Latest

ಅನರ್ಹರ ಪ್ರಕರಣ ತುರ್ತು ವಿಚಾರಣೆಗೆ ಸುಪ್ರಿಂ ಕೋರ್ಟ್ ನಕಾರ

ಅನರ್ಹರ ಪ್ರಕರಣ ತುರ್ತು ವಿಚಾರಣೆಗೆ ಸುಪ್ರಿಂ ಕೋರ್ಟ್ ನಕಾರ

ಪ್ರಗತಿವಾಹಿನಿ ಸುದ್ದಿ, ನವದೆಹಲಿ –

ಅನರ್ಹ ಶಾಸಕರ ಪ್ರಕರಣವನ್ನು ತುರ್ತಾಗಿ ವಿಚಾಣೆಗೆ ತೆಗೆದುಕೊಳ್ಳಬೇಕೆನ್ನುವ ಕೋರಿಕೆಗೆ ಸುಪ್ರಿಂ ಕೋರ್ಟ್ ನಿರಾಕರಿಸಿದೆ.

ಇದರಿಂದಾಗಿ ಕಾಂಗ್ರೆಸ್, ಜೆಡಿಎಸ್ ನಿಂದ ಆಯ್ಕೆಯಾಗಿ ರಾಜಿನಾಮೆ ನೀಡಿರುವ ಶಾಸಕರಿಗೆ ಈಗ ದೊಡ್ಡ ತಲೆನೋವು ಉಂಟಾಗಿದೆ. ಸಮ್ಮಿಶ್ರ ಸರಕಾರ ಪತನಕ್ಕೆ ಕಾರಣರಾಗಿರುವ ಶಾಸಕರ ರಾಜಿನಾಮೆಯನ್ನು ಅಂದಿನ ಸ್ಪೀಕರ್ ರಮೇಶ್ ಕುಮಾರ ಸ್ವೀಕರಿಸದೆ ಆ ಎಲ್ಲ 17 ಶಾಸಕರನ್ನು ಅನರ್ಹಗೊಳಿಸಿದ್ದರು.

ಸ್ಪೀಕರ್ ತೀರ್ಮಾನ ಪ್ರಶ್ನಿಸಿ ಅವರೆಲ್ಲ ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಸ್ಪೀಕರ್ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದ್ದ ಸುಪ್ರಿಂ ಕೋರ್ಟ್ ಇದೀಗ ತುರ್ತಾಗಿ ವಿಚಾರಣೆ ಕೈಗೆತ್ತಿಕೊಳ್ಳಲು ಕೂಡ ನಿರಾಕರಿಸಿದೆ.

ಇದರಿಂದಾಗಿ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಮಂತ್ರಿಯಾಗಬೇಕೆನ್ನುವ ಅನರ್ಹ ಶಾಸಕರ ಆಸೆಗೆ ಸಧ್ಯಕ್ಕೆ ತಣ್ಣೀರೆರಚಿದಂತಾಗಿದೆ.

ಇದನ್ನೂ ಓದಿ – ಅತೃಪ್ತರಿಗೆ ಬಿಗ್ ಶಾಕ್; ಮತ್ತೆ 14 ಶಾಸಕರು ಅನರ್ಹ

ಕಾಂಗ್ರೆಸ್ ನ 13, ಜೆಡಿಎಸ್ ನ 3 ಹಾಗೂ ಕೆಪಿಜೆಪಿಯ ಓರ್ವ ಶಾಸಕರನ್ನು ಅನರ್ಹಗೊಳಿಸಲಾಗಿದೆ. ಇವರು ಕಾಂಗ್ರೆಸ್-ಜೆಡಿಎಸ್ ಸರಕಾರ ಪತನವಾಗಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು. ಹಾಗಾಗಿ ಬಿಜೆಪಿ ಇವರಿಗೆ ಸಚಿವಸ್ಥಾನ ನೀಡಲು ನಿರ್ಧರಿಸಿತ್ತು. ಅದಕ್ಕಾಗಿಯೇ ಬಿಜೆಪಿ ಸಂಪುಟದಲ್ಲಿ ಇವರಿಗಾಗಿ ಸ್ಥಾನ ಖಾಲಿ ಬಿಡಲಾಗಿತ್ತು.

ಈಗ ಖಾಲಿ ಬಿಡಲಾಗಿರುವ ಸ್ಥಾನಗಳನ್ನು ಎಷ್ಟು ದಿನ ಹಾಗೆಯೇ ಬಿಡಬೇಕು? ಬಿಜೆಪಿ ಶಾಸಕರಿಂದ ತುಂಬಬೇಕೆ ಎನ್ನುವ ಗೊಂದಲ ಬಿಜೆಪಿಗೆ ಉಂಟಾಗಿದೆ. ಈಗ ಬಿಜೆಪಿ ಶಾಸಕರಿಂದ ತುಂಬಿದಲ್ಲಿ ಅನರ್ಹರ ಪ್ರಕರಣ ಪೂರ್ಣಗೊಂಡ ತಕ್ಷಣ ಅವರಿಗೆ ಅವಕಾಶ ಕಲ್ಪಿಸುವುದು ಕಷ್ಟವಾಗಲಿದೆ.

ಸುಪ್ರಿಂ ಕೋರ್ಟ್ ಸಧ್ಯದಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳದಿದ್ದಲ್ಲಿ, ಅಷ್ಟರೊಳಗೆ ಅವರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾದಲ್ಲಿ ಈ ಅನರ್ಹ ಶಾಸಕರು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಉಪಚುನಾವಣೆಗೆ ಸ್ಪರ್ಧಿಸಲೂ ಇವರಿಗೆ ಅವಕಾಶವಾಗುವುದಿಲ್ಲ.ಅಂತಹ ಸಂದರ್ಭದಲ್ಲಿ ಕುಟುಂಬದಲ್ಲಿ ಅಥವಾ ಸಂಬಂಧಿಕರಲ್ಲಿ ಯಾರನ್ನಾದರೂ ಚುನಾವಣೆ ಕಣಕ್ಕಿಳಿಸಲು ಮುಂದಾಗಬಹುದು.

ಇದನ್ನೂ ಓದಿ – ರಮೇಶ ಜಾರಕಿಹೊಳಿ ಸೇರಿ ಮೂವರು ಶಾಸಕರು ಅನರ್ಹ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button