ಜಿಐಟಿ ವಿದ್ಯಾರ್ಥಿಗಳಿಗೆ ವಿಶ್ವಸಂಗಮ 2024ರಲ್ಲಿ ಗೆಲುವು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೆಎಲ್ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ ಟೆಕ್ನಾಲಜಿ (ಕೆಎಲ್ಜಿಐಟಿ) ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡವು ಇತ್ತೀಚೆಗೆ, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವ ಸಂಗಮ 2024 ತಾಂತ್ರಿಕ ಸ್ಪರ್ಧೆಯಲ್ಲಿ ಜನರಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ·
ತೇಜಸ್ ಲಹೋಟಿ, ಪ್ರಜ್ವಲ್ ಪಾಟೀಲ್, ನಿಧಿ ಶಿರೋಳ್ ಮತ್ತು ಯುವರಾಜ್ ಡಿ ಅವರ ತಂಡವು ಟ್ರೇಷರ್ ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿ ರು. 2500 ನಗದು, ಸಂತೋಷ್ ಪಾಟೀಲ್ ಮತ್ತು ಸ್ವಯಂ ಬಿ ಅವರು ಕ್ಯಾಡ್ ಕ್ಲಾಶ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ 2ನೇ ಸ್ಥಾನದೊಂದಿಗೆ 1500 ನಗದು, ಹಾಗೆಯೇ ಆದಿತ್ಯ ಕಿಲ್ಲೇಕರ್ ಮತ್ತು ರುತುಜಾ ಜಾಧವ್ ಅವರನ್ನೊಳಗೊಂಡ 3ನೇ ಸ್ಥಾನವನ್ನು ಗಳಿಸಿತು. ಕೆಎಲ್ಜಿಐಟಿ ಸಂಸ್ಥೆಯ ಪ್ರಾಂಶುಪಾಲ ಡಾ. ಎಂ.ಎಸ್. ಪಾಟೀಲ್ ಮತ್ತು ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ವೈಭವ ಚಾಟೆ ಅವರು ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ವಿದ್ಯಾರ್ಥಿಗಳ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ