ಡೆಂಗ್ಯೂಗೆ ಮಹಿಳೆ ಬಲಿ: ಅನಾಥರಾದ 3 ಕಂದಮ್ಮಗಳು
ಪ್ರಗತಿವಾಹಿನಿ ಸುದ್ದಿ, ಗೋಕಾಕ:
ನೇರೆ ಪ್ರವಾಹದಿಂದ ಗೋಕಾಕ ನಗರವೇ ತಲ್ಲಣಗೊಂಡಿದ್ದು ಎಲ್ಲರಿಗೂ ಗೊತ್ತಿದ್ದ ವಿಷಯ. ಅದರ ಪರಿಣಾಮವಾಗಿ ನಗರದ ಸಾವಿರಾರು ಜನರು ಬೀದಿಪಾಲಾಗುವ ಸಂದರ್ಭ ಉಂಟಾಯಿತು. ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಪಾಸ್ತಿ ಕಳೆದುಕೊಂಡು ಜನರು ಇಲ್ಲಿಯವರೆಗೂ ಚೇತರಿಸಿಕೊಳ್ಳುವದಕ್ಕಾಗುತ್ತಿಲ್ಲ.
ಇದರ ಮಧ್ಯೆ ಸರಕಾರದ ನಿರ್ಲಕ್ಷ್ಯದಿಂದ ನಗರದ ಅನಾರ ಮೋಹಲ್ಲಾ ಗಲ್ಲಿಯ ನಿವಾಸಿ ರೇಖಾ ರಾಣು ಕಲಾಲ (30) ಮಹಿಳೆ ಡೆಂಗ್ಯೂ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಅವರ 3 ಮಕ್ಕಳು ತಾಯಿಯನ್ನು ಕೆಳೆದುಕೊಂಡು ಅನಾಥರಾಗಿದ್ದಾರೆ. ಇವರು ವಾಸಿಸುತ್ತಿದ್ದ ಮನೆ ನಿರತರ ಮಳೆ ಮತ್ತು ನೆರೆ ಪ್ರವಾಹದಿಂದ ನೆಲಸಮಗೊಂಡಿದೆ. ಇವರ ಗೋಳು ಕೇಳಲು ಸರ್ಕಾರ ಇನ್ನೂವರೆಗೂ ಇವರ ಬಳಿ ಸುಳಿಯುತ್ತಿಲ್ಲ. ಮತ್ತು ಯಾವುದೇ ಕ್ರಮಕೊಡ ಕೈಗೊಂಡಿಲ್ಲ.
ಸರಕಾರ ಜನರಿಗಾಗಿ ಗಂಜಿ ಕೇಂದ್ರಗಳನ್ನು ನಿರ್ಮಿಸಿದರೆ ಮಾತ್ರ ಜನರ ತೊಂದರೆಗಳು ಮುಗಿಯುವದಿಲ್ಲ, ಅವರ ಆರೋಗ್ಯದ ಕಡೆಗೂ ಗಮನ ಹರಿಸಬೇಕಾಗುತ್ತದೆ. ನಗರ ಸಭೆ ಅಧಿಕಾರಿಗಳು ಇದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ. ಜನರ ಆರೋಗ್ಯ ಮತ್ತು ಅವರಿಗೆ ಸರಿಯಾದ ಸಮಯಕ್ಕೆ ಊಟ ನೀರು ಗಂಜಿ ಕೇಂದ್ರದಲ್ಲಿ ಒದಗಿಸಲಾಗುತ್ತಿಲ್ಲ ಎನ್ನುವ ಆರೋಪ ಕೇಳಿ ಬರುತ್ತಿದೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಜನರ ಕಡೆಗೆ ಗಮನ ಹರಿಸಲಿ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ