Kannada NewsKarnataka NewsNational

*ಶ್ರಾವಣಕ್ಕೂ ಮುನ್ನ ಇಳಿಕೆಯಾದ ಚಿನ್ನ*

ಪ್ರಗತಿವಾಹಿನಿ ಸುದ್ದಿ: ಕಳೆದ ವಾರ ಸತತವಾಗಿ ಏರಿಕೆ ಕಂಡು ಗಗನಕ್ಕೇರಿದ್ದ ಚಿನ್ನದ ಬೆಲೆಯಲ್ಲಿ ಇಂದು ಸ್ವಲ್ಪ ಪ್ರಮಾಣದ ಇಳಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯದಲ್ಲಾದ ವ್ಯತ್ಯಾಸ ಹಾಗೂ ಬಾಂಡ್‌ ಇಳುವರಿಯಲ್ಲಿ ಕಂಡುಬಂದ ಬದಲಾವಣೆಗಳು ಚಿನ್ನದ ದರದ ಮೇಲೆ ಪರಿಣಾಮ ಬೀರಿವೆ. 

Home add -Advt

ಕಳೆದ ವಾರ ಒಂದೇ ವಾರದಲ್ಲಿ ಪ್ರತಿ ಗ್ರಾಮ್ ಚಿನ್ನದ ಮೇಲೆ ಬರೋಬ್ಬರಿ 765 ರೂ. ರಷ್ಟು ಭಾರಿ ಏರಿಕೆಯಾಗಿತ್ತು. ಆದರೆ, ಇಂದು ಸೋಮವಾರ ಪ್ರತಿ ಗ್ರಾಮ್ ಚಿನ್ನದ ಬೆಲೆಯಲ್ಲಿ 35 ರೂ. ರಷ್ಟು ಇಳಿಕೆ ದಾಖಲಾಗಿದೆ. ಭಾರತೀಯ ಮಾರುಕಟ್ಟೆ ಮಾತ್ರವಲ್ಲದೆ, ಜಾಗತಿಕ ಮಟ್ಟದಲ್ಲೂ ಹಲವು ದೇಶಗಳಲ್ಲಿ ಬಂಗಾರದ ದರ ತುಸು ತಗ್ಗಿದೆ ಎಂದು ವರದಿಯಾಗಿದೆ.

ಚಿನ್ನದ ದರದಲ್ಲಿ ಇಳಿಕೆಯಾಗಿದ್ದರೂ, ಬೆಳ್ಳಿ ಬೆಲೆಯಲ್ಲಿ ಇಂದು ಯಾವುದೇ ವ್ಯತ್ಯಾಸವಾಗಿಲ್ಲ. ಬೆಳ್ಳಿ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ.

ಪ್ರಸ್ತುತ ಜಾಗತಿಕ ಆರ್ಥಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ಈ ಸಣ್ಣ ಪ್ರಮಾಣದ ದರ ವ್ಯತ್ಯಾಸವಾಗಿದ್ದು, ಮುಂಬರುವ ದಿನಗಳಲ್ಲಿ ದರ ಮತ್ತಷ್ಟು ಏರಿಳಿತ ಕಾಣುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

Related Articles

Back to top button