Kannada NewsKarnataka News

ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಸ್ಥಳದಲ್ಲೇ ಸಾವು

ಪ್ರಗತಿವಾಹಿನಿ ಸುದ್ದಿ: ವಿದ್ಯುತ್ ಹೈಟೆನ್ಷನ್ ವೈರ್ ತಾಗಿ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕೊಪ್ಪಳ ತಾಲೂಕಿನ ಕುಕನೂರು ತಾಲೂಕಿನ ಚಿಕ್ಕೆನಕೊಪ್ಪ ಗ್ರಾಮದಲ್ಲಿ ನಡೆದಿದೆ.‌

ವಿಂಡ್ ಪವರ್ ಕಂಪನಿ ನಿರ್ಲಕ್ಷ್ಯದಿಂದಲೇ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು  ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮೇಕೆಗಳನ್ನು ಮೇಯಿಸಲು ಹೋದಾಗ ವಿದ್ಯುತ್ ತಗುಲಿ ಈರಪ್ಪ ಕುರಿ(55) ಮೃತ ವ್ಯಕ್ತಿ.

Home add -Advt

ಮೇಕೆಗಳಿಗೆ ಮರದ ತಪ್ಪಲು ಹಾಕಲು ಮರದ ಟೊಂಗೆ ಕತ್ತರಿಸಲು ಈರಪ್ಪ ಮುಂದಾಗಿದ್ದಾನೆ. ಈ ವೇಳೆ ಹೈಟೆನ್ಷನ್ ವೈಯರ್ ಮರಕ್ಕೆ ತಾಗಿದ್ದರಿಂದ ಈರಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆಯೇ ಈರಪ್ಪ ಮೃತಪಟ್ಟಿದ್ದಾನೆ.‌ ಆದರೆ ರಾತ್ರಿಯಾದ್ರು ಈರಪ್ಪ ಮನೆಗೆ ಬಾರದೇ ಇದ್ದಾಗ ಆತಂಕಗೊಂಡಿದ್ದ ಕುಟುಂಬಸ್ಥರು, ಈರಪ್ಪನಿಗಾಗಿ ಹುಡುಕಾಟ ನಡೆಸಿದಾಗ ಮರದ ಬಳಿ ಈರಪ್ಪನ ಶವ ಪತ್ತೆಯಾಗಿದೆ.‌

ಕುಕನೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ವಿಂಡ್ ಪವರ್ ಕಂಪನಿ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.‌ ಹೈಟೆನ್ಷನ್ ವೈಯರ್ ಇದ್ದರು ಯಾವುದೇ ಸೂಚನೆ ನೀಡಿಲ್ಲ ಎಂದು ಆಕ್ರೋಶ ಹೊರ ಹಾಕಿ, ಮೃತ ವ್ಯಕ್ತಿಯ ಕುಟುಂಬಕ್ಕೆ ವಿಂಡ್ ಪವರ್ ಕಂಪನಿ ಪರಿಹಾರ ನೀಡಬೇಕು ಎಂದು ಆಗ್ರಹ ಮಾಡಿದ್ದಾರೆ.‌

Related Articles

Back to top button