Belagavi NewsBelgaum NewsKannada NewsKarnataka NewsPolitics

ಯಕ್ಸಂಬಾ : ಸಂಸದ ಅಣ್ಣಾಸಾಹೇಬ ಜೊಲ್ಲೆ ಜನಸಂಪರ್ಕ ಸಭೆ

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ಜನರ ಸಮಸ್ಯೆ ಆಲಿಸಿ, ಪರಿಹರಿಸುವುದು ನಮ್ಮ ಪ್ರಥಮ ಆಧ್ಯತೆಯಾಗಿದೆ ಎಂದು ಚಿಕ್ಕೋಡಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.
ಅವರು ಯಕ್ಸಂಬಾ ಪಟ್ಟಣದಲ್ಲಿ ಜನಸಂಪರ್ಕ ಸಭೆ (ಜನತಾ ದರ್ಶನ) ಆಯೋಜಿಸಿ ಕ್ಷೇತ್ರದ ವಿವಿಧ ಕಡೆಯಿಂದ ಬಂದಿದ್ದ ಸಾರ್ವಜನಿಕರಿಂದ ಮನವಿ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

Home add -Advt

ಕಳೆದ ೫ ವರ್ಷಗಳಿಂದ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಸಂಸದನಾಗಿ ಕೆಲಸ ಮಾಡಲು ಕ್ಷೇತ್ರದ ಜನರ ಸಹಕಾರವೇ ಕಾರಣ. ಆದ್ದರಿಂದ ಅವರ ಸೇವೆ ಮಾಡಲು ಸದಾ ಸಿದ್ದರಿರುವುದಾಗಿ ಹೇಳಿದರು.
ಈ ಸಲದ ಚುನಾವಣೆಯಲ್ಲಿಯು ಸಹ ನನ್ನ ಮತದಾರರು ನನ್ನ ಕೈ ಬಿಡಲಿಲ್ಲ ಎಂಬ ವಿಶ್ವಾಸವಿದೆ. ಮತದಾನದ ಬಳಿಕ ಜನರು ನನ್ನೊಂದಿಗೆ ಮತದಾನದ ಕುರಿತು ಚರ್ಚಿಸಿ ಗೆಲ್ಲುವ ನಿರೀಕ್ಷೆ ಹೇಳಿಕೊಂಡಿದ್ದಾರೆ. ಈ ಸಲ ಮತ್ತೆ ಚಿಕ್ಕೋಡಿ ಲೋಕಸಭೆ ಕ್ಷೇತ್ತದಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ತಿಳಿಸಿದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಜನರು ತಮ್ಮ ಕ್ಷೇತ್ರದಲ್ಲಿ ಆಗಬೇಕಾದ ಕೆಲಸ ಹಾಗೂ ಆಯುಷ್ಮಾನ ಯೋಜನೆಯಡಿ ವೈಧ್ಯಕೀಯ ಸೌಲಭ್ಯಕ್ಕಾಗಿ ಅವರು ನೀಡಿರುವ ಅಹವಾಲು ಸ್ವೀಕರಿಸಿ ಕೆಲಸಗಳನ್ನು ಮಾಡಿ ಕೊಡುವ ಭರವಸೆ ನೀಡಿದರು.
ಬಸವಜ್ಯೋತಿ ಯುಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಹಾಗೂ ಬಿಜೆಪಿ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು.


Related Articles

Back to top button