Kannada NewsKarnataka NewsPolitics

ಕಾಂಗ್ರೆಸ್ ದೇಶವನ್ನು ಒಡೆಯೋದಕ್ಕೆ ಹಿಂದೆ ಮುಂದೆ ನೋಡಲ್ಲ: ಪ್ರಲ್ಲಾದ ಜೋಶಿ

ಪ್ರಗತಿವಾಹಿನಿ ಸುದ್ದಿ: ಅಧಿಕಾರಕ್ಕಾಗಿ ಕಾಂಗ್ರೆಸ್ ದೇಶವನ್ನು ಒಡೆಯೋದಕ್ಕೆ ಹಿಂದೆ ಮುಂದೆ ನೋಡಲ್ಲವೆಂದು ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಕೇಂದ್ರ ಸಚಿವ ಪ್ರಲ್ಲಾದ ಜೋಶಿ ಅವರು ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ವರದಿಗಾರೊಂದಿಗೆ ಮಾತನಾಡಿದ ಅವರು. ದೇಶ ಒಂದೇ ಇರಲಿಲ್ಲ ಅನ್ನೋದು ಪಿತ್ರೋಡಾ ಹೇಳಿಕೆಯ ಅರ್ಥ. ಕಾಂಗ್ರೆಸ್ ಪಕ್ಷ ಸಾಮಾಜಿಕ ಹಿನ್ನೆಲೆ, ಆರ್ಥಿಕ ಹಿನ್ನೆಲೆಯಲ್ಲಿ ದೇಶ ಒಡೆಯುತ್ತಿದೆ. ದೇಶವನ್ನು ಒಂದು ಮಾಡೋ ವಿಚಾರ ಅವರಿಗೆ ಇಲ್ಲ. ದೇಶ ಒಡೆಯೋ ವಿಚಾರ ಕಾಂಗ್ರೆಸ್’ನವರಿಗೆ ಇದೆ. ಬ್ರಿಟಿಷರ ಸಿದ್ದಾಂತ, ನಾವು ಬಂದ ಮೇಲೆ ದೇಶ ಒಂದಾಯ್ತು ಅಂತಾರೆ. ಡಿಕೆ ಸುರೇಶ ದಕ್ಷಿಣ ಭಾರತ ಬೇರೆ ಅಗಬೇಕು ಅಂತಾರೆ. ಶ್ಯಾಮ ಪಿತ್ರೋಡಾ ಜನರ ಚರ್ಮದ ಬಣ್ಣದ  ಆಧಾರದ ಮೇಲೆ ದೇಶ ಒಡೆಯೋ ಹುನ್ನಾರ ಮಾಡ್ತಿದಾರೆ. ಕಾಂಗ್ರೆಸ್ ಅಧಿಕಾರದಲ್ಲಿ ಇರದೆ ಹೋದ್ರೆ ದೇಶ ಒಡೆಯೋಕು ಹಿಂದೆ ಮುಂದೆ ನೋಡಲ್ಲ ಅನ್ನೋದು ಸ್ಪಷ್ಟವಾಗಿದೆ ಎಂದರು.

ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ನೋಡಿದರೆ ಈ ಕೇಸ್ ನಲ್ಲಿ ಅತ್ಯಂತ ಗೊಂದಲವಿದೆ.‌ ಈ ಪ್ರಕರಣದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ಆಗಬೇಕು. ತನಿಖೆ ನಿಕ್ಷಪಾತವಾಗಿ ನಡೆಯಬೇಕು. ಆದ್ರೆ ಇಲ್ಲಿಯವರೆಗೆ ಸರ್ಕಾರ ಯಾವುದೇ ರೀತಿ ಉತ್ತರ ಕೊಟ್ಟಿಲ್ಲ ಎಂದರು.

21 ನೇ ತಾರೀಖಿನಂದು ಪೆನ್ ಡ್ರೈವ್ ಹೊರಗೆ ಬಂತು. ಹಾಸನ , ಮಂಡ್ಯ ಅಲ್ಲದೇ ಇಲ್ಲಿನ ಹುಬ್ಬಳ್ಳಿ – ಧಾರವಾಡ ಹಳ್ಳಿಭಾಗದಲ್ಲಿ ಜನರು ವಿಡಿಯೋ ನೋಡಿದ್ದಾರೆ. ಆದ್ರೂ ಯಾಕೇ ಸರ್ಕಾರ ಕಣ್ಮುಚ್ಚಿ ಕುಳಿತಿತ್ತು. ಬೇಗನೇ ಎಫ್ಐಆರ್ ಮಾಡಲಿಲ್ಲ? ವಿದೇಶಕ್ಕೆ ಹೋಗೋದನ್ನ ತಡೆಯಲಿಲ್ಲ, ಸರ್ಕಾರ ಇಂತಹ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ.‌ ರೇವಣ್ಣನವರ ವಿಷಯದಲ್ಲಿ ಸರ್ಕಾರದ ನಡೆಯನ್ನ ಗಮನಿಸಿದರೆ ಸಂಶಯಕ್ಕೆ ಎಡೆಮಾಡಿಕೊಡುತ್ತಿದೆ. ಕಿಡ್ನಾಪ್ ವಿಚಾರದಲ್ಲಿ ಸರಿಯಾದ ರಿಕಾರ್ಡ್ ಗಳನ್ನ ಮೆಂಟೇನ್ ಮಾಡಿಲ್ಲ. ಹಾಗಾಗಿ ಈ ಪ್ರಕರಣವನ್ನ ಸಿಬಿಐಗೆ ಕೊಡಬೇಕು ಎಂದರು. 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button