ಕೆಎಂಎಫ್ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧ ಆಯ್ಕೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಕರ್ನಾಟಕ ಹಾಲು ಮಹಾಮಂಡಳಿಯ ಅಧ್ಯಕ್ಷರಾಗಿ ಬಾಲಚಂದ್ರ ಜಾರಕಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಸಲ್ಲಿಸಿದ್ದ ಮಾಜಿ ಸಚಿವ ಎಚ್.ಡಿ.ರೇವಣ್ಣ ಸೂಚಕರ ಮೂಲಕ ನಾಮಪತ್ರ ವಾಪಸ್ ಪಡೆದಿದ್ದರಿಂದ ಬಾಲಚಂದ್ರ ಮಾತ್ರ ಕಣದಲ್ಲಿ ಉಳಿದಿದ್ದರು. ಹಾಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಘೋಷಿಸಿದರು.
ಬಾಲಚಂದ್ರ ಜಾರಕಿಹೊಳಿ ಇಂದು ಬೆಳಗ್ಗೆ ತಮ್ಮ ನಾಮಪತ್ರ ಸಲ್ಲಿಸಿದ್ದರು. 17 ನಿರ್ದೇಶಕರಲ್ಲಿ ಬಾಲಚಂದ್ರ 13 ಜನರ ಬೆಂಬಲ ಹೊಂದಿದ್ದರು. ಹಾಗಾಗಿ ಅವರ ಆಯ್ಕೆ ಖಚಿತವಾಗಿತ್ತು. ಆದಾಗ್ಯೂ ಕಳೆದ ತಿಂಗಳು ಚುನಾವಣೆ ಘೋಷಣೆಯಾದ ಸಂದರ್ಭದಲ್ಲಿ ರೇವಣ್ಣ ತಮ್ಮ ನಾಮಪತ್ರ ಸಲ್ಲಿಸಿದ್ದರು. ಆ ನಂತರ ಚುನಾವಣೆ ಪ್ರಕ್ರಿಯೆಯನ್ನು ಸರಕಾರ ಮುಂದೂಡಿತ್ತು.
ಇಂದು ರೇವಣ್ಣ ಕೆಎಎಫ್ ಬಳಿ ಸುಳಿಯಲಿಲ್ಲ. ಆದರೆ ಅವರ ಸೂಚಕರ ಮೂಲಕ ಅವರು ತಮ್ಮ ನಾಮಪತ್ರ ಹಿಂಪಡೆದರು.
ಇದರಿಂದಾಗಿ ಇದೇ ಮೊದಲ ಬಾರಿಗೆ ಕೆಎಂಎಫ್ ರೇವಣ್ಣ ಹಿಡಿತದಿಂದ ಜಾರಿ ಬೆಳಗಾವಿ ಜಿಲ್ಲೆಯ ಅದರಲ್ಲೂ ಜಾರಕಿಹೊಳಿ ತೆಕ್ಕೆಗೆ ಬಂದಂತಾಗಿದೆ. ರಾಜ್ಯಾದ್ಯಂತ ಇರುವ ಜಿಲ್ಲಾ ಹಾಲು ಒಕ್ಕೂಟಗಳು ಕೆಎಎಫ್ ಅಡಿಯಲ್ಲಿ ಬರುತ್ತವೆ.
ಇಂದು ಕೆಎಂಎಫ್ ಚುನಾವಣೆ: ಬಾಲಚಂದ್ರ ಜಾರಕಿಹೊಳಿ ಆಯ್ಕೆ ಖಚಿತ
ಬಾಲಚಂದ್ರ ಜಾರಕಿಹೊಳಿ ಕೆಎಂಎಫ್ ಅಧ್ಯಕ್ಷ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ