Kannada NewsKarnataka News

ಪೆನ್‌ಡ್ರೈವ್ ಪ್ರಕರಣ: ಸ್ಥಳ ಮಹಜರಿಗೆ ಮುಂದಾದ ಎಸ್ಐಟಿ

ಪ್ರಗತಿವಾಹಿನಿ ಸುದ್ದಿ: ದೇಶದಲ್ಲೇ ಸಂಚಲನ ಸೃಷ್ಟಿಸಿರುವ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣದ ತನಿಖೆ ಮುಂದುವರೆದಿದ್ದು ಇಂದು ತನಿಖೆ ನಡೆಸಲು ಹೊಳೆನರಸೀಪುರದ ಎಚ್.ಡಿ.ರೇವಣ್ಣ ನಿವಾಸಕ್ಕೆ ಎಸ್‌ಐಟಿ ತಂಡ ಭೇಟಿ ನೀಡಲಿದೆ.

ಲೈಂಗಿಕ ಕಿರುಕುಳದ ಬಗ್ಗೆ ಸಂತ್ರಸ್ತ ಮಹಿಳೆ ನೀಡಿದ್ದ ದೂರಿನ ಮೇರೆಗೆ ಇಂದು ಎಸ್‌ಐಟಿ ತಂಡ ಶಾಸಕ ಎಚ್‌.ಡಿ.ರೇವಣ್ಣ ನಿವಾಸದಲ್ಲಿ ಸಂತ್ರಸ್ತ ಮಹಿಳೆ ಸಮ್ಮುಖದಲ್ಲಿ ಸ್ಥಳ ಮಹಜರು ನಡೆಸಲಿದ್ದಾರೆ. ಸಂಸದ ಪ್ರಜ್ವಲ್ ರೇವಣ್ಣ ಅವರು, ಮನೆ ಕೆಲಸ ಮಾಡುವ ವೇಳೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಮಹಿಳೆ  ದೂರು ಕೊಟ್ಟಿದ್ದರು. ಇದೀಗ ಸ್ಥಳ ಮಹಜರು ನಡೆಸಲು ಎಸ್ಐಟಿ ಸಿದ್ದತೆ ಮಾಡಿಕೊಂಡಿದೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button