*ಮುಖ್ಯಮಂತ್ರಿ ಸಿದ್ದರಾಮಯ್ಯ ತುಮಕೂರಲ್ಲಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಮಾಡಿದ ಅಭಿವೃದ್ಧಿ ಕಾರ್ಯಗಳ ವಿವರ*
ಶಂಕುಸ್ಥಾಪನೆ
1) ತುಮಕೂರು ಜಿಲ್ಲೆಯ ವ್ಯಾಪ್ತಿಯಲ್ಲಿ ಜಲ್‌ಜೀವನ್ ಮಿಷನ್ ಯೋಜನೆಯಡಿಯಲ್ಲಿ ಒಟ್ಟು 658 ಕಾಮಗಾರಿಗಳಿಗೆ ಭೂಮಿ ಪೂಜೆ.
2) ಕೊರಟಗೆರೆ ತಾಲ್ಲೂಕು ಕೊರಟಗೆರೆ-ಮಾವತ್ತೂರು-ತೊಂಡೇಬಾವಿ ರಸ್ತೆಯ ಸರಪಳಿ: 6.50 ಕಿ.ಮೀ ಸೇತುವೆ ಪುನರ್ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ,
3) ಮಧುಗಿರಿ ತಾ|| ಶಂಭೋನಹಳ್ಳಿ ಗೇಟ್‌ನಿಂದ, ಶಂಭೋನಹಳ್ಳಿ, ಗಂಜಲಗುಂಟೆ, ಮರವೇಕೆರೆ, ಬಂದ್ರೇಹಳ್ಳಿ ರಸ್ತೆಯ ಕಿ.ಮೀ 0.75 ರಲ್ಲಿ ಬಾಕ್ಸ್ ಕಲ್ವರ್ಟ್ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ,
4) ತುಮಕೂರು ಗ್ರಾಮಾಂತರ, ತುರುವೇಕೆರೆ, ತಿಪಟೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು, ವಿವೇಕ ಶಾಲಾ ಕೊಠಡಿಗಳು, ಪದವಿ ಪೂರ್ವ ಕಾಲೇಜು ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ,
5) ಕರ್ನಾಟಕ ಗಣೆಭಾದಿತ ಪ್ರದೇಶ ಪುನಶ್ಚೇತನ ನಿಗಮದ (KMERC) ವತಿಯಿಂದ ಪಶುಪಾಲನಾ ಇಲಾಖೆಯ ಗುಬ್ಬಿ ಚಿಕ್ಕನಾಯಕನಹಳ್ಳಿ ಮತ್ತು ತಿಪಟೂರು ತಾಲ್ಲೂಕುಗಳ ಕಟ್ಟಡಗಳ ನಿರ್ಮಾಣ ಕಾಮಗಾರಿಗಳ ಶಂಕುಸ್ಥಾಪನೆ,
6) ತುಮಕೂರಿನ ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಕಾಮಗಾರಿ ಶಂಕುಸ್ಥಾಪನೆ,
ನಬಾರ್ಡ್ ವತಿಯಿಂದ ತುಮಕೂರು ತಾಲ್ಲೂಕು ಬೊಮ್ಮನಹಳ್ಳಿಯಿಂದ ಶಿವಗಂಗೆ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಅಭಿವೃದ್ದಿ ಕಾಮಗಾರಿ ಶಂಕುಸ್ಥಾಪನೆ,
ಉದ್ಘಾಟನೆ
7) ತುಮಕೂರು ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಪೂರ್ಣಗೊಳ್ಳುತ್ತಿರುವ ತುಮಕೂರು ಬಸ್ ನಿಲ್ದಾಣದ ಸಮಗ್ರ ಮರು ಅಭಿವೃದ್ದಿ (ಮೊದಲ ಹಂತದ) ಕಾಮಗಾರಿಯ ಉದ್ಘಾಟನೆ
8) ತುಮಕೂರು ವಿಶ್ವವಿದ್ಯಾನಿಲಯದ ಬಿದರಕಟ್ಟೆ ನೂತನ ಕ್ಯಾಂಪಸ್ ನಲ್ಲಿ ಶೈಕ್ಷಣಿಕ ಭವನ-01 ರ ನಿರ್ಮಾಣ ಕಾಮಗಾರಿ ಉದ್ಘಾಟನೆ.
9) ತುಮಕೂರು ಜಿಲ್ಲಾ ವ್ಯಾಪ್ತಿಯ ವಿವೇಕ ಶಾಲಾ ಕೊಠಡಿಗಳ ಉದ್ಘಾಟನೆ.
10) ತಿಪಟೂರು ಬಸ್ ನಿಲ್ದಾಣದ ಮರು ನಿರ್ಮಾಣದ ಕಾಮಗಾರಿಯ ಉದ್ಘಾಟನೆ.
11) ತುರುವೇಕೆರೆ ತಾಲ್ಲೂಕು, ಕಸಬಾ ಹೋಬಳಿ, ಕುಣಿಕೇನಹಳ್ಳಿ ಗ್ರಾಮದ ಬಳಿ ನೂತನವಾಗಿ ನಿರ್ಮಾಣ ಮಾಡುವ 1*10 ಎಂ.ವಿ.ಎ., 110/11 ಕೆವಿ ಉಪಸ್ಥಾವರಕ್ಕೆ ಹಾಲಿ ಇರುವ 110 ಕೆವಿ ಕೆ.ಬಿ.ಕ್ರಾಸ್-ತುರುವೇಕೆರೆ ಏಕಮುಖ ವಿದ್ಯುತ್ ಮಾರ್ಗದಿಂದ 0.22 ಕಿ.ಮೀ ಉದ್ದದ ದ್ವಿಮುಖ ಗೋಪುರಗಳ ಮೇಲೆ ಲಿಲೋ ವಿದ್ಯುತ್ ಮಾರ್ಗ ನಿರ್ಮಾಣ ಕಾಮಗಾರಿ ಉದ್ಘಾಟನೆ.
12) ಪಾವಗಡ ತಾಲ್ಲೂಕು, ನಾಗಲಮಡಿಕೆ ಹೋಬಳಿ, ತಿರುಮಣಿ ಗ್ರಾಮದಲ್ಲಿ ಕೆ.ಎಸ್.ಪಿ.ಡಿ.ಸಿ.ಎಲ್ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡ ಉದ್ಘಾಟನೆ.
13) ಪಾವಗಡ ತಾಲ್ಲೂಕು, ನಾಗಲಮಡಿಕೆ ಹೋಬಳಿ, ತಿರುಮಣಿ ಗ್ರಾಮದಲ್ಲಿ ಕೆ.ಎಸ್.ಪಿ.ಡಿ.ಸಿ.ಎಲ್ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ಉದ್ಘಾಟನೆ
14) ಪಾವಗಡ ತಾಲ್ಲೂಕು, ನಾಗಲಮಡಿಕೆ ಹೋಬಳಿ, ವಳ್ಳೂರು ಗ್ರಾಮದಲ್ಲಿ ಕೆ.ಎಸ್.ಪಿ.ಡಿ.ಸಿ.ಎಲ್ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ನಿರ್ಮಾಣ ಮಾಡಲಾಗಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಕಟ್ಟಡ ಉದ್ಘಾಟನೆ.
15) ತುಮಕೂರು ತಾಲ್ಲೂಕು, ಬೆಳಗುಂಬ ಗ್ರಾಮದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪುರುಷರ ವಿದ್ಯಾರ್ಥಿ ನಿಲಯ ಕಟ್ಟಡ ಉದ್ಘಾಟನೆ.
16) ಗುಬ್ಬಿ ಟೌನ್ ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಡಿ.ದೇವರಾಜ ಅರಸು ಭವನ ಉದ್ಘಾಟನೆ.
ಸವಲತ್ತು/ಸಲಕರಣೆ ವಿತರಣೆ
17) ತುಮಕೂರು ಜಿಲ್ಲಾ ವ್ಯಾಪ್ತಿಯ ವಿವಿಧ ಯೋಜನೆಗಳ 30125 ಫಲಾನುಭವಿಗಳಿಗೆ ಸವಲತ್ತು/ಸಲಕರಣೆ ವಿತರಣೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತುಮಕೂರು ಜಿಲ್ಲೆಯ 30,125 ಫಲಾನುಭವಿಗಳಿಗೆ ಹಲವು ಇಲಾಖೆಗಳ ಸವಲತ್ತು ಮತ್ತು ಸಲಕರಣೆಗಳನ್ನು ವಿತರಿಸಿ, ಒಂದೇ ದಿನ 697.27 ಕೋಟಿ ರೂ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಡಿಸಿಎಂ ಶಿವಕುಮಾರ್, ಸಚಿವರಾದ ಜಿ.ಪರಮೇಶ್ವರ್, ಕೆ.ಎನ್.ರಾಜಣ್ಣ, ಕೃಷ್ಣ ಭೈರೇಗೌಡ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ ಹಾಗೂ ಜಿಲ್ಲೆಯ ಶಾಸಕರುಗಳು ಮತ್ತು ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ