GIT add 2024-1
Kore@40
Beereshwara 33

*ಮತ್ತೊಮ್ಮೆ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿಸಲು ಚಿಕ್ಕೋಡಿಯಿಂದ ಅಣ್ಣಾಸಾಹೇಬ ಜೊಲ್ಲೆ ಗೆಲ್ಲಿಸಿ: ಮಹಾಂತೇಶ ಕವಟಗಿಮಠ*

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ: ಚಿಕ್ಕೋಡಿ ನಗರದಲ್ಲಿ ಸಾಯಿ ಸೊಸಾಯಿಟಿ ಸಭಾಗೃಹದಲ್ಲಿ ಲೋಕಸಭೆ ಚುನಾವಣೆ ಅಂಗವಾಗಿ ಚಿಕ್ಕೋಡಿ ನಗರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಯವರ ಪರವಾಗಿ ವಿಧಾನ ಪರಿಷತ್ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಹಾಗೂ ಮಾಜಿ ಸಚಿವೆ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪ್ರಚಾರ ಸಭೆ ನಡೆಸಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಮಹಾಂತೇಶ ಕವಟಗಿಮಠ ಮಾತನಾಡಿ ಭಾರತವನ್ನೂ ಬಡತನದಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ನರೇಂದ್ರ ಮೋದಿ ಅವರು ದೊಡ್ಡ ಯೋಜನೆಯನ್ನೇ ರೂಪಿಸಿದ್ದಾರೆ. ಮುಂಬರುವ 5 ವರ್ಷಗಳಲ್ಲಿ ಅದನ್ನು ಸಾಕಾರವಾಗುವುದನ್ನು ನೋಡಲು ಮತ್ತೆ ಮೋದಿಯವರನ್ನು ಪ್ರಧಾನಿಯನ್ನಾಗಿಸೋಣ. ಬಿಜೆಪಿ ಅಭ್ಯರ್ಥಿಯಾದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಬಹುಮತದಿಂದ ಗೆಲ್ಲಿಸೋಣವೆಂದು ಕಾರ್ಯಕರ್ತರಿಗೆ ಕರೆ ನೀಡಲಾಯಿತು.

Emergency Service

ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಂಸದರು 8810 ಅಧಿಕ ಕೋಟಿಯ ಅಭಿವೃದ್ದಿ ಕಾರ್ಯಗಳು ಮಾಡಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಗಳು ಲೋಕಸಭಾ ಕ್ಷೇತ್ರದ ಜನರಿಗೆ ಮುಟ್ಟಿಸುವ ಕಾರ್ಯವನ್ನು ಸಂಸದರು ಮಾಡಿದ್ದಾರೆ.ಕ್ಷೇತ್ರದಲ್ಲಿ ಸಿ.ಸಿ.ಟಿ.ವಿ. ಆಂಬುಲೆನ್ಸ್, ಬಸ್ ನಿಲ್ದಾಣ, ರಸ್ತೆ, ಹಾಗೂ ಹಲವಾರು ಕಾರ್ಯಗಳನ್ನು ಮಾಡಿದ್ದಾರೆ.ಮುಂದಿನ 5 ವರ್ಷ ಚಿಕ್ಕೋಡಿ ಕ್ಷೇತ್ರವನ್ನು ಮತ್ತೊಮ್ಮೆ ಅಭಿವೃದ್ದಿ ಕಾಣಲು ಅಣ್ಣಾಸಾಹೇಬ ಜೊಲ್ಲೆ ಪ್ರಚಂಡ ಬಹುಮತದಿಂದ ಗೆಲ್ಲಿಸಿಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಮಾಜಿ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ,ಬೆಳಗಾವಿ ಪ್ರಭಾರಿಗಳಾದ ಚಂದ್ರಶೇಖರ ಕವಟಗಿ, ರಾಜ್ಯ ಸೌಹಾರ್ದ ಫೇಡರೇಶನ್ ಉಪಾಧ್ಯಕ್ಷರಾದ ಜಗದೀಶ ಕವಟಗಿಮಠ, ಸಂಜಯ ಅಡಕೆ, ಸುಭಾಷ ಕವಲಾಪುರೆ, ಮಾಜಿ ಶಾಸಕರಾದ ಬಾಳಾಸಾಹೇಬ ವಡ್ಡರ, ಜಿಲ್ಲಾಧ್ಯಕ್ಷರಾದ ಸತೀಶ ಅಪ್ಪಾಜಿಗೋಳ, ಪುರಸಭೆ ಮಾಜಿ ಅಧ್ಯಕ್ಷರಾದ , ಪ್ರವೀಣ ಕಾಂಬಳೆ, ಪವನ ಮಹಾಜನ,ಸ್ಥಳೀಯ ಮುಖಂಡರು,ಗಣ್ಯರು, ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Laxmi Tai add
Bottom Add3
Bottom Ad 2