ಲಕ್ಷ್ಮಿತಾಯಿ ಫೌಂಡೇಶನ್ ಹಾಗೂ ದಾನಿಗಳ ನೆರವಿನಿಂದ ಪರಿಹಾರ ವಿತರಣೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ಗ್ರಾಮೀಣ ಕ್ಷೇತ್ರದ ವಿವಿಧೆಡೆ ಪ್ರವಾಹ ಸಂತ್ರಸ್ತರಿಗೆ ಪರಿಹಾರ ವಿತರಣೆ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.
ಸರಕಾರ ನೀಡುವ ತಾತ್ಕಾಲಿಕ ಪರಿಹಾರದ ಜೊತೆಗೆ, ಲಕ್ಷ್ಮಿ ತಾಯಿ ಫೌಂಡೇಶನ್ ಹಾಗೂ ದಾನಿಗಳ ನೆರವಿನಿಂದ ಪರಿಹಾರ ಸಾಮಗ್ರಿಗಳನ್ನು ಹಂಚಲಾಗುತ್ತಿದೆ.
ಪ್ರತಿ ಗ್ರಾಮದ ಸಮೀಕ್ಷೆ ನಡೆಸಲಾಗಿದ್ದು, ಜನರಿಗೆ ಅಗತ್ಯವಾಗಿರುವ ವಸ್ತುಗಳ ಪಟ್ಟಿ ತಯಾರಿಸಲಾಗಿದೆ. ತುರ್ತಾಗಿ ಅವರು ಬದುಕು ಕಟ್ಟಿಕೊಳ್ಳಲು ಅಗತ್ಯವಿರುವ ಸಾಮಗ್ರಿಗಳನ್ನು ವಿತರಿಸಲಾಗುತ್ತಿದೆ.
ಪ್ರವಾಹ ಪೀಡಿತ ಅಂಬೇವಾಡಿ ಗ್ರಾಮದಲ್ಲಿ ಸರ್ಕಾರದ ವತಿಯಿಂದ 6,200 ರೂಪಾಯಿಗಳಂತೆ ಒಟ್ಟು 43 ಜನರಿಗೆ ಪರಿಹಾರದ ಚೆಕ್ ಗಳನ್ನು ಗರುವಾರ ಹಸ್ತಾಂತರಿಸಲಾಯಿತು. ಅಲ್ಲದೆ, ಆಹಾರ ಸಾಮಾಗ್ರಿಗಳು, ದಿನ ಬಳಕೆಯ ವಸ್ತುಗಳು, ಸೀಮೆ ಎಣ್ಣೆ ಮುಂತಾದವುಗಳನ್ನು ಕೂಡ ಒದಗಿಸಲಾಯಿತು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಂಗಾಧರ್, ಯುವರಾಜ ಕದಂ, ಗ್ರಾಮ ಪಂಚಾಯತ್ ಸದಸ್ಯರುಗಳಾದ ಬಾಹು ತುಡವೆಕರ್, ಮಹೇಶ ಕಣಬರಕರ್, ಮಲ್ಲಪ್ಪ ಕಾಂಬಳೆ, ಗ್ರಾಮ ಲೆಕ್ಕಾಧಿಕಾರಿ, ಅಮೂಲ್ ಭಾತ್ಕಂಡೆ, ಕುಲದೀಪ ತೆರಳೆ, ವಿಕ್ರಾಂತ ತೆರಳೆ, ಶಿವಾಜಿ ಕಾಂಬಳೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ