ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿ ನಗರಕ್ಕೆ ಸರಬರಾಜಾಗುವ ಕಚ್ಚಾ ನೀರಿನ ಕೊಳವೆಯಲ್ಲಿ ರೇವ್ ನಗರದ ಹತ್ತಿರ ಸೋರಿಕೆವುಂಟಾಗಿದ ಕಾರಣ ದುರಸ್ತಿ ಕಾರ್ಯ ಫೆ. ೬ ರಂದು ಕೈಗೊಳ್ಳಲಾಗಿದೆ. ಆದರಿಂದ ನಗರದ ಕೇಲವು ಭಾಗದಲ್ಲಿ ಫೆ. ೭ ರಂದು ನೀರಿನ ವ್ಯತ್ಯಯ ಆಗಲಿದೆ ಎಂದು ತಿಳಿಸಲಾಗಿದೆ.
ಉತ್ತರ ಹಾಗೂ ದಕ್ಷಿಣ ಪ್ರದೇಶಗಳಾದ ಆರ್.ಸಿ.ನಗರ ಮೊದಲನೇ & ಎರಡನೇ ಹಂತದ ಪ್ರದೇಶಗಳಾದ ಟಿಲಕವಾಡಿ, ನಾನಾವಾಡಿ, ವಡಗಾವಿ, ಶಹಾಪೂರ, ದಕ್ಷಿಣ ಪ್ರಾತ್ಯಕ್ಷಿಕ ವಲಯ, ಹಿಂದವಾಡಿ, ಮಜಗಾವಿ, ಬ್ರಹ್ಮನಗರ ,ಗೋಕುಲ ನಗರ, ಹುಲಬಟ್ಟಿ ಕಾಲೋನಿ, ಎಸ್‌ಪಿಎಂ ರಸ್ತೆ, ಸಂತಸೇನಾ ರಸ್ತೆ, ಜೈನ ಬಸ್ತಿ, ಖಾಜಿಲೈನ್, ಕಾಕತಿವೇಸ್, ಕಂಗ್ರಾಳಗಲ್ಲಿ, ಕೋನವಾಲ ಗಲ್ಲಿ, ರಾಮಲಿಂಗಖಿಂಡ ಗಲ್ಲಿ, ಖಂಜಾರಗಲ್ಲಿ, ಖಡೇ ಬಜಾರ, ಭಗವಾನಗಲ್ಲಿ, ದರಬಾರಗಲ್ಲಿ, ಕೊತ್ವಾಲಗಲ್ಲಿ, ಶೆಟ್ಟಿಗಲ್ಲಿ, ಬುಖಾರಿಗಲ್ಲಿ, ಕಸಾಯಿಗಲ್ಲಿ, ಮಾಳಿಗಲ್ಲಿ, ಆಜಾದ್‌ಗಲ್ಲಿ, ಭೋವಿಗಲ್ಲಿ, ಪೊಂಗಳಗಲ್ಲಿ, ಬಸವನಗಲ್ಲಿ, ಚಂದುಗಲ್ಲಿ, ಘೀಗಲ್ಲಿ, ತೆಂಗಿನಕರಗಲ್ಲಿ, ಮೋಮೀನಗಲ್ಲಿ, ಅಶೋಕ ನಗರ, ಆಜಾದ್‌ಖಾನ್ ಸೋಸೈಟಿ, ವೀರಭದ್ರ ನಗರ, ಶಿವಾಜಿನಗರ, ಪಂಜಿಬಾಬ, ಪೋಲಿಸ್ ಹೆಡ್ ಕ್ವಾರ್ಟರ್ಸ, ಸುಭಾಸ ನಗರ, ಅಯೋಧ್ಯಾ ನಗರ ಹಾಗೂ ಅಂಜುಮನ್ ನಗರಗಳಲ್ಲಿ ನೀರಿನ ವ್ಯತ್ಯಯ ಆಗಲಿದೆ.
ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ