Kannada NewsKarnataka NewsLatestPolitics

*I N D I A ಒಕ್ಕೂಟ ಒಡೆಯುವಲ್ಲಿ ಬಿಜೆಪಿ ಷಡ್ಯಂತ್ರ ಏನಿಲ್ಲ; ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟನೆ*

ಪ್ರಗತಿವಾಹಿನಿ ಸುದ್ದಿ: I N D I A ಒಕ್ಕೂಟ ಛಿದ್ರವಾಗುತ್ತಿರುವುದರಲ್ಲಿ ಬಿಜೆಪಿ ಷಡ್ಯಂತ್ರ ಏನಿಲ್ಲ. ರಾಹುಲ್ ಗಾಂಧಿ ಪ್ರಬುದ್ಧತೆಗೆ ಬೇಸತ್ತು ಅವರವರೇ ಬಿಟ್ಟು ಬರ್ತಾ ಇದ್ದಾರೆ ಅಷ್ಟೇ ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಇಂದು ಮಾದ್ಯಮದವರೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ನಂಬಿ ಯಾರೂ ಆ ಒಕ್ಕೂಟದಲ್ಲಿ ಇರಲು, ಸೇರಲು ಹೋಗುತ್ತಿಲ್ಲ ಎಂದು ಹೇಳಿದರು.

Home add -Advt

I N D I A ಒಂದು ಅವಕಾಶವಾದಿಗಳ ಕೂಟ ಎಂದು ಆರಂಭದಲ್ಲೇ ಹೇಳಿದ್ದೇವೆ. ಅದರಿಂದ ಈವರೆಗೂ ಏನೂ ಆಗಿಲ್ಲ. ಮುಂದೆಯೂ ಏನೂ ಆಗುವುದಿಲ್ಲ ಎಂದರು.

ಮಮತಾ ನಮ್ಮ ಮಾತು ಕೇಳ್ತಾರಾ? ಮಮತಾ ಬ್ಯಾನರ್ಜಿಗೂ ಕಾಂಗ್ರೆಸ್ ಗೂ ಏನು ಜಗಳವಾಗಿದೆ? ಗೊತ್ತಿಲ್ಲ. ಅವರೇನು ನಮ್ಮ ಮಾತು ಕೇಳುತ್ತಾರಾ? ಎಂದು ಪ್ರಶ್ನಿಸಿದರು.

ಮಮತಾ ಬ್ಯಾನರ್ಜಿಯಿಂದ ನಿಜವಾಗಿಯೂ ತೊಂದರೆ ಅನುಭವಿಸುತ್ತಿರುವುದು ನಾವು. ಅವರ ಅನಾಚರದಿಂದ ಬಿಜೆಪಿ ಕಾರ್ಯಕರ್ತರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಿರುವಾಗ ಮಮತಾ ಇಂಡಿಯಾ ಒಕ್ಕೂಟ ಬಿಟ್ಟು ಹೊರ ಬರಲು ನಾವೇಕೆ ಷಡ್ಯಂತ್ರ ಮಾಡೋಣ? ಎಂದು ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು ಸಚಿವ ಪ್ರಹ್ಲಾದ ಜೋಶಿ.

Related Articles

Back to top button