Latest

ಪಿ.ಚಿದಂಬರಂಗೆ ಬಂಧನದ ಭೀತಿ, ನಿರೀಕ್ಷಣಾ ಜಾಮಿನು ಅರ್ಜಿ ವಜಾ

ಪಿ.ಚಿದಂಬರಂಗೆ ಬಂಧನದ ಭೀತಿ, ನಿರೀಕ್ಷಣಾ ಜಾಮಿನು ಅರ್ಜಿ ವಜಾ

ಪ್ರಗತಿವಾಹಿನಿ ಸುದ್ದಿ – ನವದೆಹಲಿ: ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರ ಎರಡೂ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ. ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿದ ಆರೋಪ ಎದುರಿಸುತ್ತಿರುವ ಚಿದಂಬರಂ,  ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದರು.

ಚಿದಂಬರಂ ಅವರ ವಕೀಲರು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಎರಡಕ್ಕೂ, ಮೂರು ದಿನಗಳ ಕಾಲ ತಡೆ ಮತ್ತು ಮಧ್ಯಂತರ ರಕ್ಷಣೆ ನೀಡುವಂತೆ ಕೋರಿದ್ದರು. ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರಗೊಂಡಿದೆ.

ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಕಾರಣ, ಪಿ.ಚಿದಂಬರಂ ಅವರ ವಕೀಲರು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸುವ ಸಾಧ್ಯತೆಯಿದೆ.

2007 ರಪ್ರ ಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಎಫ್ ಐ ಆರ್ ದಾಖಲಿಸಿತ್ತು. ಪಿ.ಚಿದಂಬರಂ ಹಣಕಾಸು ಸಚಿವರಾಗಿದ್ದಾಗ ಏರ್​ಸೆಲ್​ ಮ್ಯಾಕ್ಸಿಸ್​ ಹಾಗೂ ಐಎನ್ಎಕ್ಸ್ ಮೀಡಿಯಾ ಕೇಸ್​ನಲ್ಲಿ ಚಿದಂಬರಂ ಪಾತ್ರವಿದೆ ಎಂಬ ಆರೋಪ ಕೇಳಿಬಂದಿತ್ತು.

ಕಳೆದ ತಿಂಗಳು, ಚಿದಂಬರಂ, ಸರ್ಕಾರಿ ಅಧಿಕಾರಿಗಳು ಸೇರಿದಂತೆ 18 ಆರೋಪಿಗಳ ವಿರುದ್ಧ ಸಿಬಿಐ ಏರ್ಸೆಲ್-ಮ್ಯಾಕ್ಸಿಸ್ ಪ್ರಕರಣದಲ್ಲಿ ಹೊಸ ಚಾರ್ಜ್ ಶೀಟ್ ಸಲ್ಲಿಸಿತ್ತು. 2 ಜಿ ಸ್ಪೆಕ್ಟ್ರಮ್ ಪ್ರಕರಣಗಳಲ್ಲಿ ಹೊರಹೊಮ್ಮಿದ ಏರ್‌ಸೆಲ್-ಮ್ಯಾಕ್ಸಿಸ್ ಡೀಲ್ ಪ್ರಕರಣವು ಏರ್‌ಸೆಲ್‌ನಲ್ಲಿ ಹೂಡಿಕೆಗಾಗಿ ಸಂಸ್ಥೆಯ ಎಂ / ಎಸ್ ಗ್ಲೋಬಲ್ ಕಮ್ಯುನಿಕೇಷನ್ ಹೋಲ್ಡಿಂಗ್ ಸರ್ವೀಸಸ್ ಲಿಮಿಟೆಡ್‌ಗೆ ನೀಡಲಾದ ಎಫ್‌ಐಪಿಬಿ ಕ್ಲಿಯರೆನ್ಸ್‌ಗೆ ಸಂಬಂಧಿಸಿದೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button