Belgaum NewsKannada NewsKarnataka News

ಬೆಳಗಾವಿಯಲ್ಲಿ ಅಬ್ಬರಿಸುತ್ತಿರುವ ಮಳೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯಲ್ಲಿ ಶುಕ್ರವಾರ ಸಂಜೆ ಮಳೆ ಅಬ್ಬರಿಸಿದೆ.

ಗುಡುಗು, ಸಿಡಿಲಿನ ಶಬ್ಧದೊಂದಿಗೆ ಶುಕ್ರವಾರ ಸಂಜೆ 4.30ರ ವೇಳೆಗೆ ಮಳೆ ಆರಂಭವಾಗಿದೆ. ದಟ್ಟವಾದ ಮೋಡ ಕವಿದು, ಕೆಲವೇ ಸಮಯದಲ್ಲಿ ಮಳೆ ಶುರುವಾಯಿತು. ಬೆಳಗಾವಿ ನಗರ ಹಾಗೂ ಸುತ್ತಲಿನ ಅನೇಕ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ.

Home add -Advt

ಏಕಾ ಏಕಿ ಮಳೆ ಆರಂಭವಾಗಿದ್ದರಿಂದ ಜನ ಹಾಗೂ ವಾಹನ ಸಂಚಾರಕ್ಕೆ ವ್ಯತ್ಯಯವಾಯಿತು. ಬೀದಿ ಬದಿ ವ್ಯಾಪಾರಸ್ಥರು ತೀವ್ರ ಸಂಕಷ್ಟ ಅನುಭವಿಸಿದರು. ರಾಜಕೀಯ ಪಕ್ಷಗಳ ಚುನಾವಣೆ ಪ್ರಚಾರಕ್ಕೂ ಮಳೆಯಿಂದಾಗಿ ಅಡಚಣೆ ಉಂಟಾಯಿತು.

ಸುಮಾರು ಅರ್ಧ ಗಂಟೆಯಿಂದ ಮಳೆ ಆರ್ಭಟಿಸುತ್ತಿದ್ದು, ಇನ್ನೂ ಮುಂದುವರಿದಿದೆ.

Related Articles

Back to top button