Belagavi NewsBelgaum NewsKannada NewsKarnataka News

3 ದಿನ ಬೆಳಗಾವಿಯಲ್ಲಿ ಹರಿದಾಸ ಹಬ್ಬ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ಬಾರಿಯ ಹರಿದಾಸ್ ಹಬ್ಬವನ್ನು ಬರುವ ಏಪ್ರಿಲ್ ತಿಂಗಳ 16/ 17 /18 ರಂದು ಭಾಗ್ಯನಗರದ ಶ್ರೀ ರಾಮನಾಥ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದು , ಈ ಮೂರು ದಿನಗಳ ಕಾಲ ಉಡುಪಿಯ  ಅದಮಾರು ಮಠಾಧೀಶರಾದ ಶ್ರೀ ಶ್ರೀ 1008 ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ಭವ್ಯವಾಗಿ ಈ ಬಾರಿಯ ಶ್ರೀರಾಮನವಮಿ ಉತ್ಸವ ಕೂಡ ಜರುಗಲಿದೆ.

     ದಿನಾಂಕ 17ರಂದು ಅಲ್ಲಿಯೇ  ಶ್ರೀ ರಾಮದೇವರ ಪೂಜೆ,  ಅಭಿಷೇಕ,  ಅಲಂಕಾರ, ತೊಟ್ಟಿಲು ಪೂಜೆ, ನಂತರ ಸಮಸ್ತ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ.

     ಪ್ರತಿನಿತ್ಯ ಭಜನಾ ಮಂಡಳಿಗಳಿಂದ ಭಜನೆ,   ಪಂಡಿತರಿಂದ ಉಪನ್ಯಾಸ,   ಸಂಗೀತ ಗಾನ, ದೀಪೋತ್ಸವ ಈ ಎಲ್ಲ ಕಾರ್ಯಕ್ರಮಗಳಲ್ಲಿ ಪ್ರತಿವರ್ಷದಂತೆ ತನು ಮನ ಧನದಿಂದ ತಮ್ಮ ಅಮೂಲ್ಯವಾದ ಸಹಕಾರವನ್ನು ನೀಡುತ್ತೀರೆಂದು ನಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ಸಂಘಟಕರು ತಿಳಿಸಿದ್ದಾರೆ.

       ಈ ಕಾರ್ಯಕ್ರಮಕ್ಕಾಗಿ ತಮ್ಮ ಸೇವೆಯನ್ನು ನೀಡಬಯಸುವವರು QR CODE ಬಳಸಿ ತಮ್ಮ ದೇಣಿಗೆಯನ್ನು ಸಲ್ಲಿಸಬಹುದು. Rs.5000 ಮೇಲ್ಪಟ್ಟು ಸೇವೆಯನ್ನು ಸಲ್ಲಿಸಿದವರಿಗೆ ಅಯೋಧ್ಯಾ ಶ್ರೀ ಬಾಲರಾಮನ ಮೂರ್ತಿಯನ್ನು ಪ್ರಸಾದ ರೂಪವಾಗಿ ಶ್ರೀಪಾದಂಗಳವರ ಅಮೃತ ಹಸ್ತದಿಂದ   ಕೊಡಿಸಲಾಗುವುದು.

Home add -Advt

ಎಲ್ಲರೂ ಸೇರಿ  ಅಯೋಧ್ಯೆಯ  ಶ್ರೀಬಾಲರಾಮನ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸೋಣ ಎಂದು ಮಹಾನಗರ ಪಾಲಿಕೆ ಸದಸ್ಯ ಜಯತೀರ್ಥ ಸವದತ್ತಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ  –

ಭೀಮಸೇನ್ ಮಿರ್ಜಿ 

ಹಾಗೂ ಜಯತೀರ್ಥ ಸವದತ್ತಿ ಇವರನ್ನು ಸಂಪರ್ಕಿಸಬಹುದು.

ದದೇಣಿಗೆ ನೀಡಲು:

Haridas Seva Samiti

A/C.No.15090100087281

Federal Bank

IFSC..FDRL0001509

Nick name.. Jayateerth

Related Articles

Back to top button