Kannada NewsKarnataka NewsLatest

*ಅಮ್ಮಿನಬಾವಿ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯರ ನುಡಿ -ಯುವಕರು ಶ್ರೀರಾಮನ ಮೌಲ್ಯಾದರ್ಶಗಳನ್ನು ಪಾಲಿಸಬೇಕು*

ಪ್ರಗತಿವಾಹಿನಿ ಸುದ್ದಿ, ಧಾರವಾಡ : ಸಾಮ್ರಾಜ್ಯದ ಮಹೋನ್ನತ ಸುಖ ವೈಭೋಗ ಐಶ್ವರ್ಯಾದಿಗಳಿದ್ದರೂ ಪಿತೃವಾಕ್ಯ ಪರಿಪಾಲನೆಯ ಒಂದೇ ಉದ್ದೇಶದಿಂದ ಎಲ್ಲವನ್ನೂ ತ್ಯಾಗ ಮಾಡಿದ ಶ್ರೀರಾಮನ ಮೌಲ್ಯಾದರ್ಶಗಳನ್ನು ಯುವಕರು ತಪ್ಪದೇ ಪಾಲಿಸಬೇಕೆಂದು ಅಮ್ಮಿನಬಾವಿ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಸೋಮವಾರ ತಾಲೂಕಿನ ತಿಮ್ಮಾಪೂರ ಗ್ರಾಮದ ಶ್ರೀಆಂಜನೇಯಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಹಮ್ಮಿಕೊಂಡಿದ್ದ ಶ್ರೀರಾಮೋತ್ಸವ ಉದ್ಘಾಟಿಸಿ ಮಾತನಾಡುತ್ತಿದ್ದರು. ರಾಮನಲ್ಲಿರುವ ಉನ್ನತ ವ್ಯಕ್ತಿತ್ವದಿಂದಾಗಿ ಅವನಿಗೆ ಶ್ರೇಷ್ಠತೆ ಪ್ರಾಪ್ತವಾಗಿದೆ. ತನ್ನೊಳಗೆ ದೈವತ್ವದ ಶಕ್ತಿ ಸಂಚಯವಿದ್ದರೂ ಅದನ್ನು ಬಹಿರಂಗದ ಬದುಕಿನಲ್ಲಿ ಪ್ರದರ್ಶನ ಮಾಡದೇ ಜನಸಾಮಾನ್ಯರಲ್ಲಿ ಸಾಮಾನ್ಯವಾದ ಬದುಕನ್ನು ಬದುಕಿ ತೋರಿಸಿ ಲೋಕದ ಅಖಂಡ ಮನುಕುಲದ ಜೀವನ ವಿಧಾನಕ್ಕೆ ಆದರ್ಶಗಳನ್ನು ನೀಡಿದ್ದಾರೆ ಎಂದರು.

ಭಕ್ತಿಸೇವೆ : ಅಮ್ಮಿನಬಾವಿ ಪಂಚಗೃಹ ಹಿರೇಮಠದ ಪ್ರಥಮ ಜಾತ್ರಾ ಮಹೋತ್ಸವ ನೂತನ ರಥೋತ್ಸವದ ಉದ್ಘಾಟನೆ ಬರುವ ಏಪ್ರಿಲ್-12 ರಂದು ನಡೆಯಲಿದ್ದು, ಸಮಸ್ತ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಭಕ್ತಿಸೇವೆ ಸಲ್ಲಿಸಬೇಕು ಎಂದೂ ಅವರು ಹೇಳಿದರು.

ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು. ಅಮ್ಮಿನಬಾವಿ ಗ್ರಾಮದ ಬಿ.ಸಿ. ಕೊಳ್ಳಿ, ಪರಮೇಶ್ವರ ಅಕ್ಕಿ, ಉಮೇಶ ಶಿರಕೋಳ, ಸೋಮಲಿಂಗಶಾಸ್ತ್ರಿ ಗುಡ್ಡದಮಠ, ತಿಮ್ಮಾಪೂರ ಗ್ರಾಮದ ಮಲ್ಲನಗೌಡ ಚಿಕ್ಕನಗೌಡರ, ಲವ ಕುಶ ಹುಲಗೂರ, ಮೈಲಾರೆಪ್ಪ ಒಗ್ಗರ, ಬಸಪ್ಪ ಅನಾಡ, ಮಹಾಂತಯ್ಯ ಹಿರೇಮಠ, ಈಶ್ವರ ಅರವಾಳ, ಬಸನಗೌಡ ಸೋಮನಗೌಡರ, , ಹನುಮಂತ ಪೂಜಾರ, ಉಮೇಶಗೌಡ ಜಟ್ಟನಗೌಡರ, ಶಿವಪ್ಪ ಅರವಾಳ ಇತರರು ಇದ್ದರು.

Home add -Advt

Related Articles

Back to top button