ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ನೂತನ ರಿಯಲ್ ಎಸ್ಟೇಟ್ ಕಾಯ್ದೆ ರೇರಾ ಅಡಿ ಉದ್ಯಮಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ವ್ಯವಹಾರದ ಮಾಹಿತಿ ಸಲ್ಲಿಸಬೇಕಿದ್ದು, ಅದರ ಅವಧಿ ವಿಸ್ತರಿಸಲು ರಾಜ್ಯ ಮತ್ತು ಬೆಳಗಾವಿ ಜಿಲ್ಲಾ ಕ್ರೆಡೈ ಆಗ್ರಹಿಸಿದೆ.
ಈ ಕುರಿತು ರಾಜ್ಯ ಕ್ರೆಡೈ ಸಿಇಒ ಅನಿಲ ನಾಯಕ ಮತ್ತು ಬೆಳಗಾವಿ ಕ್ರೆಡೈ ಅಧ್ಯಕ್ಷ ಕೈಸ್ ನೂರಾನಿ ರೇರಾ ಚೇರಮನ್ ಜೆ.ರವಿಶಂಕರ ಅವರಿಗ ಪತ್ರ ಬರೆದಿದ್ದಾರೆ.
ತ್ರೈಮಾಸಿಕ ಮಾಹಿತಿ ಸಲ್ಲಿಕೆಗೆ ಡಿ.15 ಅಂತಿಮ ದಿನವಾಗಿದ್ದು, ಇದನ್ನು ಇನ್ನೂ 30 ದಿನ ವಿಸ್ತರಿಸಬೇಕು. ಅಲ್ಲದೆ ಪ್ರತಿ ತ್ರೈಮಾಸಿಕ ಮಾಹಿತಿ ಸಲ್ಲಿಸುವುದು ಕಷ್ಟವಾಗಿದ್ದು, ಇದನ್ನು ಬದಲಾಯಿಸಬೇಕು ಎಂದು ಕೋರಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ