Kannada NewsLatest

ಅನೌಪಚಾರಿಕ ಶಿಕ್ಷಣ ಚಾರಿತ್ರ್ಯ ವೃದ್ಧಿಗೆ ದಾರಿ ಮಾಡಿಕೊಡುತ್ತದೆ – ಡಾ.ಸುಂದರರಾಜ್ ಅರಸ್

ಅನೌಪಚಾರಿಕ ಶಿಕ್ಷಣ ಚಾರಿತ್ರ್ಯ ವೃದ್ಧಿಗೆ ದಾರಿ ಮಾಡಿಕೊಡುತ್ತದೆ – ಡಾ.ಸುಂದರರಾಜ್ ಅರಸ್

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಔಪಚಾರಿಕ ಶಿಕ್ಷಣ ನಾಲ್ಕು ಗೊಡೆಗಳ ಮಧ್ಯದ ಕಲಿಕೆಗೆ ಸೀಮಿತವಾಗಬಾರದು. ವಿದ್ಯಾರ್ಥಿಗಳು ನಿಸರ್ಗದ ಮಡಿಲಲ್ಲಿ ಮುಕ್ತವಾತಾವರಣದಲ್ಲಿ ಕಲಿಯಬೇಕು ಕ್ರೀಡೆ ಪ್ರಾರಂಭಿಕ ಶಿಕ್ಷಣದ ಮೂಲವೆಂದು ಬೆಂಗಳೂರು ವಿಶ್ವವಿದ್ಯಾಲಯ ಮಾಜಿ ಕುಲಸಚಿವರಾದ ಪ್ರೊ.ಸುಂದರರಾಜ್ ಅರಸ್ ನುಡಿದರು.

ಶನಿವಾರ ನಗರದ ಕೆ.ಎಲ್.ಇ ಸಂಸ್ಥೆಯ ಲಿಂಗರಾಜ ಮಹಾವಿದ್ಯಾಲಯದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಸಕಾರಾತ್ಮಕ ಚಿಂತನೆಯನ್ನು ಹೊಂದಿರಬೇಕು. ಯಾವುದನ್ನು ಸುಲಭವಾಗಿ ಬಿಟ್ಟುಕೊಡಬಾರದು ಕಠಿಣ ಪರಿಶ್ರಮದಿಂದ ಯಶಸ್ಸನ್ನು ಪಡೆಯಬಹುದು. ಔಪಚಾರಿಕ ಶಿಕ್ಷಣ ಜ್ಞಾನವನ್ನು ಒದಗಿಸಿದರೆ, ಅನೌಪಚಾರಿಕ ಶಿಕ್ಷಣ ಜ್ಞಾನದ ಜೊತೆಗೆ ಚಾರಿತ್ರ್ಯವನ್ನು ಒದಗಿಸುತ್ತದೆ ಎಂದು ಹೇಳಿದರು

21 ನೇ ಶತಮಾನ ತಂತ್ರಜ್ಞಾನದಿಂದ ವಿದ್ಯಾರ್ಥಿಗಳಿಗೆ ಅಂಗೈಯಲ್ಲಿ ವಿಶ್ವವೇ ದೊರೆಯುತ್ತಿದೆ. ಇಂದು ಶಿಕ್ಷಣ ಸಂಸ್ಥೆಗಳು ಬರಿ ಪಾಠ ಪ್ರವಚನಗಳಿಗೆ ಸೀಮಿತವಾಗಬಾರದು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಶಿಕ್ಷಣ, ಕಲೆ, ವಿಜ್ಞಾನ, ಕ್ರೀಡೆ, ಯೋಗ ಸಾಧನೆಯ ಕೃಷಿಯಾಗಬೇಕು. ವಿದ್ಯಾರ್ಥಿಗಳು ತೆರದ ಪುಸ್ತಕದಂತೆ ಎಲ್ಲವನ್ನು ಕಲಿಯಬೇಕು ಅದು ಅವರ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾಚಾರ್ಯ ಆರ್.ಎಂ.ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪ್ರಾಚಾರ್ಯರಾದ ಶ್ರೀಮತಿ.ಎಂ.ಆರ್.ಬನಹಟ್ಟಿ ಸ್ವಾಗತಿಸಿದರು, ಬಸಮ್ಮ ಮತ್ತು ಸಂಗಡಿಗರು ಪ್ರಾರ್ಥಿಸಿದರು ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಗಿರಿಜಾ ಹಿರೇಮಠ ವಂದಿಸಿದರು. ದೈಹಿಕ ನಿರ್ದೆಶಕರಾದ ಶ್ರೀ.ಸಿ ರಾಮರಾವ, ಎನ್.ಎಸ್.ಎಸ್ ಸಯೋಂಜಕರಾದ ಡಾ.ಎಚ್.ಎಮ್.ಚನ್ನಪ್ಪಗೋಳ, ಎನ್.ಸಿ.ಸಿ ಕ್ಯಾಪ್ಟನ್ ಡಾ.ಮಹೇಶ ಗುರನಗೌಡರ ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ಎನ್.ಮೂಲಿಮನಿ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಎ.ಮಠಪತಿ, ಐಕ್ಯುಎಸಿ ಸಯೋಂಜಕರಾದ ಡಾ.ಎಚ್.ಎಸ್.ಮೇಲಿನಮನಿ ಹಾಗೂ ಇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button