Belagavi NewsBelgaum NewsKannada NewsKarnataka NewsLatest

*ಕೆ.ಇ.ಆರ್.ಸಿ. ಸಾರ್ವಜನಿಕ ವಿಚಾರಣೆ ಸಭೆ ಅ.07 ರಂದು*

ಕೆ.ಇ.ಆರ್.ಸಿ. ಸಾರ್ವಜನಿಕ ವಿಚಾರಣೆ ಸಭೆ ಅ.07 ರಂದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ವತಿಯಿಂದ ದಿನಾಂಕ 14.08.2026 ರಂದು “ಕರಡು ಕ.ವಿ.ನಿ.ಆ. ವಿದ್ಯುಚ್ಛಕ್ತಿ ಸರಬರಾಜು ನಿಯಮಾವಳಿಗಳು-2026” ನ್ನು ಅಧಿಸೂಚಿಸಿದ್ದು ಸಾರ್ವಜನಿಕ ವಿಚಾರಣೆ ಸಭೆಯನ್ನು ನಡೆಸಲಿದೆ.

ದಿನಾಂಕ: 07.10.2026 ಬುಧವಾರ ರಂದು ಬೆಳಿಗ್ಗೆ 11  ಗಂಟೆಗೆ “ನೂತನ ಜಿಲ್ಲಾ ಪಂಚಾಯತ ಸಭಾಂಗಣ, ಕಛೇರಿ ರಸ್ತೆ, ಕೋರ್ಟ ಕಂಪೌಂಡ್, 4360/ಎ, ಕಛೇರಿ ರಸ್ತೆ, ಖಡೇ ಬಜಾರ, ರವಿವಾರ ಪೇಟೆ, ಬೆಳಗಾವಿ, ಇಲ್ಲಿ ಸಾರ್ವಜನಿಕ ವಿಚಾರಣೆ ನಡೆಯಲಿದೆ.

ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಭಾಗೀದಾರರು ಕರಡು ವಿನಿಮಯಗಳ ಕುರಿತು ಆಸಕ್ತರು ಸಾರ್ವಜನಿಕ ವಿಚಾರಣೆಯಲ್ಲಿ ಭಾಗವಹಿಸಿ. ತಮ್ಮ ಸಲಹೆ/ಆಕ್ಷೇಪಣೆಗಳನ್ನು ಮೌಖಿಕ/ ಲಿಖಿತ ರೂಪದಲ್ಲಿ ಸಲ್ಲಿಸಲು ಹು.ವಿ.ಸ.ಕಂ.ನಿ ಪ್ರಧಾನ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button