ಪ್ರಗತಿವಾಹಿನಿ ಸುದ್ದಿ: ಬಿಹಾರದ ಮದರಸಾದಲ್ಲಿ ಮೊದಲು ಸಿಲಿಂಡರ್ ಸ್ಫೋಟ ಎಂದು ಹೇಳಲಾಗುತ್ತಿತು. ಆದರೆ, ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇಲ್ಲಿ ಬಾಂಬ್ ಸ್ಫೋಟ ನಡೆದಿರುವುದು ಬೆಳಕಿಗೆ ಬಂದಿದೆ
ಬಾಂಬ್ ಸ್ಫೋಟಗೊಂಡು ಮೌಲ್ವಿ ಸೇರಿ ಇಬ್ಬರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಗಾಯಗೊಂಡ ಮೌಲ್ವಿಯನ್ನು ಇಮಾಮುದ್ದೀನ್ ಹಾಗೂ ಮತ್ತೊಬ್ಬರು ವಿದ್ಯಾರ್ಥಿ ಎಂದು ತಿಳಿದುಬಂದಿದೆ. ಮದರಸಾದೊಳಗೆ ಬಿದ್ದಿದ್ದ ಬಾಂಬ್ ಅನ್ನು ಅಲ್ಲಿದ್ದ ವಿದ್ಯಾರ್ಥಿಯೊಬ್ಬ ಚೆಂಡು ಎಂದು ತಿಳಿದು ಎಸೆದಿದ್ದಾನೆ. ಘಟನೆಯಲ್ಲಿ ಮೌಲ್ವಿ ಹಾಗೂ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದೆ ಎಂದು ಗೊತ್ತಾಗಿದೆ.
ಮೌಲ್ವಿ ಇಮಾಮುದ್ದೀನ್ ಮತ್ತು ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನೆ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಹೆಚ್ಚುವರಿ ಎಸ್ಪಿ ರಾಜ್ ಕಿಶೋರ್ ಸಿಂಗ್ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ. ವಿಧಿವಿಜ್ಞಾನ ತಂಡವನ್ನು ಕರೆಸಲಾಗಿದೆ. ಸ್ಥಳವನ್ನು ಪರಿಶೀಲನೆ ನಡೆಸಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ