ಪ್ರಗತಿವಾಹಿನಿ ಸುದ್ದಿ: ಒರಿಸ್ಸಾ ರಾಜ್ಯದ ಮಲ್ಕಾನ್‌ಗಿರಿ ಅರಣ್ಯ ಪ್ರದೇಶದಿಂದ ಅಕ್ರಮ ಗಾಂಜಾ ಸಾಗಾಟ ಮಾಡುತ್ತಿದ್ದವರನ್ನು ಎನ್‌ಸಿಬಿ ಹಾಗೂ ಬೀದರ್ ಜಿಲ್ಲಾ ಪೊಲೀಸರು ಭರ್ಜರಿ ಜಂಟಿ ಕಾರ್ಯಾಚರಣೆ ಮಾಡುವ ಮೂಲಕ 15 ಕೋಟಿ ಮೌಲ್ಯದ 1500 ಕೆಜಿಗೂ ಅಧಿಕ ಗಾಂಜಾ ಜಪ್ತಿ ಮಾಡಿದೆ.
ಬೀದರ್ ಜಿಲ್ಲೆ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಲಾಗುತಿತ್ತು, ಖಚಿತ ಮಾಹಿತಿ ಮೇರೆಗೆ ಹಿಂಬಾಲಿಸಿಕೊಂಡು ಬಂದ ಬೆಂಗಳೂರು ಎನ್‌ಸಿಬಿ ತಂಡ, ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ವನಮಾರಪಳ್ಳಿಯ ಬಳಿ ಗಾಂಜಾ ಜಪ್ತಿ ಮಾಡಿದ್ದಾರೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ಔರಾದ್ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮಾಡಲಾಗುತ್ತಿದೆ.
ಲಾರಿಯಲ್ಲಿ ಸುತ್ತಲೂ ಸಿಮೆಂಟ್ ಇಟ್ಟಿಗೆ ಇಟ್ಟು ಒಳಗೆ ಗಾಂಜಾ ಪ್ಯಾಕೆಟ್ ಅಡಗಿಸಲಾಗಿತ್ತು. ಪ್ರಕರಣದ ಕುರಿತು ಎನ್‌ಸಿಬಿ ತಂಡದಿಂದ ತನಿಖೆ ಮುಂದುವರಿದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಲಂಗೋಟಿ ಮಾಹಿತಿ ನೀಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ