ಬೆಳಗಾವಿ ವಿಭಾಗ ಮಟ್ಟದ ಯುವ ಸಮ್ಮೇಳನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಬೆಳಗಾವಿ ವಿಭಾಗ ಮಟ್ಟದ ಯುವ ಸಮ್ಮೇಳನ ಕಾರ್ಯಾಗಾರ ಹಾಗೂ ತರಬೇತಿ ಶಿಬಿರ ಆಯೋಜಿಸಲಾಗಿತ್ತು.
ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತರ ಫೆಡರೇಷನ್ ರಾಷ್ಟ್ರಾಧ್ಯಕ್ಷ ಡಾ ಜಾವಿದ್ ಜಮಾದಾರ್ ಬೆಳಗಾವಿ ತಂಡಕ್ಕೆ ಪ್ರಶಸ್ತಿ ಪತ್ರ ವಿತರಣೆಯನ್ನು ಮಾಡಿದರು .
ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವಿಜಯಪುರ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಫೆಡರೇಶನ್ ಆಫ್ ಇಂಡಿಯಾ ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಿತು.
ಎರಡು ದಿನಗಳ ಕಾಲ ನಡೆದ ಬೆಳಗಾವಿ ವಿಭಾಗ ಮಟ್ಟದ ಯುವ ಸಮ್ಮೇಳನ ಕಾರ್ಯಾಗಾರ ಪ್ರಶಸ್ತಿ ಪತ್ರ ನೀಡಿ ಗೌರವಿಸಿ ಮಾತನಾಡಿದ ಜಮಾದಾರ್, ಯುವಕರು ಈ ದೇಶದ ಸಂಪನ್ಮೂಲವಾಗಿದ್ದು ಇವರ ಶಕ್ತಿ ಸರಿಯಾಗಿ ಸದ್ಬಳಕೆಯಾಗಬೇಕು ಎಂದು ನುಡಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷರಾದ ಡಾ. ಎಸ್ ಬಾಲಾಜಿ ಮಾತನಾಡಿ, ರಾಷ್ಟ್ರ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಜವಾಬ್ದಾರಿ ಮತ್ತು ಮಹತ್ವ ಪಡೆದುಕೊಂಡಿದೆ. ರಾಜ್ಯದಲ್ಲಿ ಯುವ ಚಟುವಟಿಕೆಗಳನ್ನು ಅಭಿವೃದ್ಧಿಗೊಳಿಸಲು ಕರ್ನಾಟಕ ರಾಜ್ಯ ಯುವ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ ಮಾಡಲು ಸರ್ಕಾರಕ್ಕೆ ಒತ್ತಾಯಿಸಿದರು.
ಮುಖ್ಯವಾಗಿ ಯುವ ಸಂಘಗಳಿಗೆ ಬರುವಂಥ ಕಾರ್ಯಕ್ರಮಗಳಾದ ನಮ್ಮೂರ ಶಾಲೆ, ನಮ್ಮೂರ ಯುವಜನರು ಗ್ರಾಮೀಣ ಕ್ರೀಡೋತ್ಸವ, ತಾಲ್ಲೂಕು ಮಟ್ಟದಲ್ಲಿ ಯುವಜನರಿಗೆ ತರಬೇತಿ ಮತ್ತು ಯುವಜನ ಮೇಳಗಳನ್ನು ಮೊದಲಿನಂತೆ ಪ್ರಾರಂಭಿಸಲು ಆಗ್ರಹಿಸಿದರು.
ಬೆಳಗಾವಿ ತಂಡದ ನಾಯಕರಾಗಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಮತ್ತು ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಸಿದ್ದಣ್ಣ ದುರದುಂಡಿ ಕಾರ್ಯ ನಿರ್ವಹಿಸಿ ಮಾತನಾಡುತ್ತಾ, ಇತ್ತೀಚೆಗೆ ಯುವ ಸಂಘಗಳು ಅಸ್ತಿತ್ವವನ್ನು ಕಳೆದುಕೊಂಡು ಯುವ ಚಟುವಟಿಕೆಗಳು ನಿಷ್ಕ್ರಿಯ ಗೊಳ್ಳುತ್ತಿದ್ದು ಅವುಗಳು ಸರಿ ಹೋಗಬೇಕಾದರೆ ಯುವಜನರಿಗೆ ಪ್ರೋತ್ಸಾಹದಾಯಕವಾದ ನೂತನ ಯೋಜನೆಗಳನ್ನು ಇಲಾಖೆ ಜಾರಿಗೆ ತರಬೇಕೆಂದು ಮನವಿ ಮಾಡಿದರು.
ವಿಜಯಪುರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಎಸ್ ಜಿ ಲೋನಿ, ಅಧೀಕ್ಷಕ ಎಂ ವಾಯ್ ಚಿಂಚಲಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಕೊಟ್ರೇಶ್ ದಾವಣಗೆರೆ, ಚಿತ್ತಪ್ಪ ಯಾದವ್, ಅಕ್ಕಮಹಾದೇವಿ ಮಾದರ್, ಯುವ ಸಂಘದ ಪದಾಧಿಕಾರಿಗಳಾದ ಗೂಳಪ್ಪ ವಿಜಯನಗರ, ಸದಾಶಿವ ದುರದುಂಡಿ, ಲಕ್ಕಪ್ಪ ದುರದುಂಡಿ, ಸತೀಶ್ ಹೊಸಪೇಟೆ, ಶ್ರೀಕಾಂತ್ ನಾಯಕ್, ಮಾದೇವ ದುರದುಂಡಿ, ಸದಾಶಿವ ತಮದಡ್ಡಿ, ಪೂಜಾ ಕಾಂಬಳೆ, ಸಂಜನಾ ಕಾಂಬಳೆ, ವೀಣಾ ಕಾಳಮ್ಮನಗುಡಿ, ಸವಿತಾ ಕೋಟಿಗೆ, ಸ್ವಾತಿ ಕಾಳಮ್ಮನಗುಡಿ, ಸಂಗೀತಾ ಕಾಂಬಳೆ, ಲಕ್ಷ್ಮಿ ಮಾದರ್ ಹಾಗೂ ಬೆಳಗಾವಿ ಜಿಲ್ಲಾ ಯುವಕ ಸಂಘದ ಪದಾಧಿಕಾರಿಗಳು ಮತ್ತು ಎಲ್ಲ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು ಉಪಸ್ಥಿತರಿದ್ದರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ