Kannada NewsKarnataka News

ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿದ ಮಠಾಧೀಶರು

ಸಂತ್ರಸ್ತರಿಗೆ ಆತ್ಮಸ್ಥೈರ್ಯ ತುಂಬಿದ ಮಠಾಧೀಶರು

 ಯೋಗ ಕ್ಷೇಮ ವಿಚಾರಿಸಿದ ಯೋಗಗುರು ವಚನಾನಂದ ಸ್ವಾಮಿಗಳು

ಪ್ರಗತಿವಾಹಿನಿ ಸುದ್ದಿ, ಅಥಣಿ-

ತಾಲೂಕಿನ ನಂದೇಶ್ವರ ಗ್ರಾಮದ ಹತ್ತಿರದ ಪುನರ್ವಸತಿ ಕೇಂದ್ರ ಝೀರೊ ಪಾಯಿಂಟನಲ್ಲಿರುವ ನಂದೇಶ್ವರ, ಮಹಿಷವಾಡಗಿ ಹಾಗೂ ಜನವಾಡ , ಸವದಿ ದರ್ಗಾ ಗ್ರಾಮಗಳ ಸಾವಿರಾರು ಪ್ರವಾಹ ಸಂತ್ರಸ್ತರಿಗೆ ಹರಿಹರ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಶ್ರಿ ವಚನಾನಂದ ಸ್ವಾಮಿಜಿ ಭೇಟಿ ನೀಡಿ ಅವರ ಯೋಗ ಕ್ಷೇಮ ವಿಚಾರಿಸಿ ತಾವು ತಂದಿದ್ದ ಸಾಮಗ್ರಿಗಳನ್ನು ವಿತರಿಸಿದರು.
ಅವರು ಅಲ್ಲಿನ ಪ್ರತಿಯೊಂದು ಶೆಡ್ ಗಳಿಗೆ ಹೋಗಿ ಪ್ರವಾಹ ಸಂತ್ರಸ್ತರನ್ನು ಭೇಟಿಮಾಡಿ ಅವರ ಕಷ್ಟಗಳನ್ನು ಆಲಿಸಿದರು. ಗಂಜಿ ಕೇಂದ್ರಗಳಲ್ಲಿರುವ ಪ್ರತಿಯೊಬ್ಬರೂ ಮಾನಸಿಕವಾಗಿ ಗಟ್ಟಿಯಾಗಿರುವಂತೆ ಹೇಳಿದ ಅವರು, ಆರೋಗ್ಯವೆ ಭಾಗ್ಯವಾಗಿದೆ. ಪ್ರತಿಯೊಬ್ಬರೂ ಪ್ರವಾಹ ಇಳಿಮುಖವಾದ ನಂತರ ಗ್ರಾಮಗಳಿಗೆ ತೆರಳಿದಾಗ ಆರೋಗ್ಯದ ಕುರಿತು ಮುಂಜಾಗ್ರತೆ ವಹಿಸುವಂತೆ ಹೇಳಿದರು. ಸಂತ್ರಸ್ತರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಚಿಕ್ಕ ಮಕ್ಕಳನ್ನು ಎತ್ತಿಕೊಂಡು ಆಡಿಸಿದರು. ಹಲ್ಯಾಳ, ಅವರಖೋಡ, ರಡ್ಡೇರಹಟ್ಟಿ, ಹುಲಬಾಳಿ ಮೊದಲಾದ ಗಂಜಿ ಕೇಂದ್ರಗಳಿಗೆ ಭೇಟಿ ನೀಡಿದರು.

 ಸಂತ್ರಸ್ತರಲ್ಲಿ ಆತ್ಮ ಸ್ತೈರ್ಯ ತುಂಬಿದ ಸವದಿ-ಇಳಕಲ್ ಮಠದ ಶ್ರೀ ಗುರುಮಹಾಂತ ಸ್ವಾಮಿಜಿ

 ಸಾವಿರಾರು ಕುಟುಂಬಗಳಿಗೆ ಆಕಸ್ಮಿಕವಾಗಿ ಪ್ರವಾಹ ಎದುರಾಗಿದೆ ನಿಮ್ಮೆಲ್ಲರ ಕಷ್ಟಗಳಲ್ಲಿ ನಾವು ಭಾಗಿಯಾಗುತ್ತೇವೆ. ಯಾರೂ ಧೈರ್ಯಕಳೆದುಕೊಳ್ಳಬಾರದು, ಕಷ್ಟಗಳೆ ಎಲ್ಲರನ್ನು ಗಟ್ಟಿಗೊಳಿಸುತ್ತವೆ. ಧೃತಿಗೆಡದೆ ಆತ್ಮಸ್ಥೈರ್ಯದಿಂದ ಪ್ರವಾಹ ಸಂತ್ರಸ್ತರು ಇರಬೇಕು. ಜೊತೆಗೆ ಆರೋಗ್ಯದ ಕಾಳಜಿ ಕುರಿತು ಮುಂಜಾಗ್ರತೆ ವಹಿಸಿ ಚಿಕ್ಕಮಕ್ಕಳ ಯೋಗಕ್ಷೇಮ ನೋಡಿಕೊಳ್ಳಬೇಕೆಂದು ಸವದಿ-ಇಳಕಲ್ ಮಠದ ಶ್ರೀ ಗುರು ಮಹಾಂತ ಸ್ವಾಮಿಜಿ ಹೇಳಿದರು.
ಅವರು ತಾಲೂಕಿನ ಹೊಸ ಸವದಿ ಗ್ರಾಮದಲ್ಲಿ ಕೃಷ್ಣಾ ನದಿಯ ಪ್ರವಾಹದಿಂದ ಸಂತ್ರಸ್ತರಾದ ಕುಟುಂಬಗಳಿಗೆ ಅಗತ್ಯವಿರುವ ಪದಾರ್ಥಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು ಪ್ರವಾಹದ ಕುರಿತು ಚಿಂತೆ ಮಾಡದೇ ಆಗಿ ಹೋದ ಘಟನೆಗಳ ಕುರಿತು ಯೋಚಿಸಿ ಮಾನಸಿಕವಾಗಿ ನೊಂದುಕೊಳ್ಳದಿರಿ. ಎಲ್ಲ ಮಠಾಧೀಶರು ನಿಮ್ಮೊಂದಿಗಿದ್ದೇವೆಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗಚ್ಚಿನ ಮಠದ ಶ್ರೀ ಶಿವಬಸವ ಸ್ವಾಮೀಜಿ, ಶಿರಹಟ್ಟಿ ಫಕಿರೇಶ್ವರ ಮಠದ ಸ್ವಾಮಿಜಿ, ಗುಳೆದಗುಡ್ಡದ ಶ್ರೀ ಗುರುಬಸವ ದೇವರು, ನಿಪ್ಪಾಣಿಯ ಶ್ರೀಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button