ಪ್ರಗತಿವಾಹಿನಿ ಸುದ್ದಿ; 2014ರಲ್ಲಿ ಚೆನ್ನೈನ ಯುಎಸ್ ಕಾನ್ಸುಲೇಟ್ ಹಾಗೂ ಬೆಂಗಳೂರಿನ ಇಸ್ರೇಲ್ ರಾಯಭಾರಿ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಶಂಕಿತ ಉಗ್ರನನ್ನು ಎನ್ಐಎ ಅರೆಸ್ಟ್ ಮಾಡಿದೆ.
ನೂರುದ್ದೀನ್ ಅಲಿಯಾಸ್ ರಫಿ ಬಂಧಿತ ಶಂಕಿತ ಉಗ್ರ. ಮೈಸೂರಿನ ರಾಜೀವನಗರದಲ್ಲಿ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ 2014ರಲ್ಲಿ ಚೆನ್ನೈನ ಯುಎಸ್ ಕಾನ್ಸುಲೇಟ್ ಹಾಗೂ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿ ಇರುವ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ.
ಇನ್ನು ಶಂಕಿತ ಉಗ್ರ ಕೊಲಂಬೋದಲ್ಲಿರುವ ಪಾಕಿಸ್ತಾನಿ ಹೈಕಮಿಷನ್ ಕಚೇರಿಯಲ್ಲಿ ಉದ್ಯೋಗಿಯಾಗಿರುವವನ ಜತೆ ಸಂಪರ್ಕ ಹೊಂದಿದ್ದ. ಪಾಕಿಸ್ತಾನ ಪ್ರಜೆ ಅಮೀರ್ ಜುಬೇರ್ ಸಿದ್ದಿಕಿಯ ಅಣತಿ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದ. ಅಲ್ಲದೇ ಪಾಕಿಸ್ತಾನ ಬೇಹುಗಾರರಿಗೆ ನೂರುದ್ದೀನ್ ಹಣ ಸಹಾಯ ಮಾಡುತ್ತಿದ್ದ ಸದ್ಯ ಮೈಸೂರಿನಲ್ಲಿ ವಶಕ್ಕೆ ಪಡೆದ ಶಂಕಿತನಿಂದ ಒಂದು ಡ್ರೋನ್, ಮೊಬೈಲ್, ಲಾಪ್ಟಾಪ್, ಪೆನ್ಡ್ರೈವ್ ವಶಕ್ಕೆ ಪಡೆಯಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ