
ಪ್ರಗತಿವಾಹಿನಿ ಸುದ್ದಿ: ಕಳ್ಳರಿಗೆ ಪೊಲೀಸರ ಬಗ್ಗೆಯೂ ಕಿಂಚಿತ್ತೂ ಭಯವಿಲ್ಲದಾಗಿದೆ. ಇಲ್ಲೊಬ್ಬ ಖತರ್ನಾಕ್ ಕಳ್ಳ ಕಮಿಷ್ನರ್ ಕಚೇರಿ ಆವರಣದಲ್ಲಿ ನಿಲ್ಲಿಸಿದ ಸಿಆರ್ ಪಿಎಫ್ ( ಕೇಂದ್ರೀಯ ಮೀಸಲು ಪೊಲೀಸ್ ಪಡೆ ) ಬಸನ್ನೇ ಕಳ್ಳತನ ಮಾಡಲು ಯತ್ನಿಸಿ ಸಿಕ್ಕಿ ಬಿದ್ದಿದ್ದಾನೆ.
ಕಲಬುರ್ಗಿ ನಗರದ ಪೊಲೀಸ್ ಠಾಣೆ ಆವರಣದಲ್ಲಿ ಈ ಘಟನೆ ನಡೆದಿದೆ. ಕೆಎ 32 ಜಿ 1550 ನಂಬರ್ ನ ಸಿಆರ್ ಪಿಎಫ್ ಬಸ್ ನ್ನು ಕಮೀಷ್ನರ್ ಕಚೇರಿ ಆವರಣದಲ್ಲಿ ನಿಲ್ಲಿಸಲಾಗಿತ್ತು. ಈ ಬಸ್ ನ್ನು ಕಳ್ಳತನ ಮಾಡಲು ಸೋನು ಭಗೀರಥ ಎಂಬ ಕಳ್ಳಯತ್ನಿಸಿದ್ದಾನೆ.
ಕಂಠಪೂರ್ತಿ ಕುಡಿದು ಕಮೀಷ್ನರ್ ಕಚೇರಿ ಆವರಣಕ್ಕೆ ಬಂದ ಸೋನು ಬಗೀರಥ, ಅಲ್ಲಿಯೇ ನಿಲ್ಲಿಸಿದ್ದ ಸಿಆರ್ ಪಿಎಫ್ ಬಸ್ ಹತ್ತಿದ್ದಾನೆ. ಆದರೆ ಬಸ್ ನಲ್ಲಿ ಓರ್ವ ಪೊಲೀಸ್ ಪೇದೆ ಇದ್ದು, ಅವರು ನಿದ್ದೆಗೆ ಜಾರಿದ್ದರು. ಈ ವೇಳೆ ಸೋನು ಭಗೀರಥ, ನಿಧಾನವಾಗಿ ಪೊಲೀಸ್ ಕಾನ್ಸ್ ಟೇಬಲ್ ಜೇಬಿನಲ್ಲಿದ್ದ ಬಸ್ ಕೀ ತೆಗೆದುಕೊಂಡು ಬಸ್ ಸ್ಟಾರ್ಟ್ ಮಡಿದ್ದಾನೆ. ಬಸ್ ಸ್ಟಾರ್ಟ್ ಆಗುತ್ತಿದ್ದಂತೆ ಪೊಲೀಸ್ ಪೇದೆಗೆ ಎಚ್ಚರವಾಗಿದೆ. ಬಸ್ ಸೀಟ್ ನಲ್ಲಿ ಕುಳಿತು ಬಸ್ ಸ್ಟಾರ್ಟ್ ಮಾಡುತ್ತಿದ್ದ ಕಳ್ಳನನ್ನು ಹಿಡಿದು ಬಂಧಿಸಿದ್ದಾರೆ.
ಬಂಧಿತ ಆರೋಪಿ ಸೋನು ಛತ್ತೀಸ್ ಗಢ ಮೂಲದವನಾಗಿದ್ದು, ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ. ಕಲಬುರ್ಗಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ