Kannada NewsKarnataka News

ನಮಗೂ ಸ್ವಾತಂತ್ರ್ಯವಿದೆ, ನಾವು ಸಹ ಸಾಧನೆ ಮಾಡಿ ತೋರಿಸಬೇಕು

ನಮಗೂ ಸ್ವಾತಂತ್ರ್ಯವಿದೆ, ನಾವು ಸಹ ಸಾಧನೆ ಮಾಡಿ ತೋರಿಸಬೇಕು

 

ಪ್ರಗತಿವಾಹಿನಿ ಸುದ್ದಿ, ಅಥಣಿ-

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೊಜನೆ ಸಂಘದ ಉದ್ದೇಶವು ಗ್ರಾಮೀಣ ಭಾಗದ ಮಹಿಳೆಯರ ಅಭಿವೃದ್ದಿ , ವಿವಿಧ ಚಟುವಟಿಕೆಗಳು ಹಾಗೂ ಗ್ರಾಮೀಣ ಭಾಗದ ಜನರು ಸಾಧನೆ ಮಾಡಲು ನಾವು ಅವರೊಂದಿಗೆ ಶ್ರಮಿಸುವುದು ಹಾಗೂ ಅವರಿಗೆ ಬೇಕಾಗಿರುವಂತಹ ಜೀವನಾವಶ್ಯಕ ಅನುಕೂಲ ಮಾಡಿಕೊಡುತ್ತೇವೆ ಎಂದು ಸಂಘದ ಜಿಲ್ಲಾ ನಿರ್ದೆಶಕರಾದ ಕೃಷ್ಣಾ.ಟಿ ಅವರು ಹೇಳಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಯೊಜನೆಯಿಂದ ಬಳ್ಳಿಗೇರಿ ಗ್ರಾಮದಲ್ಲಿ   ವರಲಕ್ಮೀ ಪೂಜೆ ಹಾಗೂ ಸಂಪಿಗೆ ಜ್ಞಾನ ವಿಕಾಸ ಕೇಂದ್ರದ ವಾರ್ಷಿಕೋತ್ಸವ ಜರುಗಿತು. ಈ ವರ್ಷ ನೆರೆ ಪ್ರವಾಹ ಬಂದು ಗ್ರಾಮೀಣ ಭಾಗದ ಜನತೆಗೆ ತುಂಬಾ ಸಮಸ್ಯೆಯಾಗಿದೆ. ಸಾಕಷ್ಟು ಹಾನಿಯಾಗಿದೆ , ನಮ್ಮ ಸಂಘದ ವತಿಯಿಂದಲೂ ಸಹ ಕೂಡ ಸಹಾಯವನ್ನ ಮಾಡಿದ್ದೇವೆ , ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿ ಎಲ್ಲಾ ಹೆಣ್ಣುಮಕ್ಕಳು ಅಭಿವೃದ್ದಿ ಹೊಂದಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ವಾಸಂತಿ ಪಾಟೀಲ ಅವರು ಮಾತನಾಡಿ, ಮಹಿಳೆಯರು ಬರೀ ನಾಲ್ಕು ಗೋಡೆಯ ಮಧ್ಯದಲ್ಲಿ ಬದುಕುವುದಲ್ಲ, ನಮಗೂ ಸ್ವಾತಂತ್ರವಿದೆ, ನಾವು ಸಹ ಸಾಧನೆ ಮಾಡಿ ತೋರಿಸಬೇಕು , ಮಹಿಳೆಯರಿಗಾಗಿ ಮಹಿಳಾ ಸಾಂತ್ವನ ಕೇಂದ್ರವಿದೆ. ಅದು ಮಹಿಳೆಯರು ಯಾರ ಮೇಲೂ ಅವಲಂಬನೆಯಾಗದೆ ಬದುಕಲು ಹಲವಾರು ಯೊಜನೆಗಳನ್ನು ಕೊಟ್ಟಿದೆ. ಅದರ ಉಪಯೋಗ ತೆಗೆದುಕೊಳ್ಳಿ, ಸ್ವಾವಲಂಬಿಯಾಗಿ ಬದುಕಿ ಎಂದರು.
ಈ ವೇಳೆ ಸದಲಗಾ ಗ್ರಾಮದ  ಶೃದ್ದಾನಂದ ಸ್ವಾಮಿಜಿಗಳು ಮಾತನಾಡಿದರು, ಸಂಘದ ವತಿಯಿಂದ ಅಂಗವಿಕಲ ಮಕ್ಕಳಿಗೆ ವ್ಹೀಲ್‌ಚೇರ್ ಉಚಿತವಾಗಿ ನೀಡಿದರು , ನಂತರ ಗ್ರಾಮದ ಮಕ್ಕಳಿಂದ ಸಾಂಸ್ಕ್ರತಿಕ ಕಾರ್ಯಕ್ರಮಗಳು ನಡೆದವು .
ಈ ವೇಳೆ ಮಾಧುರಿ ಶಿಂಧೆ , ಪುಥಳಬಾಯಿ ನಾಯಿಕ, ವ್ಹಿ.ಎಸ್.ವಂಟಮೂರಿ, ರಾಜಶ್ರೀ ವಿಜಾಪೂರೆ , ಗೀತಾ ಮಡ್ಡಿ, ಬಸವರಾಜ ಬಮ್ಮನಾಳ ಹಾಗೂ ಅನೇಕ ಗ್ರಾಮಸ್ಥರು ಹಾಜರಿದ್ದರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button