Belagavi NewsBelgaum NewsKannada NewsKarnataka News
ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆ: ಹೆಚ್ಚುವರಿ ಬಸ್ ಸೌಲಭ್ಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ೨೦೨೪-೨೫ ನೇ ಸಾಲಿನ ಶ್ರೀ.ಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಯ ಪ್ರಯುಕ್ತ ಅಥಣಿ, ರಾಯಬಾಗ, ಗೋಕಾಕ, ಹುಕ್ಕೇರಿ, ಚಿಕ್ಕೋಡಿ, ಸಂಕೇಶ್ವರ ಹಾಗೂ ನಿಪ್ಪಾಣಿ ಘಟಕಗಳಿಂದ ಹೆಚ್ಚುವರಿ ಸಾರಿಗೆಗೆ ಸುಸಜ್ಜಿತ ವಾಹನಗಳ ಸೌಲಭ್ಯವನ್ನು ಒದಗಿಸಲಾಗುವುದು.
ಪ್ರಾಸಂಗಿಕ ಕರಾರಿನಲ್ಲಿ ಶ್ರೀ ಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನ ದರ್ಶನದ ಜೊತೆಗೆ ಕೂಡಲಸಂಗಮ ಬದಾಮಿ, ಮಂತ್ರಾಲಯ, ಮಹಾನಂದಿ, ಬಸವಕಲ್ಯಾಣ ಮುಂತಾದ ಸ್ಥಳಗಳಿಗೆ ಭೇಟಿ ನೀಡಬಹುದಾಗಿದೆ. ಪಾದಯಾತ್ರೆಯಲ್ಲಿ ಹೋದಂತಹ ಭಕ್ತಾಧಿಗಳಿಗೆ ಶ್ರೀಶೈಲ ಜಾತ್ರೆಯಿಂದ ಮರಳಿ ಬರುವಾಗ ವಿಭಾಗದಿಂದ ವಿಶೇಷ ವಾಹನಗಳ ಸೌಲಭ್ಯ ಒದಗಿಸಲಾಗುವುದು. ಯಾತ್ರಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾಕರಸಾ ಸಂಸ್ಥೆಯ ಚಿಕ್ಕೋಡಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ಶಶಿಧರ ಎಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ