ಪ್ರಗತಿವಾಹಿನಿ ಸುದ್ದಿ: EMRI ಗ್ರೀನ್ ಹೆಲ್ತ್ ಸರ್ವಿಸ್ ಕಂಪನಿ ಬೆಳಗಾವಿ ಜಿಲ್ಲೆಗೆ ಹೊಸ ವಿದ್ಯುನ್ಮಾನ ಹೊಂದಿರುವ 108 ಆಂಬುಲೆನ್ಸ್ ಗಳನ್ನು ಬಿಡುಗಡೆ ಮಾಡಿದೆ.
ಬೆಳಗಾವಿ ಜಿಲ್ಲೆಯ ಕೆಲವು ಲೊಕೇಶನ್ ಗಳಲ್ಲಿ ಹಳೆಯ ಆಂಬುಲೆನ್ಸ್ ಗಳಿದ್ದು ಈಗ ಅದನ್ನು ಬದಲಿಸಿ ಹೊಸ ವಿದ್ಯುನ್ಮಾನಗಳನ್ನು
ಹೊಂದಿರುವ ಹೊಸ ಆಂಬುಲೆನ್ಸ್ ಗನ್ನು ಬಿಡುಗಡೆ ಗೊಳಿಸಿದ್ದಾರೆ.
ಹೊಸ ಆಂಬುಲೆನ್ಸ್ ನಲ್ಲಿ ಅಡ್ವಾನ್ಸ್ ಲೈಫ್ ಸಪೋರ್ಟ್ (ALS), ವೆಂಟಿಲೇಟರ್, ಡಿ ಪೆಬ್ರಿಲೆಟರ್, (ಪಲ್ಸ ನಿಂತಾಗ ಕೊಡುವಂತ ಕರೆಂಟ್ ಶಾಕ್) ಅಡ್ವಾನ್ಸ್ ಹೈ ಟೇಕ್ ಮೋನಿಟರ್,ಸಿರಿಂಗ್ ಪಂಪ್, ಆಕ್ಸಿಜನ, ಹೊಂದಿರುವ ನೂತನ ಆಂಬುಲೆನ್ಸ್ ಗಳನ್ನು ಬಿಡುಗಡೆ ಗೊಳಿಸಿದ್ದು, ಬೆಳವಿಯ ಜಿಲ್ಲೆಯಲ್ಲಿ ಗೋಕಾಕ 3, ಯಾದವಾಡ 1, ಅಥಣಿ 2, ರಾಯಬಾಗ 2, ಚಿಕ್ಕೋಡಿ 1, ಖಾನಾಪುರ 3, ಬೆಳಗಾವಿ 1 ಬೈಲಹೊಂಗಲ 1,ರಾಮದುರ್ಗ 1, ಸವದತ್ತಿ 2,ಹುಕ್ಕೇರಿ 3 ಹೀಗೆ ಒಟ್ಟು 20 ಆಂಬುಲೆನ್ಸ್ ಗಳನ್ನು ಬಿಡುಗಡೆ ಗೊಳಿಸಿದ್ದು ಸಾರ್ವಜನಿಕರು ಉಚಿತವಾಗಿ ಇದರ ಸದುಪಯೋಗ ಪಡೆದು ಕೊಳ್ಳಬಹುದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ