ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಅತ್ಯಂತ ದುಃಖಕರ, ಇಂತಹ ಆಘಾತಕರ ಘಟನೆ ನಾವ್ಯಾರೂ ಊಹಿಸಿರಲಿಲ್ಲ. ಸಮಾಜ ಘಾತಕರನ್ನು ಹಾಗೇ ಬಿಟ್ಟರೆ ನಮ್ಮ ರಾಜ್ಯ ಮತ್ತೊಂದು ಬಿಹಾರ ಆಗುತ್ತದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್ ಗೆ ಭೇಟಿ ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹುಬ್ಬಳ್ಳಿಯ ಕಾಲೇಜು ಕ್ಯಾಂಪಸ್‌ನಲ್ಲಿ, ಅದೂ ಹಾಡಹಗಲೇ ಈ ಘಟನೆ ನಡೆದಿದೆ. ಇಂಥ ಘಟನೆಗಳಿಂದ ಸಮಾಜದಲ್ಲಿ ಸಾಮರಸ್ಯದ ಕೊರತೆಯಾಗುತ್ತೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದ್ದು, ಎಲ್ಲ ಕಡೆ ಮಾಸ್ ಮರ್ಡರ್ ಕಾಮನ್ ಆಗಿದೆ. ಗದಗ್ ನಲ್ಲಿ ನಿನ್ನೆ ನಾಲ್ವರ ಮರ್ಡರ್ ಆಗಿದೆ. ಬೆಂಗಳೂರಿನಲ್ಲಿಯೂ ನಿನ್ನೆ ಮಾಸ್ ಮರ್ಡರ್ ಆಗಿದೆ. ಹಲವಾರು ತಿಂಗಳಿನಿಂದ ಇಂಥ ಘಟನೆ ನಡೆಯುತ್ತಿವೆ. ರೌಡಿಗಳಿಗೆ ಪೊಲೀಸರ ಹೆದರಿಕೆ ಇಲ್ಲದಂತಾಗಿದೆ. ರೌಡಿಗಳಿಗೆ, ಗೂಂಡಾಗಳಿಗೆ ರಾಜ ಮರ್ಯಾದೆ ಸಿಗುತ್ತಿದೆ. ನಾವು ಏನು ಮಾಡಿದರೂ ದಕ್ಕಿಸಿಕೊಳ್ಳಬಹುದು ಅನ್ನುವಂತಾಗಿದೆ ಎಂದು ಆಕ್ರೋಶ ಹೊರ ಹಾಕಿದರು.
ನೇಹಾ ಪ್ರಕರಣದಲ್ಲಿ ಆ ಮಗುವಿನ ತಪ್ಪಿಲ್ಲ. ತಮ್ಮ ಮಕ್ಕಳು ಎಷ್ಟು ಸುರಕ್ಷರಿದ್ದಾರೆ ಅನ್ನೋ ಆತಂಕ ಪಾಲಕರಿಗೆ ಶುರುವಾಗಿದೆ. ಸಿಎಂ ಒಂದು ಟ್ವೀಟ್ ಮಾಡಿದರೆ ಜವಾಬ್ದಾರಿ ಮುಗಿದಂತಲ್ಲ. ಅವರು ಹಾಗೇ ಅಂದುಕೊಂಡಿದ್ದಾರೆ. ಅಂಥ ಶಕ್ತಿಗಳಿಗೆ ಬೆಂಬಲ ಕೊಡೋದನ್ನು ನಿಯಂತ್ರಿಸಬೇಕು. ಈ ಘಟನೆಯ ಉನ್ನತ ಮಟ್ಟದ ತನಿಖೆಯಾಗಿಬೇಕು. ಆದರೆ ಇಲ್ಲಿಯ ಪೊಲೀಸರಿಂದ ಅದು ಆಗೋದಿಲ್ಲ.ಏಕೆಂದರೆ ಅವರು ನಿಷ್ಕ್ರಿಯ ಆಗಿದ್ದಾರೆ. ಅದಕ್ಕಾಗಿ ಒಂದು ಎಸ್ ಐ ಟಿ ಮಾಡಬೇಕು. ರಾಜ್ಯದಲ್ಲಿ ರಾತ್ರೋರಾತ್ರಿ ನಾಲ್ಕಾರು ಜನರು ಮರ್ಡರ್ ಆಗುತ್ತಾರೆ ಅಂದರೆ ಏನು ಅರ್ಥ.ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ನಮ್ಮ ರಾಜ್ಯ ಬಿಹಾರ್ ಆಗುತ್ತೆ. ಈ ಪ್ರಕರಣದ ತನಿಖೆಯನ್ನು ಸ್ಥಳೀಯ ಪೊಲೀಸರಿಗೆ ಬಿಡಬಾರದು ಎಂದು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ