GIT add 2024-1
Beereshwara 33

ಸಿದ್ಧಾಂತ ಆಸ್ಪತ್ರೆ ಉದ್ಘಾಟಿಸಿದ ಶಶಿಕಲಾ ಜೊಲ್ಲೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ : ತಾಲೂಕಿನ ಶಮನೇವಾಡಿ ಗ್ರಾಮದಲ್ಲಿ ಡಾ. ಅಮೋಲ ಖುರಪೆ ಅವರ ಮಾಲೀಕತ್ವದ ನೂತನ ಸಿದ್ಧಾಂತ ಆಸ್ಪತ್ರೆಯನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಶಾಸಕರಾದ ಶಶಿಕಲಾ ಜೊಲ್ಲೆ ಅವರು ಉದ್ಘಾಟಿಸಿ, ಆಸ್ಪತ್ರೆ ಸಾರ್ವಜನಿಕರಿಗೆ ಒಳ್ಳೆಯ ಸೇವೆ ನೀಡುತ್ತಾ, ಯಶಸ್ಸಿನ ಪಥದಲ್ಲಿ ಸಾಗಲಿ ಎಂದು ಶುಭ ಹಾರೈಸಿದರು.
ಬಳಿಕ ಅವರು ಪ್ರೀತಿಯಿಂದ ನೀಡಿದ ಸತ್ಕಾರ ಸ್ವೀಕರಿಸಿ, ಅವರ ಆತಿಥ್ಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಯಕುಮಾರ ಖೋತ, ಕುಮಾರ ಹೆಗ್ರೆ, ಅಣ್ಣಾಸಾಬ ತೇರದಾಳೆ, ಪಿಂಟು ಗುಣಿಕೆ, ಕುಮಾರ ಬೇಡಗೆ, ಶೀತಲ ಪೂಜಾರಿ ಹಾಗೂ ಖುರಪೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

Emergency ServiceLaxmi Tai add
Bottom Add3
Bottom Ad 2