Belagavi NewsBelgaum NewsKannada NewsKarnataka News

ಬೆಳೆಹಾನಿ ಪರಿಹಾರ ನೇರವಾಗಿ ರೈತರ ಖಾತೆಗೆ: ಡಿಸಿ ನಿತೇಶ್ ಪಾಟೀಲ್

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ;  ಬೆಳಗಾವಿ ಜಿಲ್ಲೆಯಲ್ಲಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬರಗಾಲದಿಂದಾಗಿ ಉಂಟಾದ ಬೆಳೆಹಾನಿಯ ಪರಿಹಾರವನ್ನು ಫೂಟ್ಸ್ ತಂತ್ರಾಂಶದ ಮೂಲಕ ಒಟ್ಟು 3,74,066 ರೈತರಿಗೆ ಒಟ್ಟು ರೂ 316.52 ಕೋಟಿಗಳ ಪರಿಹಾರವನ್ನು ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಡಿ.ಬಿ.ಟಿ ಮೂಲಕ ಸಂದಾಯ ಮಾಡಲಾಗಿರುತ್ತದೆ ಎಂದು  ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.‌

ವಿವಿಧ ತಾಂತ್ರಿಕ ಸಮಸ್ಯೆಯಿಂದ (ಬ್ಯಾಂಕ್ ಖಾತೆಗಳಿಗೆ ಆಧಾರ ಜೋಡಣೆ ಬಾಕಿ-32,986 ಆಧಾರ ಹಾಗೂ ಫ್ರಟ್ಸ್ ಐಡಿ ಹೆಸರು ವ್ಯತ್ಯಾಸ-7,594 ಹಾಗೂ ಇತರೆ ಕಾರಣಗಳು 1,576) ಪರಿಹಾರ ಸಂದಾಯವಾಗದೇ ಇರುವ ರೈತರು ಹೆಚ್ಚಿನ ಮಾಹಿತಿಗಾಗಿ ತಮ್ಮ ತಾಲೂಕಿನ ತಹಶೀಲ್ದಾರ ಕಾರ್ಯಾಲಯ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯದ ಸಹಾಯ ಕೇಂದ್ರಕ್ಕೆ (Help Desk) ಸಂಪರ್ಕಿಸಲು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅವರು, ತಿಳಿಸಿದ್ದಾರೆ.‌

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button