ಬಂಧನದ ಬಳಿಕವೇ ಸತ್ಯ ಗೊತ್ತಾಗಲಿದೆ ಎಂದ ಗೃಹ ಸಚಿವ
ಪ್ರಗತಿವಾಹಿನಿ ಸುದ್ದಿ: ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದ ರೂವಾರಿ ಕರ್ನಾಟಕದವನು ಎಂಬ ಮಾಹಿತಿ ಲಭ್ಯವಾಗಿದೆ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳ ತನಿಖೆ ಚುರುಕುಗೊಳಿಸಿದೆ. ಬಾಂಬರ್ ಗೆ ಬೆಂಗಲೂರು ಪರಿಚಯ ಚೆನ್ನಾಗಿ ಗೊತ್ತಿದೆ. ಆತ ಯಾವ ಸಂಘಟನೆಗೆ ಸೇರಿದವನು ಎಂಬುದು ತಿಳಿದುಬಂದಿದೆ. ಶಣ್ಕಿತ ಈ ಹಿಂದೆ ಶಿವನ ಸಮುದ್ರ ಹಾಗೂ ಗುಂದ್ಲುಪೇಟೆ, ಕೃಷ್ಣಗಿರಿ ಅರಣ್ಯ ಪ್ರದೇಶದಲ್ಲಿ ಟ್ರೈನಿಂಗ್ ನಡೆಸಿರುವ ಬಗ್ಗೆ ಮಾಹಿತಿ ದೊರೆತಿದೆ.
ಟ್ರಯಲ್ ಬಾಂಬ್ ಬ್ಲಾಸ್ಟ್ ಮಡಿರುವ ಹಾಗೂ ಸರ್ವೈವಲ್ ಕ್ಯಾಂಪ್ ಗಳನ್ನು ನಡೆಸಿರುವ ಬಗ್ಗೆ ತನಿಖೆ ವೇಳೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಆದರೆ ಶಂಕಿತ ಕರ್ನಾಟಕ ಮೂಲದವನು ಎಂದು ಎನ್ ಐಎ ತಿಳಿಸಿದೆ ಎಂಬುದನ್ನು ಗೃಹ ಸಚಿವ ಪರಮೇಶ್ವರ್. ಅಲ್ಲಗಳೆದಿದ್ದಾರೆ. ಶಂಕಿತ ಕರ್ನಾಟಕ ಮೂಲದವನು ಎಂಬುದು ಊಹಾಪೋಹ. ಶಂಕಿತ ಕರ್ನಾಟಕದ ಮಲೆನಾಡು ಮೂಲದವನು ಎಂಬೆಲ್ಲ ಸುದ್ದಿ ಹರಿದಾಡುತ್ತಿದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸತ್ಯಾಂಶ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ