಥಾನಗಳ ಈ ಮಹತ್ವ ಹಿಂದೂಗಳಿಗೆ ತಿಳಿದಿದೆ. ದೇಶದಲ್ಲಿನ ಪ್ರತಿ ಗ್ರಾಮಗಳಲ್ಲಿ ಅನೇಕ ದೇವಸ್ಥಾನಗಳಿರುತ್ತವೆ, ಈ ದೇವಸ್ಥಾನಗಳನ್ನು ಈಗ ಹಿಂದೂಗಳ ಧರ್ಮಶಿಕ್ಷಣ ಕೇಂದ್ರಗಳನ್ನಾಗಿಸುವುದು ಆವಶ್ಯಕವಾಗಿದೆ. ಶ್ರೀರಾಮ ಮಂದಿರದ ಪ್ರಯುಕ್ತ ಹಿಂದೂಗಳಲ್ಲಿ ಆಧ್ಯಾತ್ಮಿಕ ದೃಷ್ಟಿಯಿಂದ ಒಂದು ರೀತಿಯ ಜಾಗೃತಿ ನಿರ್ಮಾಣವಾಗಿದೆ. ಈ ಜಾಗೃತಿ ಮುಂದುವರಿಸುವ ಆವಶ್ಯಕತೆ ಇದೆ.
ಇದಕ್ಕಾಗಿ ಪ್ರತಿಯೊಂದು ದೇವಸ್ಥಾನದಲ್ಲಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡಿ ಪ್ರತ್ಯಕ್ಷ ಸಾಧನೆಗೆ, ಧರ್ಮಾಚರಣೆಗೆ ಪ್ರೋತ್ಸಾಹ ನೀಡುವುದು ಆವಶ್ಯಕವಾಗಿದೆ. ಇದರಿಂದ ದೇವಸ್ಥಾನದ ಹೆಚ್ಚು ಲಾಭ ಹಿಂದುಗಳಿಗೆ, ಸಮಾಜಕ್ಕೆ ಮತ್ತು ದೇಶಕ್ಕೆ ಸಿಗುವುದು. ಇದನ್ನೂ ಅವರಿಗೆ ತಿಳಿಸಿ ಹೇಳಬೇಕು. ಶ್ರೀರಾಮ ಮಂದಿರದ ಉದ್ಘಾಟನೆಯ ದಿನದಂದು ದೇಶದಲ್ಲಿ ಸುಮಾರು 5 ಲಕ್ಷ ದೇವಸ್ಥಾನಗಳಿಗೆ ವಿಶ್ವ ಹಿಂದೂ ಪರಿಷತ್ತು ಪೂಜಾ ಆರತಿ ಮುಂತಾದ ಕಾರ್ಯಕ್ರಮ ಆಯೋಜಿಸಲು ಕರೆ ನೀಡಿದೆ. ಅದರ ಮೊದಲು ಜನವರಿ 14 ರಿಂದ 22 ರ ವರೆಗಿನ ಸಮಯದಲ್ಲಿ ದೇವಸ್ಥಾನದ ಸ್ವಚ್ಛತೆ ಮಾಡಲು ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಕರೆ ನೀಡಿದ್ದಾರೆ. ಅಂದರೆ, ಈ ದೇವಸ್ಥಾನದಿಂದಲೇ ಹಿಂದೂಗಳನ್ನು ಸಂಘಟಿತಗೊಳಿಸಬಹುದು. ಅದಕ್ಕಾಗಿ ಬೇರೆ ಜಾಗೃತಿ/ಪ್ರಬೋಧನೆಯ ಅವಶ್ಯಕತೆ ಅನಿಸುವುದಿಲ್ಲ. ಇಲ್ಲಿಯವರೆಗೆ ಹಿಂದುಗಳಲ್ಲಿ ದೇವಸ್ಥಾನಗಳ ಕುರಿತು ಶ್ರದ್ಧೆ ಮತ್ತು ಭಾವ ದೃಢವಾಗಿ ಇದೆ. ಇದನ್ನೇ ಮುಂದೆ ಕೊಂಡೊಯ್ಯುವುದಕ್ಕಾಗಿ ಹಿಂದುಗಳನ್ನು ದೇವಸ್ಥಾನಗಳ ಜೊತೆಗೆ ಪ್ರತಿದಿನ ಜೋಡಿಸಿ ಇಡಬೇಕು. ಭಾರತ ಜಾತ್ಯತೀತ ದೇಶವಾಗಿರುವುದರಿಂದ ಪ್ರಧಾನಮಂತ್ರಿ ಮೋದಿ ಅಥವಾ ಯಾವುದೇ ಸರಕಾರ ಹಿಂದುಗಳಿಗೆ ನೇರ ಧರ್ಮಶಿಕ್ಷಣ ನೀಡುವ ವ್ಯವಸ್ಥೆ ನಿರ್ಮಾಣ ಮಾಡಲು ಸಾಧ್ಯವಿಲ್ಲ ; ಆದರೆ ಹಿಂದೂ ಸಂಘಟನೆಗಳು ಈಗ ಪ್ರಯತ್ನ ಮಾಡುವುದು ಅವಶ್ಯಕವಾಗಿದೆ.
ಧರ್ಮಶಿಕ್ಷಣದಿಂದಾಗಿ ಜನ್ಮ ಹಿಂದೂಗಳಿಂದಾಗುವ ದೇವತೆಗಳ ಅವಮಾನ ತಡೆಯಬಹುದು. ಇತರ ಧರ್ಮೀಯರು ಹಿಂದೂಗಳಿಗೆ ಆಮಿಷವೊಡ್ಡಿ ಮತಾಂತರಗೊಳಿಸುವ ಷಡ್ಯಂತ್ರ ತಡೆಯಬಹುದು. ಲವ್ ಜಿಹಾದ್ ಗೆ ಬಲಿಯಾಗುವ ಹಿಂದೂ ಹುಡುಗಿಯರ ರಕ್ಷಣೆಯಾಗುವುದು. ಹಿಂದೂಗಳಲ್ಲಿ ಧರ್ಮದ ಕುರಿತು ಹೆಚ್ಚು ಪ್ರೇಮ ಮತ್ತು ಜಾಗೃತಿ ಮೂಡುವುದು ಮತ್ತು ಸ್ವತಃ ಹಿಂದೂ ಎಂದು ಹೇಳುವವರಿಗೆ ನಿಜವಾದ ಅರ್ಥದಲ್ಲಿ ಅಭಿಮಾನವೆನಿಸುವುದು.
ದೇವಸ್ಥಾನಗಳು ಪ್ರವಾಸಿತಾಣಗಳಾಗಬಾರದು !
ಈಗ ದೇವಸ್ಥಾನಗಳ ವಿಕಾಸ ಮಾಡಲಾಗುತ್ತಿದೆ. ಅಂದರೆ ಅಲ್ಲಿ ಹೆಚ್ಚೆಚ್ಚು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಅಲ್ಲಿ ತಲುಪಲು ವಿವಿಧ ಮಾಧ್ಯಮಗಳ ನಿರ್ಮಾಣ ಮಾಡಲಾಗುತ್ತಿದೆ. ಈ ಸೌಲಭ್ಯಗಳು ಆವಶ್ಯಕವಾಗಿದೆ; ಆದರೆ ಇವುಗಳನ್ನು ಓರ್ವ ಭಕ್ತ, ಸಾಧಕ, ಭಾವಿಕನ ದೃಷ್ಟಿಯಿಂದ ಬಳಕೆ ಮಾಡುವುದು ಅವಶ್ಯಕವಾಗಿದೆ, ಪ್ರತ್ಯಕ್ಷದಲ್ಲಿ ಹೇಗೆ, ಎಷ್ಟು ಪ್ರಮಾಣದಲ್ಲಿ ಆಗುತ್ತದೆ ಅದರ ಚಿಂತನೆ ಮಾಡಬೇಕು. ಇಂದು ದೇವಸ್ಥಾನಗಳನ್ನು ಒಂದು ಪ್ರವಾಸಿತಾಣವೆಂದು ನೋಡಲಾಗುತ್ತಿದೆ. ಕೆಲವು ಬೆರಳೆಣಿಕೆಯ ದೇವಸ್ಥಾನಗಳು ಅದರ ಮೂಲ ಸ್ವರೂಪದದಲ್ಲಿ ಉಳಿದಿವೆ ಅಥವಾ ಭಕ್ತರು ಅವುಗಳನ್ನು ಅದೇ ದೃಷ್ಟಿಯಿಂದ ನೋಡುತ್ತಾರೆ.
ದೇವಸ್ಥಾನಗಳು ಎಂದಿಗೂ ಪ್ರವಾಸಿ ತಾಣವಾಗಲು ಸಾಧ್ಯವಿಲ್ಲ. ಅವುಗಳು ಚೈತನ್ಯದ ಕೇಂದ್ರವಾಗಿವೆ. ಈ ಚೈತನ್ಯ ಕಾಪಾಡುವುದು ಭಕ್ತರ ಕರ್ತವ್ಯ, ಅಷ್ಟೇ ಅಲ್ಲದೆ ಸಾಧನೆಯೂ ಆಗಿದೆ. ಈ ಚೈತನ್ಯ ಒಂದು ವೇಳೆ ನಾಶವಾದರೆ, ಆಗ ಈ ದೇವಸ್ಥಾನಗಳಿಗೆ ಯಾವುದೇ ಮಹತ್ವ ಉಳಿಯುವುದಿಲ್ಲ. ಏಕೆಂದರೆ ಅಲ್ಲಿ ದೇವರು ಇರುವುದಿಲ್ಲ. ಅನೇಕ ಸಂತರು, ಹಿರಿಯರಿಗೆ ದೇವಸ್ಥಾನದಲ್ಲಿನ ಚೈತನ್ಯ ನಾಶವಾಗಿ ಅಲ್ಲಿಯ ದೈವತ್ವ ನಷ್ಟವಾಗಿರುವುದು ಗಮನಕ್ಕೆ ಬರುತ್ತದೆ. ಇದು ಹಿಂದೂಗಳಿಗಾಗಿ ದೊಡ್ಡ ಸಮಷ್ಟಿ ಪಾಪವಾಗಿದೆ. ಕೆಲವು ಸಂತರು ಇಂತಹ ದೇವಸ್ಥಾನಗಳಿಗೆ ಹೋಗಿ ಶುದ್ಧಿ ಮಾಡುತ್ತಿರುತ್ತಾರೆ; ಆದರೆ ಚೈತನ್ಯ ನಾಶವಾಗುವುದನ್ನು ತಡೆಯುವುದು ಮಹತ್ವದ್ದಾಗಿದೆ. ಸರಕಾರವು ಈ ದೃಷ್ಟಿಯಿಂದ ವಿಕಾಸ ಮಾಡುವಾಗ ಗಮನಿಸಬೇಕು.
ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಿ !
ಶ್ರೀರಾಮ ಮಂದಿರವನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಿಂದ ಕಟ್ಟಲಾಗಿದೆ. ನ್ಯಾಯಾಲಯದ ಆದೇಶದ ನಂತರ ಈ ಟ್ರಸ್ಟಿನ ನಿರ್ಮಾಣವಾಗಿದೆ. ಇದರಲ್ಲಿ ಸರಕಾರದ ಯಾವುದೇ ಹಸ್ತಕ್ಷೇಪವಿಲ್ಲ; ಆದರೆ ಇಂದು ದೇಶದಲ್ಲಿನ ಲಕ್ಷಾಂತರ ದೇವಸ್ಥಾನಗಳು ಸರಕಾರದ ವಶದಲ್ಲಿದೆ. ಈ ದೇವಸ್ಥಾನಗಳಿಗೆ ಬರುವ ಅಬ್ಜದಷ್ಟು ಅರ್ಪಣೆಯ ಹಣ ಸರಕಾರದ ಖಜಾನೆಗೆ ಹೋಗುತ್ತಿದೆ. ಇದರಲ್ಲಿನ ಅತ್ಯಲ್ಪ ಭಾಗ ಹಣ ಪ್ರತ್ಯಕ್ಷ ದೇವಸ್ಥಾನದ ಕಾರ್ಯಕ್ಕಾಗಿ ಉಪಯೋಗಿಸಲಾಗುತ್ತದೆ, ಹಾಗೂ ಉಳಿದ ಎಲ್ಲಾ ಹಣ ಸರಕಾರಿ ಯೋಜನೆಗಳಿಗಾಗಿ ಬಳಸಲಾಗುತ್ತದೆ. ದೇವಸ್ಥಾನ ಸಮಿತಿಗಳೂ ಈ ಹಣವನ್ನು ಹಿಂದುಗಳಿಗೆ ಧರ್ಮಶಿಕ್ಷಣ ನೀಡಲು ಅಥವಾ ಧರ್ಮಕಾರ್ಯಕ್ಕಾಗಿ ಉಪಯೋಗಿಸುತ್ತಿಲ್ಲ. ಮನೆಯಲ್ಲಿನ ಹಿರಿಯ ಸಹೋದರ ಕಿರಿಯ ಸಹೋದರನನ್ನು ಪೋಷಿಸುತ್ತಾನೆ, ಹಾಗೆಯೇ ಹೆಚ್ಚು ಆದಾಯ ಇರುವ ದೇವಸ್ಥಾನಗಳಿಂದ ದೇಶದಲ್ಲಿನ ಚಿಕ್ಕ ದೇವಸ್ಥಾನಗಳ ಉತ್ಪನ್ನ ಅತ್ಯಲ್ಪವಾಗಿದೆ. ಅಂತಹ ದೇವಸ್ಥಾನಗಳ ಪಾಲಕತ್ವ ಪಡೆದು ಅಲ್ಲಿಯ ವ್ಯವಸ್ಥೆ ನೋಡಿಕೊಳ್ಳುವುದು ಆವಶ್ಯಕವಾಗಿದೆ, ಹಾಗಾಗಿ ಹಿಂದುಗಳು ಅರ್ಪಣೆಯೆಂದು ನೀಡಿರುವ ಹಣ ಧರ್ಮಕ್ಕಾಗಿ ಉಪಯೋಗವಾಗುತ್ತಿಲ್ಲ. ಈ ಹಣ ಆಸ್ಪತ್ರೆ ಕಟ್ಟಿಸಲು, ನೆರೆಪೀಡಿತರಿಗಾಗಿ, ಶಾಲೆಗಾಗಿ, ರೋಗಿಗಳ ಸಹಾಯಕ್ಕಾಗಿ ಉಪಯೋಗಿಸಲಾಗುತ್ತಿದೆ. ಇವೆಲ್ಲ ಸಾಮಾಜಿಕ ಕಾರ್ಯಗಳಾಗಿವೆ. ಸಾಮಾಜಿಕ ಕಾರ್ಯಕ್ಕಾಗಿ ಧರ್ಮದ ಹಣ ಖರ್ಚಾಗುವುದು ಅಪೇಕ್ಷಿತವಿಲ್ಲ. ಸಾಮಾಜಿಕ ಕಾರ್ಯಕ್ಕಾಗಿ ಇತರ ಅನೇಕ ಆದಾಯಗಳಿವೆ; ಆದರೆ ಧರ್ಮಕಾರ್ಯಕ್ಕಾಗಿ ಇಂತಹ ಶಾಶ್ವತ ಆದಾಯವಿಲ್ಲ. ಆದ್ದರಿಂದ ದೇವಸ್ಥಾನದ ಹಣ ಧರ್ಮ ಕಾರ್ಯಕ್ಕಾಗಿಯೇ ಉಪಯೋಗವಾಗಬೇಕು. ಕೆಲವು ದೇವಸ್ಥಾನಗಳ ಹಣ ಇತರ ಧರ್ಮದವರಿಗಾಗಿ ಖರ್ಚು ಮಾಡವ ಉದಾಹರಣೆಗಳು ಬೆಳಕಿಗೆ ಬಂದಿವೆ. ಇದು ಹಿಂದುಗಳಿಗೆ ಲಜ್ಜಾಸ್ಪದವಾಗಿದೆ. ಆದ್ದರಿಂದ ದೇವಸ್ಥಾನಗಳನ್ನು ಸರಕಾರದ ವಶದಿಂದ ಮುಕ್ತಗೊಳಿಸಿ ಅವುಗಳನ್ನು ನಿಜವಾದ ಭಕ್ತರ, ಸಾಧನೆ ಮಾಡುವ ಶ್ರದ್ಧೆಯುಳ್ಳವರ ವಶಕ್ಕೆ ನೀಡಬೇಕು. ಸರಕಾರಿ ಅಧಿಕಾರಿಗಳ ಬದಲು ಇಂತಹ ಶ್ರದ್ಧೆಯುಳ್ಳವರು ನಿಜವಾದ ಅರ್ಥದಲ್ಲಿ ದೇವಸ್ಥಾನಗಳನ್ನು ಭಾವ-ಭಕ್ತಿಯಿಂದ ನೋಡಿಕೊಳ್ಳಬಹುದು. ಈಗ ಇದಕ್ಕಾಗಿ ಹಿಂದುಗಳು ಪ್ರಯತ್ನ ಮಾಡುವುದು ಆವಶ್ಯಕವಾಗಿದೆ. ಯಾವ ದೇವಸ್ಥಾನಗಳ ವ್ಯವಸ್ಥೆ ಭಕ್ತಿ ಭಾವದಿಂದ ಆಗುತ್ತಿಲ್ಲ, ಅಂತಹ ದೇವಸ್ಥಾನದ ಹಣದ ಮೇಲೆ, ಆಭರಣಗಳ ಮೇಲೆ ದಾಳಿ ಮಾಡಲಾಗುತ್ತಿದೆ. ಯಾವ ದೇವಸ್ಥಾನದ ಹಣ ಧರ್ಮಕಾರ್ಯಕ್ಕಾಗಿ ಖರ್ಚಾಗುವುದಿಲ್ಲ, ಅಲ್ಲಿ ದೇವರಾದರೂ ಇರುವರೇ ? ಇದಕ್ಕಾಗಿ ಈಗ ಹಿಂದುಗಳೇ ಹೋರಾಡುವುದು ಆವಶ್ಯಕವಾಗಿದೆ . ಈಗ ಇದಕ್ಕಾಗಿ ಸಂಪೂರ್ಣ ದೇಶದಲ್ಲಿ ಜಾಗೃತಿ ಮೂಡಿಸಿ ದೊಡ್ಡ ಆಂದೋಲನ ನಿರ್ಮಾಣ ಮಾಡಬೇಕಿದೆ. ದೇವಸ್ಥಾನದ ಹಣದಿಂದ ಧರ್ಮಶಿಕ್ಷಣಕ್ಕಾಗಿ ಪ್ರಯತ್ನ ಮಾಡಬಹುದು. ದೊಡ್ಡ ದೇವಸ್ಥಾನಗಳಿಂದ ಅಂದರೆ ಯಾವ ದೇವಸ್ಥಾನಗಳ ಉತ್ಪನ್ನ ಕೋಟ್ಯಾಂತರ ರೂಪಾಯಿ ಇದೆ, ಅಂತಹ ದೇವಸ್ಥಾನಗಳಲ್ಲಿ ಗುರುಕುಲಗಳನ್ನು ನಿರ್ಮಿಸುವುದು ಆವಶ್ಯಕವಾಗಿದೆ. ಈ ಹಣದಿಂದ ವಾತಾವರಣದ ಶುದ್ಧಿಗಾಗಿ ನಿರಂತರವಾಗಿ ಯಜ್ಞ ಯಾಗಾದಿಗಳನ್ನು ಮಾಡುವುದು ಆವಶ್ಯಕವಾಗಿದೆ. ಕೊರೊನಾದ ಸಮಯದಲ್ಲಿ ಸೋಂಕು ನಿವಾರಣೆ ಮಾಡಲಾಗುತ್ತಿತ್ತು. ಅದೇ ರೀತಿ ಯಜ್ಞ ಯಾಗಾದಿಗಳು ಮಾಡುವುದರಿಂದ ಅವುಗಳು ಆಧ್ಯಾತ್ಮಿಕ ಸ್ತರದಲ್ಲಿ ಕಾರ್ಯ ಮಾಡುತ್ತದೆ.
ರಾಮರಾಜ್ಯದ ಸಮಾನ ಆದರ್ಶ ಹಿಂದೂ ರಾಷ್ಟ್ರ ಬೇಕು !
ಶ್ರೀರಾಮ ಮಂದಿರದ ನಿರ್ಮಾಣ ಆಗಿದ್ದರೂ ಅದೇ ಅಂತಿಮ ಎಂದು ನಿಶ್ಚಯಿಸಬಾರದು. ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆ 500 ವರ್ಷಗಳ ನಂತರ ಈ ದೇಶದಲ್ಲಿ ಆಗುತ್ತಿದೆ. ಈಗ ದೇಶದಲ್ಲಿ ರಾಮರಾಜ್ಯವೂ ಸ್ಥಾಪನೆಯಾಗುವುದು ಆವಶ್ಯಕವಾಗಿದೆ. ಅಂದರೆ ದೇಶದಲ್ಲಿ ಶ್ರೀರಾಮನು ಆಳಿದಂತೆ ರಾಜ್ಯ ಅಂದರೆ ದೇಶ ನಡೆಸುವ ಆವಶ್ಯಕತೆ ಇದೆ. ಈಗ ಹಾಗೆ ಇದೆಯೇ ? ಇಲ್ಲ ಅಲ್ಲವೇ. ಭಾರತ ಒಂದು ಜಾತ್ಯತೀತ ದೇಶವಾಗಿದೆ. ಅಲ್ಲಿ ಧರ್ಮವೇ ಇಲ್ಲ, ಅಲ್ಲಿ ಧರ್ಮಾಚರಣೆ ಹೇಗೆ ಮಾಡಲು ಸಾಧ್ಯ ? ಇದಕ್ಕಾಗಿ ಮೊದಲು ಭಾರತವನ್ನು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರ ವೆಂದು ಘೋಷಿಸಬೇಕು. ಈ ದೇಶ ಹಿಂದೂಗಳದ್ದಾಗಿದೆ. ಈ ದೇಶವನ್ನು ಮುಸಲ್ಮಾನರು ಮತ್ತು ಕ್ರೈಸ್ತರು ಸುಮಾರು ಒಂದು ಸಾವಿರ ವರ್ಷ ಆಳಿದರು. ಅವರ ಗುಲಾಮಗಿರಿಯಿಂದ ಭಾರತ ತನ್ನ ಮೂಲ ಸಂಸ್ಕೃತಿ ಮರೆತಿದೆ. ಭಾರತ ಒಂದು ಕಾಲದಲ್ಲಿ ಜಗತ್ತಿಗೆ ವಿಶ್ವಗುರುವಾಗಿತ್ತು, ಅದು ಆಧ್ಯಾತ್ಮಿಕ ಸ್ತರದಲ್ಲಿ. ಆದರೆ ಇಂದು ಭಾರತ ಜಗತ್ತಿಗೆ ‘ವಿಶ್ವಗುರು’ವಾಗಬಹುದೆ ಎಂದು ಕೇಳಿದರೆ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಮೊದಲು ದೇಶದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಿ ನಂತರ ಹಿಂದೂ ಧರ್ಮದ ಪ್ರಕಾರ ರಾಜ್ಯಾಡಳಿತ ನಡೆಸಬೇಕು. ಇದರಿಂದ ಪ್ರತಿಯೊಬ್ಬ ವ್ಯಕ್ತಿ ಹಿಂದೂ ಧರ್ಮದ ಪಾಲನೆ ಮಾಡುವನು. ಹಿಂದೂ ಧರ್ಮದ ಪ್ರಕಾರ ನಿರ್ಣಯ ತೆಗೆದುಕೊಳ್ಳಲಾಗುವುದು, ಕಾರ್ಯ ಮಾಡಲಾಗುವುದು, ವಿಕಾಸದ ದೃಷ್ಟಿಯಿಂದ ಮಾಡಲಾಗುವುದು. ಈ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾದರೆ, ಆಗ ರಾಮರಾಜ್ಯ ಬಂದಿದೆ ಎಂದು ಹೇಳಬಹುದು. ಅಂತಹ ಆಡಳಿತಗಾರರು ಪಿತೃಶಾಹಿಯಂತೆ ಆಡಳಿತ ನಡೆಸುವರು. ಅಂತಹ ದೇಶದಲ್ಲಿ ಪ್ರಜೆ ರಾಜನಂತೆ ಇರುವರು. ಈ ರಾಜ್ಯದಲ್ಲಿ ಯಾರೂ ದುಃಖದಲ್ಲಿ ಇರುವುದಿಲ್ಲ, ಮತ್ತು ಯಾರಿಗೂ ಸಮಸ್ಯೆಗಳು ಇರುವುದಿಲ್ಲ, ಇದ್ದರೆ ತತ್ಪರತೆಯಿಂದ ಪರಿಹರಿಸಲಾಗುತ್ತದೆ. ಇತರ ದೇಶದಲ್ಲಿ ಭಾರತದ ಬಗ್ಗೆ ಶತ್ರುತ್ವ ಇರುವುದಿಲ್ಲ ಅಲ್ಲಿ ಗೌರವವೇ ಇರುತ್ತದೆ. ಅವರೂ ಭಾರತದ ಆದರ್ಶ ಇಟ್ಟುಕೊಂಡು ರಾಜ್ಯಾ ಡಳಿತ ನಡೆಸುವರು.
(ಲೇಖಕರು: ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ