3 ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ಇನ್ಸ್‌ಟ್ಯೂಟ್ ಆಫ್ ಸ್ಟ್ರಕ್ಚರಲ್ ಇಂಟಿಗ್ರಿಟಿ ಆಂಡ್ ಫೆಲ್ಯೂವರ್ ಸ್ಟಡಿಸ್, ಬೆಂಗಳೂರು ಹಾಗೂ ಡಿಹೆಚ್‌ಐಒ ಸೆಂಟರ್ ಫಾರ್ ಎಕ್ಸ್‌ಲನ್ಸ್, ಬೆಂಗಳೂರು ಜಂಟಿಯಾಗಿ ಫಟೀಗ್, ಡುರೆಬಿಲಿಟಿ ಆಂಡ್ ಪ್ರ್ಯಾಕ್ಚ್‌ರ್ ಮೆಕ್ಯಾನಿಕ್ಸ್ ವಿಷಯದಲ್ಲಿ ಮೂರು ದಿನಗಳ ೩ನೇ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಜ್ಞಾನ ಸಂಗಮದಲ್ಲಿ ಏರ್ಪಡಿಸಲಾಗಿದೆ.
ಸಮ್ಮೇಳನದ ಉದ್ಘಾಟನಾ ಸಮಾರಂಭವು ದಿನಾಂಕ ೨೯-೦೮-೨೦೧೯ರಂದು ಜರುಗಿತು.
ಸದರಿ ೩ನೇ ಅಂತರರಾಷ್ಟ್ರೀಯ ಮಟ್ಟದ ಸಮ್ಮೇಳನವು ಫಟೀಗ್, ಡುರೆಬಿಲಿಟಿ ಆಂಡ್ ಪ್ರ್ಯಾಕ್ಚ್‌ರ್ ಮೆಕ್ಯಾನಿಕ್ಸ್ ಹಾಗೂ ಈ ತಂತ್ರಜ್ಞಾನದ ಅಳವಡಿಕೆ ವಿಷಯಗಳಲ್ಲಿ ಶಿಕ್ಷಣ ತಜ್ಞರು ಹಾಗೂ ಕೈಗಾರಿಕಾ ರಂಗದ ತಂತ್ರಜ್ಞರು ವಿಚಾರ ವಿನಿಮಯ ಮಾಡಿಕೊಳ್ಳಲು ವೇದಿಕೆಯಾಗಿ ಪರಿಣಮಿಸಲಿದೆ.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಶ್ರಾಂತ ಪ್ರಾಧ್ಯಾಪಕರಾದ ಪದ್ಮಶ್ರೀ ಡಾ. ಭಗವತುಲಾ ದತ್ತಗುರು ಮುಖ್ಯ ಅತಿಥಿಗಳಾಗಿ ಸಮ್ಮೇಳನವನ್ನು ಉದ್ಘಾಟಿಸಿದರು. ವಿತಾವಿ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವಿಶ್ರಾಂತ ನಿರ್ದೇಶಕರು, ಸೆಂಟ್ರಲ್ ಫಾವರ್ ರಿಸರ್ಚ ಇನ್ಸ್‌ಟ್ಯೂಟ್ ಹಾಗೂ ತಾಂತ್ರಿಕ ನಿರ್ದೇಶಕರು, ಇನ್ಸ್‌ಟ್ಯೂಟ್ ಆಫ್ ಸ್ಟ್ರಕ್ಚರಲ್ ಇಂಟಿಗ್ರಿಟಿ ಆಂಡ್ ಫೆಲ್ಯೂವರ್ ಸ್ಟಡಿಸ್ ಡಾ. ಎಸ್. ಸೀತಾರಾಮ್ ಹಾಗೂ ವಿತಾವಿ ಕುಲಸಚಿವರಾದ ಡಾ. ಎ. ಎಸ್. ದೇಶಪಾಂಡೆ ಅವರು ಗೌರವಾನ್ವಿತ ಅತಿಥಿಗಳಾಗಿದ್ದರು.
ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಡಾ. ಭಗವತುಲಾ ದತ್ತಗುರು ಅವರು ಏರೋಸ್ಪೆಸ್, ಸಿವಿಲ್, ಮೆಕ್ಯಾನಿಕಲ್ ಇಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭೌತಿಕ ವಸ್ತುಗಳ ಬಾಳಿಕೆ ಪ್ರಮಾಣವನ್ನು ಅಂದಾಜಿಸುವ ಪ್ರಾಮುಖ್ಯತೆಯನ್ನು ವಿವರಿಸಿದರು. ಭೌತಿಕ ವಸ್ತುಗಳ ಬಾಳಿಕೆ ಪ್ರಮಾಣವನ್ನು ಮುಂಚಿತವಾಗಿ ನಿರ್ಧರಿಸುವ ಸಂಶೋಧನೆಗೆ ಆದ್ಯತೆ ನೀಡುವುದು ಇಂದಿನ ಅವಶ್ಯಕತೆಯಾಗಿದೆ ಎಂದು ಹೇಳಿದರು.
ಗೌರವಾನ್ವಿತ ಅತಿಥಿಗಳಾದ ಡಾ. ಎಸ್. ಸೀತಾರಾಮ್ ಅವರು ಮಾತನಾಡಿ, ಇತ್ತೀಚಿಗೆ ಕೈಗಾರಿಕೆಗಳಲ್ಲಿ ತಂತ್ರಜ್ಞಾನ ಗಣನೀಯ ಪ್ರಮಾಣದಲ್ಲಿ ಬದಲಾವಣೆಯಾಗಿದೆ. ಇದಕ್ಕೆ ಪರಿಹಾರವಾಗಿ ಬಹುವಿಧ ತಾಂತ್ರಿಕ ಶಿಕ್ಷಣದ ಅಳವಡಿಕೆ ಅವಶ್ಯಕತೆ ಇದೆ. ಎಲ್ಲ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಬಹುರೂಪಿ ತಾಂತ್ರಿಕ ಸುಶಿಕ್ಷಣದ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಮಾತನಾಡಿ, ಆರ್ಥಿಕ ಅನುಪಾತವನ್ನು ಗಮದಲ್ಲಿಟ್ಟುಕೊಂಡು ಭೌತಿಕ ವಸ್ತುಗಳನ್ನು ಉತ್ಪಾದಿಸುವ ಅವಶ್ಯಕತೆ ಇದೆ. ಬೆಸಿಕ್ ಮೆಕ್ಯಾನಿಕ್ಸ್, ಮಟಿರಿಯಲ್ಸ್ ಮ್ಯಾನ್ಯುಫೆಕ್ಚ್‌ರಿಂಗ್, ಸ್ಟ್ರಕ್ಚರಲ್ ಇಂಜಿನಿಯರಿಂಗ್, ಏರೋಸ್ಪೆಸ್ ಇಂಜಿನಿಯರಿಂಗ್ ಮುಂತಾದ ಕ್ಷೇತ್ರಗಳಲ್ಲಿ ಅನೇಕ ಸವಾಲುಗಳಿದ್ದು, ಸದರಿ ಕ್ಷೇತ್ರಗಳಲ್ಲಿ ಯುವ ಇಂಜಿನಿಯರ್‌ಗಳು ಸಂಶೋಧನೆಗೆ ಮುಂದಾಗಬೇಕೆಂದು ಎಂದು ಹೇಳಿದರು. ಕುಲಸಚಿವರಾದ ಡಾ. ಎ. ಎಸ್. ದೇಶಪಾಂಡೆ ಅವರು ಸಮ್ಮೇಳನದ ಬಗ್ಗೆ ವಿವರಿಸಿದರು.
ಇನ್ಸ್‌ಟ್ಯೂಟ್ ಆಫ್ ಸ್ಟ್ರಕ್ಚರಲ್ ಇಂಟಿಗ್ರಿಟಿ ಆಂಡ್ ಫೆಲ್ಯೂವರ್ ಸ್ಟಡಿಸ್‌ನ ತಾಂತ್ರಿಕ ನಿರ್ದೇಶಕರಾದ ಡಾ. ಟಿ. ಜಗದೀಶ ಅವರು ಸ್ವಾಗತಿಸಿದರು. ವಿತಾವಿ ಪ್ರಾಧ್ಯಾಪಕರಾದ ಡಾ. ಆರ್. ಆರ್. ಮಾಳಗಿ ವಂದನಾರ್ಪಣೆ ಮಾಡಿದರು. ದೇಶದ ವಿವಿಧ ಭಾಗಗಳಿಂದ ಹಾಗೂ ಅಮೇರಿಕಾ, ಸ್ಪೇನ್ ದೇಶಗಳಿಂದ ೫೦೦ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ